»   » 'ಕಿರಿಕ್' ಹುಡುಗಿ ರಶ್ಮಿಕಾ ಅಭಿಮಾನಿಗಳಿಂದ ಹೊಸ ಹೆಜ್ಜೆ

'ಕಿರಿಕ್' ಹುಡುಗಿ ರಶ್ಮಿಕಾ ಅಭಿಮಾನಿಗಳಿಂದ ಹೊಸ ಹೆಜ್ಜೆ

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಚಿತ್ರದ ನಂತರ ನಟಿ ರಶ್ಮಿಕಾ ಮಂದಣ್ಣ ಲುಕ್ ಗೆ ಅದೇಷ್ಟೋ ಜನ ಅಭಿಮಾನಿಗಳಾದರು. 'ಸಾನ್ವಿ' ಮೇಲೆ ಕ್ರಶ್ ಆಯ್ತು ಅಂತ ವಾಟ್ಸಾಪ್, ಫೇಸ್ ಬುಕ್ ನಲ್ಲಿ ಸ್ಟೇಟಸ್ ಗಳು ಹಾಕ್ಕೊಂಡ್ರು.

ಈಗ ತುಮಕೂರಿನಲ್ಲಿ ರಶ್ಮಿಕಾ ಅವರ ಅಭಿಮಾನಿಗಳೆಲ್ಲ ಸೇರಿ ಅಧಿಕೃತವಾಗಿ ಸಂಘ ಸ್ಥಾಪನೆ ಮಾಡಿದ್ದಾರೆ. ರಶ್ಮಿಕಾ ಅವರ ಅಭಿನಯ ಮತ್ತು ನೋಟಕ್ಕೆ ಮರುಳಾದ ಕೆಲವು ಯುವಕರು ಒಟ್ಟುಗೂಡಿ 'ಕಿರಿಕ್ ಹುಡುಗಿ ರಶ್ಮಿಕಾ ಫ್ಯಾನ್ಸ್ (ರಿ)' ಹೆಸರಿನಲ್ಲಿ ಸಂಘ ಹುಟ್ಟು ಹಾಕಿದ್ದಾರೆ.

Rashmika mandanna fans association tumkur

ಸದ್ಯ, ರಶ್ಮಿಕಾ ಅಭಿನಯದ 'ಚಮಕ್' ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಅದಕ್ಕು ಮುಂಚೆ ಪುನೀತ್ ಜೊತೆಯಲ್ಲಿ ಅಭಿನಯಿಸಿದ್ದ 'ಅಂಜನಿಪುತ್ರ' ಚಿತ್ರವೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಇನ್ನು ಮತ್ತೊಂದೆಡೆ ತೆಲುಗಿನ 'ಚಲೋ' ಚಿತ್ರದಲ್ಲೂ ರಶ್ಮಿಕಾ ಅಭಿನಯಿಸಿದ್ದು, ಈಗಾಗಲೇ ರಶ್ಮಿಕಾ ಲುಕ್ ಗೆ ತೆಲುಗು ಮಂದಿ ಕೂಡ ಫಿದಾ ಆಗಿದ್ದಾರೆ. ಮತ್ತೆರೆಡು ತೆಲುಗು ಚಿತ್ರಗಳಲ್ಲಿಯೂ ರಶ್ಮಿಕಾ ಅಭಿನಯಿಸುವ ಅವಶ್ಯಕತೆ ಇದೆ.

English summary
Tumkur fans are establish fans association of Kannada actress Rashmika mandanna

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X