»   » ಎಂಗೇಜ್ ಮೆಂಟ್ ದಿನ ರಕ್ಷಿತ್ ಶೆಟ್ಟಿಗೆ ಸಿಕ್ಕಿದ ಗಿಫ್ಟ್ ಏನು?

ಎಂಗೇಜ್ ಮೆಂಟ್ ದಿನ ರಕ್ಷಿತ್ ಶೆಟ್ಟಿಗೆ ಸಿಕ್ಕಿದ ಗಿಫ್ಟ್ ಏನು?

Posted By:
Subscribe to Filmibeat Kannada

'ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಲವ್ ಸ್ಟೋರಿ ಶುರುವಾದಗನಿಂದಲೂ ಪರಸ್ಪರ ಇಬ್ಬರ ಮಧ್ಯೆ ಉಡುಗೊರೆಗಳ ಸಂಖ್ಯೆ ಕೂಡ ಹೆಚ್ಚಾಗಿತ್ತಂತೆ. ಭಾವಿ ಅಳಿಯನ ಹುಟ್ಟುಹಬ್ಬಕ್ಕೆ ರಶ್ಮಿಕಾ ಅವರ ತಂದೆ ವಿಶೇಷವಾದ ಉಡುಗೊರೆ ನೀಡಿದ್ದರು. ಇನ್ನು ರಕ್ಷಿತ್ ಬರ್ತ್ ಡೇಗೆ ರಶ್ಮಿಕಾ ಅವರ ಕೂಡ ಬರೋಬ್ಬರಿ 20 ಗಿಫ್ಟ್ ಕೊಟ್ಟಿದ್ದರಂತೆ.

ಇನ್ನು ರಶ್ಮಿಕಾ ಕಡೆಯಿಂದ ಇಷ್ಟೆಲ್ಲಾ ಬಂದ್ಮೇಲೆ ರಕ್ಷಿತ್ ಶೆಟ್ಟಿ ಏನಾದರೂ ಕೊಟ್ಟಿರಬೇಕು ಅಲ್ವಾ...! ಹೌದು, ರಶ್ಮಿಕಾ ಅವರ ಹುಟ್ಟುಹಬ್ಬಕ್ಕೆ ರಕ್ಷಿತ್ ಶೆಟ್ಟಿ ಕೂಡ ಸ್ಪೆಷಲ್ ಗಿಫ್ಟ್ ಆಗಿ ಕೊಟ್ಟಿದ್ದರಂತೆ.

ಈ ಎಲ್ಲಾ ಉಡುಗೊರೆಗಳ ಮಧ್ಯೆ ಎಂಗೇಜ್ ಮೆಂಟ್ ದಿನ ಸಿಕ್ಕಿದ ಗಿಫ್ಟ್ ಗಳು ನೂರ್ಕಾಲ ನೆನಪಿನಲ್ಲಿ ಉಳಿಯುತ್ತೆ. ಹಾಗಿದ್ರೆ, ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಿಶ್ಚಿತಾರ್ಥದ ದಿನ ನವಜೋಡಿಗಳಿಗೆ ಸಿಕ್ಕಿದ ಉಡುಗೊರೆಗಳೇನು? ಮುಂದೆ ಓದಿ....

ರಕ್ಷಿತ್ ಶೆಟ್ಟಿಗೆ ಸಿಕ್ಕ ಗಿಫ್ಟ್?

ಜುಲೈ 3 ರಂದು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ನೆರವೇರಿತು. ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವಿ ಅಳಿಯನಿಗೆ ರಶ್ಮಿಕಾ ಕುಟುಂಬದಿಂದ 'ಚಿನ್ನದ ಸರ' ಉಡುಗೊರೆಯಾಗಿ ಸಿಕ್ಕಿದೆ.

'ಹೃದಯದ ಒಡತಿ' ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಕೊಟ್ಟ 'ಒಲವಿನ ಉಡುಗೊರೆ' ಏನು.?

ರಶ್ಮಿಕಾಗೆ ಸಿಕ್ಕ ಉಡುಗೊರೆ

ಇನ್ನು ಭಾವಿ ಸೊಸೆ ರಶ್ಮಿಕಾ ಅವರಿಗೆ ರಕ್ಷಿತ್ ಶೆಟ್ಟಿ ಕುಟುಂದ ಕಡೆಯಿಂದ ರೇಷ್ಮೆ ಸೀರೆ ಮತ್ತು ನೆಕ್ಲೆಸ್ ಗಿಫ್ಟ್ ಆಗಿ ಸಿಕ್ಕಿದೆ.

ಭಾವಿ ಸೊಸೆಗೆ ರಕ್ಷಿತ್ ಶೆಟ್ಟಿ ತಾಯಿಯ ಸ್ಪೆಷಲ್ ಉಡುಗೊರೆ ಏನು?

ರಕ್ಷಿತ್ ಹುಟ್ಟುಹಬ್ಬಕ್ಕೆ ಸಿಕ್ಕಿತ್ತು ಭರ್ಜರಿ ಗಿಫ್ಟ್

ಮದುವೆಗೂ ಮುಂಚೆ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ರಶ್ಮಿಕಾ ಮಂದಣ್ಣ ಅವರ ತಂದೆ ಕೈಗೆ 'ಕಡಗ'ವನ್ನ ಉಡುಗೊರೆಯಾಗಿ ನೀಡಿದ್ದರು.

ಭಾವಿ ಅಳಿಯ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕೊಟ್ಟ ದುಬಾರಿ ಉಡುಗೊರೆ ಏನ್ಗೊತ್ತೇ.?

ಗಿಫ್ಟ್ ವಿಚಾರದಲ್ಲೂ 'ಕಿರಿಕ್ ಜೋಡಿ' ಸ್ಪೆಷಲ್

ಇನ್ನು ಕಳೆದ ವರ್ಷ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ರಶ್ಮಿಕಾ ಅವರು ಬರೋಬ್ಬರಿ 20 ಗಿಫ್ಟ್ ನೀಡಿದ್ದರಂತೆ. ನಂತರ ರಶ್ಮಿಕಾ ಅವರ ಹುಟ್ಟುಹಬ್ಬಕ್ಕೆ ರಕ್ಷಿತ್ ಶೆಟ್ಟಿ ಉಂಗುರವನ್ನ ಗಿಫ್ಟ್ ಆಗಿ ನೀಡಿದ್ದರು.

ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ 'ಕಿರಿಕ್ ಜೋಡಿ' ಅದ್ಧೂರಿ ನಿಶ್ಚಿತಾರ್ಥ

English summary
Kannada Actress Rashmika Mandanna Father Give Engagement Gift to Rakshith Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada