For Quick Alerts
  ALLOW NOTIFICATIONS  
  For Daily Alerts

  ಅಂತೆ ಕಂತೆ ನಿಜವಾಯ್ತು: ಕಾರ್ತಿ ಜೊತೆ ರಶ್ಮಿಕಾ ಸಿನಿಮಾ ಶುರುವಾಯ್ತು

  |

  ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಹೆಚ್ಚು ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಕನ್ನಡ ಮತ್ತು ತೆಲುಗು ಅಭಿಮಾನಿಗಳನ್ನು ರಂಜಿಸಿರುವ ರಶ್ಮಿಕಾ ಈಗ ಕಾಲಿವುಡ್ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ.

  ಹೌದು, ಕನ್ನಡದ ಸಾನ್ವಿ ಈಗ ಕಾಲಿವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಸೌತ್ ಸಿನಿ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ, ನಿಧಾನವಾಗಿ ಒಂದೊಂದೆ ಇಂಡಸ್ಟ್ರಿಗೆ ಕಾಲಿಡುತ್ತಾ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಸದ್ಯ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಮಂದಣ್ಣ, ನಟ ಕಾರ್ತಿ ಜೊತೆ ರೋಮ್ಯಾನ್ಸ್ ಮಾಡುತ್ತಿದ್ದಾರೆ.

  ಕನ್ನಡಕ್ಕೆ ಬಂದ ವಿಜಯ್ ದೇವರಕೊಂಡ: ರಶ್ಮಿಕಾ ಮಂದಣ್ಣ ನಾಯಕಿ.!

  ಈಗಾಗಲೇ ತೆಲುಗಿನ ಮೂರು ಚಿತ್ರಗಳು ರಶ್ಮಿಕಾ ಬಳಿ ಇವೆ. ಇದರ ಜೊತೆಗೀಗ ತಮಿಳು ಅಭಿಮಾನಿಗಳನ್ನು ರಂಜಿಸಲು ತಮಿಳಿಗೆ ಕಾಲಿಟ್ಟಿರುವುದು ಕುತೂಹಲ ಮೂಡಿಸಿದೆ. ಈ ಹಿಂದೆಯೆ ರಶ್ಮಿಕಾ ಕಾಲಿವುಡ್ ನಲ್ಲಿ ಅಭಿನಯಿಸುತ್ತಾರೆ, ನಟ ವಿಜಯ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದ್ರೆ, ಅದೆಲ್ಲ ವದಂತಿ ಅಷ್ಟೆ. ಈಗ ಅಧಿಕೃತವಾಗಿ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು, ಈ ಬಗ್ಗೆ ಸ್ವತಃ ರಶ್ಮಿಕಾ ಅವರೇ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ.

  'ಯಜಮಾನ'ನ ಜೊತೆ ಮಿಂಚುತ್ತಿದೆ ಯುವರಾಣಿ ರಶ್ಮಿಕಾ ಕಟೌಟ್

  ರಶ್ಮಿಕಾ ಮತ್ತು ನಟ ಕಾರ್ತಿ ಅಭಿನಯದ ಹೊಸ ಚಿತ್ರದ ಮುಹೂರ್ತ ಇಂದು ಅದ್ಧೂರಿಯಾಗಿ ನೆರವೇರಿದೆ. ಮುಹೂರ್ತದ ಒಂದಿಷ್ಟು ಫೋಟೋಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ ರಶ್ಮಿಕಾ. ಜೊತೆಗೆ 'ಕಾಲಿವುಡ್ ವುಡ್ ಸಿನಿಮಾದಲ್ಲಿ ಮಾಡುವಂತೆ ಅಭಿಮಾನಿಗಳು ಕೇಳಿಕೊಂಡಿದ್ದರು. ಆ ಸಮಯ ಈಗ ಬಂದಿದೆ' ಎಂದು ಬರೆದುಕೊಂಡಿದ್ದಾರೆ.

  ಅಂದ್ಹಾಗೆ ರಶ್ಮಿಕಾ ಮೊದಲ ತಮಿಳು ಚಿತ್ರಕ್ಕೆ ಭಾಗ್ಯರಾಜ್ ಕಣ್ಣನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಶಿವಕಾರ್ತಿಕೇಯನ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಕಣ್ಣನ್ ಈಗ ಕಾರ್ತಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಶ್ಮಿಕಾ ಮತ್ತು ಕಾರ್ತಿ ಸಿನಿಮಾದ ಬಗ್ಗೆ ಹೆಚ್ಚೇನು ಮಾಹಿತಿ ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಹಾಗಾಗಿ ರಶ್ಮಿಕಾ ಪಾತ್ರದ ಬಗ್ಗೆ ಹೆಚ್ಚು ಕುತೂಹಲ ಮೂಡಿಸಿದೆ.

  ಚಲೋ ಮತ್ತು ಗೀತಾ ಗೋವಿಂದಂ ಸಿನಿಮಾ ಮೂಲಕ ತೆಲುಗು ಮಾತ್ರವಲ್ಲದೆ ತಮಿಳು ಅಭಿಮಾನಿಗಳ ಹೃದಯ ಗೆದ್ದಿದ್ರು ರಶ್ಮಿಕಾ. ಇದೀಗ ತಮಿಳಿನಲ್ಲಿ ರಶ್ಮಿಕಾ ಸಿನಿಮಾ ಮಾಡ್ತಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

  English summary
  Kannada actres rashmika mandanna to make her tamil debut with actor karthi. the movie has launched officially today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X