For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ನಿಂದ ದೂರ ಉಳಿದ ರಶ್ಮಿಕಾ: ಅಭಿಮಾನಿಗಳಿಂದ 'ಮತ್ತೆ ಬನ್ನಿ ರಶ್ಮಿಕಾ' ಟ್ರೆಂಡ್

  |

  ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವ ನಟಿ ಅಭಿಮಾನಿಗಳಿಗೆ ಪ್ರತಿ ಸಿನಿಮಾದ ಅಪ್ ಡೇಟ್ ನೀಡುತ್ತ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಆದರೆ ರಶ್ಮಿಕಾ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

  ಪ್ರತಿದಿನ ಅಪ್ ನೀಡುತ್ತ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ರಶ್ಮಿಕಾ ದಿಢೀರನೆ ಟ್ವಿಟ್ಟರ್ ನಿಂದ ಮಾಯವಾಗಿದ್ದಾರೆ. ಎಷ್ಟೇ ಟ್ರೋಲ್ ಮಾಡಿದರು ತಲೆಕೆಡಿಕೊಳ್ಳದ ರಶ್ಮಿಕಾ ಈಗ ಟ್ವಿಟ್ಟರ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಶ್ಮಿಕಾ ಟ್ವಿಟ್ಟರ್ ನಿಂದ ಮಾಯವಾಗಲು ಕಾರಣ ಪಾಸ್ ವರ್ಡ್ ಮರೆತಿರುವುದಂತೆ. ಮುಂದೆ ಓದಿ..

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಸಂತಸದ ಸುದ್ದಿ: ಪೊಗರು ರಿಲೀಸ್ ಡೇಟ್ ಬಹಿರಂಗಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಸಂತಸದ ಸುದ್ದಿ: ಪೊಗರು ರಿಲೀಸ್ ಡೇಟ್ ಬಹಿರಂಗ

  ಟ್ವಿಟ್ಟರ್ ಪಾಸ್ ವರ್ಡ್ ಮರೆತ ರಶ್ಮಿಕಾ

  ಟ್ವಿಟ್ಟರ್ ಪಾಸ್ ವರ್ಡ್ ಮರೆತ ರಶ್ಮಿಕಾ

  ಕಿರಿಕ್ ಸುಂದರಿ ರಶ್ಮಿಕಾ ಟ್ವಿಟ್ಟರ್ ನಿಂದ ದೂರ ಉಳಿದಿದ್ದಾರೆ. ಸದಾ ಆಕ್ವೀವ್ ಆಗಿದ್ದ ರಶ್ಮಿಕಾ ಟ್ವಿಟ್ಟರ್ ನಿಂದ ಮಾಯವಾಗಿದ್ದು ನೋಡಿ ಅಭಿಮಾನಿಳು ತಲೆಕೆಡಿಸಿಕೊಂಡಿದ್ದರು. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ರಶ್ಮಿಕಾ ಟ್ವಿಟ್ಟರ್ ಪಾಸ್ ವರ್ಡ್ ಮರೆತಿದ್ದಾರಂತೆ. ಹಾಗಾಗಿ ರಶ್ಮಿಕಾ ಕಳೆದ ಒಂದು ವಾರದಿಂದ ಟ್ವಿಟ್ಟರ್ ಅನ್ನು ಬಳಸುತ್ತಿಲ್ಲ. ಕೊನೆಯದಾಗಿ ರಶ್ಮಿಕಾ ಮಾರ್ಚ್ 7ಕ್ಕೆ ಟ್ವಿಟ್ಟರ್ ನಲ್ಲಿ ಅಪ್ ಡೇಟ್ ಮಾಡಿದ್ದಾರೆ. ಆ ನಂತರ ರಶ್ಮಿಕಾ ಯಾವುದೆ ಪೋಸ್ಟ್ ಗಳನ್ನು ಮಾಡಿಲ್ಲ.

  ಪ್ಯೂರ್ ವೆಜಿಟೇರಿಯನ್ ಆಗಿ ಬದಲಾಗಿದ್ದಾರಂತೆ ರಶ್ಮಿಕಾ ಮಂದಣ್ಣ: ಕಾರಣ ಇದು...ಪ್ಯೂರ್ ವೆಜಿಟೇರಿಯನ್ ಆಗಿ ಬದಲಾಗಿದ್ದಾರಂತೆ ರಶ್ಮಿಕಾ ಮಂದಣ್ಣ: ಕಾರಣ ಇದು...

  ಅಭಿಮಾನಿಗಳಿಂದ ಟ್ರೆಂಡಿಂಗ್

  ಅಭಿಮಾನಿಗಳಿಂದ ಟ್ರೆಂಡಿಂಗ್

  ರಶ್ಮಿಕಾ ಟ್ವಿಟ್ಟರ್ ಬಳಸುತ್ತಿಲ್ಲ, ಒಂದು ವಾರದ ಮೇಲಾಗಿ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ComebackRashmika ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ರೆಂಡ್ ಮಾಡಿ ಬೇಸರ ಹೊರಹಾಕುತ್ತಿದ್ದಾರೆ.

  ನೀವಿಲ್ಲದೆ ಇರುವ ಟ್ವಿಟ್ಟರ್ ಟ್ವಿಟ್ಟರ್ ಅಲ್ಲ

  ನೀವಿಲ್ಲದೆ ಇರುವ ಟ್ವಿಟ್ಟರ್ ಟ್ವಿಟ್ಟರ್ ಅಲ್ಲ

  ನೀವಿಲ್ಲದೆ ಇರುವ ಟ್ವಿಟ್ಟರ್ ಟ್ವಿಟ್ಟರ್ ಅಲ್ಲ. ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೀವಿ. ನಿಮ್ಮ ನೋಟಿಫಿಕೇಶನ್ ಕೂಡ ಮಿಸ್ ಮಾಡಿಕೊಳ್ಳುತ್ತಿದ್ದೀವಿ. ನಿಮ್ಮ ಸೆಲ್ಫಿ, ನಿಮ್ಮ ಟ್ವೀಟ್ ಎಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದೀವಿ" ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

  ನನ್ನ ಜೀವನದ ಸಂತೋಷ ಅಂದರೆ ನೀವು

  ನನ್ನ ಜೀವನದ ಸಂತೋಷ ಅಂದರೆ ನೀವು

  "ಮಿಸ್ಸಿಂಗ್ ಯು ರಶ್ಮಿಕಾ. ಪ್ರತಿ ದಿನ ಪ್ರತಿ ನಿಮಿಷ ಪ್ರತಿ ಸೆಟೆಂಡ್ ನಿಮ್ಮನ್ನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಜೀವನದ ಸಂತೋಷ ಅಂದರೆ ನೀವು. ನಿಮ್ಮನ್ನು ಪ್ರೀತಿಸುತ್ತೇನೆ. ದಯವಿಟ್ಟು ಮತ್ತೆ ವಾಪಸ್ ಬನ್ನಿ"ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾರೆ.

  ಇಳಯದಳಪತಿ ವಿಜಯ್ ಮುಂದಿನ ಸಿನಿಮಾಗೆ ನಾಯಕಿ ರಶ್ಮಿಕಾ ಅಲ್ಲ, ಪೂಜಾ ಹೆಗಡೆ?ಇಳಯದಳಪತಿ ವಿಜಯ್ ಮುಂದಿನ ಸಿನಿಮಾಗೆ ನಾಯಕಿ ರಶ್ಮಿಕಾ ಅಲ್ಲ, ಪೂಜಾ ಹೆಗಡೆ?

  ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ

  ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ

  ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಹೆಸರಿಡದ ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಮಿಂಚುತ್ತಿದ್ದಾರೆ. ಜತೆಗೆ ತಮಿಳಿನ ಸುಲ್ತಾನ್ ಸಿನಿಮಾದಲ್ಲಿಯೂ ಕಾಣಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಪೊಗರು ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ.

  English summary
  Actress Rashmika Mandanna forgets her twitter password. Fans are trending comebackrashmika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X