'ಚಲೋ' ಚಿತ್ರದಲ್ಲಿ ರಶ್ಮಿಕಾ ಮೋಡಿಗೆ ತೆಲುಗು ಪ್ರೇಕ್ಷಕರು ಬೌಲ್ಡ್
'ಕಿರಿಕ್' ಸುಂದರಿ ರಶ್ಮಿಕಾ ಮಂದಣ್ಣ ಅಭಿನಯದ ಕನ್ನಡ ಸಿನಿಮಾಗಳು ಯಶಸ್ವಿಯಾಗಿದ್ದು ಎಲ್ಲರಿಗೂ ಗೊತ್ತಿದೆ. 'ಕಿರಿಕ್ ಪಾರ್ಟಿ', 'ಅಂಜನಿಪುತ್ರ' ಮತ್ತು 'ಚಮಕ್' ಚಿತ್ರಗಳಲ್ಲಿ ರಶ್ಮಿಕಾ ಮೋಡಿ ಮಾಡಿದ್ದ ರಶ್ಮಿಕಾ ಈಗ ತೆಲುಗು ನಾಡಿನಲ್ಲೂ ಹೊಸ ಅಧ್ಯಾಯ ಆರಂಭಿಸಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಮೂಲಕವೇ ಅಲ್ಲಿನ ಪ್ರೇಕ್ಷಕರ ಹೃದಯಕ್ಕೂ ನಗುವಿನ ಬಾಣ ಬಿಟ್ಟಿದ್ದಾರೆ.
ಹೌದು, ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ತೆಲುಗು ಸಿನಿಮಾ 'ಚಲೋ' ತೆರೆಕಂಡಿದೆ. ನಾಗಾಶೌರ್ಯ ಅಭಿನಯದ ಈ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿದ್ದಾರೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಕರ್ನಾಟಕದ ಕ್ರಶ್ ರಶ್ಮಿಕಾ ಅವರಿಗೆ ಫುಲ್ ಮಾರ್ಕ್ಸ್ ಕೊಟ್ಟು, ಟಾಲಿವುಡ್ ಗೆ ಸ್ವಾಗತ ಎನ್ನುತ್ತಿದ್ದಾರೆ.
ರಶ್ಮಿಕಾ ಅವರ ಅಂದ-ಚೆಂದ ಹಾಗೂ ಅಭಿನಯ ಕಂಡು ಫಿದಾ ಆಗಿದ್ದಾರೆ. ಕನ್ನಡದ ಹುಡುಗಿಯನ್ನ ನಮ್ಮ ಹುಡುಗಿಯೆಂಬಂತೆ ಖುಷಿ ವ್ಯಕ್ತಪಡಿಸಿದ್ದಾರೆ. ಕಾಲೇಜು ಹುಡುಗಿ ಪಾತ್ರ ನಿರ್ವಹಿಸಿರುವ ರಶ್ಮಿಕಾ, ಕಿರಿಕ್ ಪಾರ್ಟಿ ಚಿತ್ರದಂತೆ ಕಂಗೊಳಿಸಿದ್ದಾರೆ.

ತಮಿಳಿನ ಹುಡುಗಿ ಮತ್ತು ತೆಲುಗು ಹುಡುಗನ ಪ್ರೇಮಕಥೆಯೇ ಚಲೋ. ಗಡಿನಾಡಿನಲ್ಲಿ ತೆಲುಗು ಜನ ಮತ್ತು ತಮಿಳುನ ಜನ ಬಾರ್ಡರ್ ಹಾಕ್ಕೊಂಡು ದ್ವೇಷದಿಂದ ಜೀವನ ನಡೆಸುತ್ತಿರುತ್ತಾರೆ. ಇದರ ಮಧ್ಯೆ ತೆಲುಗು ಹುಡುಗ ನಾಗಾಶೌರ್ಯ, ತಮಿಳು ಹುಡುಗಿ ರಶ್ಮಿಕಾ ಅವರನ್ನ ಲವ್ ಮಾಡ್ತಾನೆ. ಹೇಗೆ ಈ ಎರಡು ಜನಾಂಗವನ್ನ ಎದುರಿಸಿ ಮದುವೆ ಆಗ್ತಾರೆ ಎಂಬುದು 'ಚಲೋ' ಚಿತ್ರದ ಕಥೆ.


Click it and Unblock the Notifications











