Rashmika Mandanna: ರಶ್ಮಿಕಾಗೆ ಇನ್ನೂ ಬುದ್ಧಿ ಕಲಿಸಿಲ್ಲವೆಂದ್ರೆ ಅಪಾಯ ಎಂದ ನೆಟ್ಟಿಗರು!
ರಶ್ಮಿಕಾ ಮಂದಣ್ಣ ಹುಟ್ಟಿ ಬೆಳೆದಿದ್ದು ಎಲ್ಲವೂ ಕರ್ನಾಟಕದಲ್ಲಿ. ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಸಿನಿಮಾ ಕೆರಿಯರ್ ಆರಂಭಿಸಿದ್ದರು. ರಕ್ಷಿತ್ ಶೆಟ್ಟಿ ಜೊತೆ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟಿಸಿ ಒಂದೇ ಸಿನಿಮಾದಿಂದ ಹೆಸರುವಾಸಿಯಾದ ಇವರು, ನಂತರ ಕರ್ನಾಟಕ ಕ್ರಶ್ ಅಂತಲೂ ಫೇಮಸ್ ಆದರು.
ಕನ್ನಡದ್ದೇ ಸಿನಿಮಾ 'ಚಮಕ್', 'ಅಂಜನಿಪುತ್ರ', 'ಯಜಮಾನ' ಸಿನಿಮಾದಲ್ಲಿ ನಟಿಸಿ ಪರಭಾಷೆಗೆ ಹಾರಿದ ರಶ್ಮಿಕಾ ಜನಪ್ರಿಯತೆ ಪಡೆದಿದ್ದಾರೆ. ಸಿನಿಮಾದಷ್ಟೇ ಜೋರಾಗಿ ಟ್ರೋಲ್ ಕೂಡ ಆಗ್ತಿದ್ದಾರೆ. ಕನ್ನಡಿಗರಿಂದಲೇ ಹೆಚ್ಚು ಟ್ರೋಲ್‌ಗೆ ಒಳಗಾಗುತ್ತಿರುವ ರಶ್ಮಿಕಾ ಮಾತ್ರ ಅದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.
ಕನ್ನಡಿಗರನ್ನು ,ಸಿನಿಮಾ ಇಂಡಸ್ಟ್ರಿಯನ್ನು ಹೆಚ್ಚಾಗಿ ಕಡೆಗಣಿಸಿರುವ ರಶ್ಮಿಕಾ ಇದೀಗ ಮತ್ತೊಂದು ವಿಚಾರಕ್ಕೆ ಕನ್ನಡಿಗರ ಕೆಂಗಂಣ್ಣಿಗೆ ಗುರಿಯಾಗಿದ್ದಾರೆ. ರಶ್ಮಿಕಾಗೆ ಬುದ್ಧಿ ಕಲಿಸುವ ಸಮಯ ಹತ್ತಿರದಲ್ಲೇ ಇದೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಆಗಿರೋದು ಏನು ಬನ್ನಿ ನೋಡೋಣ.

ನೆಟ್ಟಿಗರ ಆಕ್ರೋಶಕ್ಕೆ ಕಾರಣ ಏನು ಗೊತ್ತಾ?
ರಶ್ಮಿಕಾ ಮಂದಣ್ಣ ಬಗ್ಗೆ ಅದೆಷ್ಟು ಟ್ರೋಲ್ ಮಾಡಿದ್ರು, ಅದೆಷ್ಟು ಕ್ಲಾಸ್ ತೆಗೆದುಕೊಂಡ್ರು ಲಕ್ ಅನ್ನೋದು ಅವರ ಕೈ ಹಿಡಿದಿದೆ ಅನ್ನಿಸುತ್ತೆ. ಎಷ್ಟೇ ನೆಗೆಟಿವ್ ಆಗಿ ಟ್ರೋಲ್ ಆದ್ರು ಕೂಡ ಸಿನಿಮಾ ದಲ್ಲಿ ಹೆಚ್ಚೆಚ್ಚು ಅವಕಾಶಗಳನ್ನು ಪಡೆಯುವ ಮೂಲಕ ಮತ್ತಷ್ಟು ಹಿಗ್ಗುತ್ತಿದ್ದಾರೆ. ಅದೆಲ್ಲಾ ಏನೇ ಇರಲಿ. ನಮ್ಮದು, ನಮ್ಮರು ಅಂತ ಬಂದಾಗ ನಾವು ಯಾವತ್ತೂ ನಮ್ಮ ತನವನ್ನು, ನಮ್ಮ ಜನರನ್ನು ಮರೆಯೋದಿಲ್ಲ. ಆದರೆ ರಶ್ಮಿಕಾಗೆ ನಿಯತ್ತೇ ಇಲ್ಲ ಎಂದು ನೆಟ್ಟಿಗರು ಜಾಡಿಸುತ್ತಿದ್ದಾರೆ.

ರಶ್ಮಿಕಾಗೆ ಇಷ್ಟೊಂದು ದೌಲತ್ತಾ ಎಂದು ಪ್ರಶ್ನೆ?
ನಿನ್ನೆಯಷ್ಟೆ(ಮಾರ್ಚ್ 17) ರಂದು ನಟ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಜೊತೆಗೆ ಅವರ ಅಭಿನಯದ ಕೊನೆ ಸಿನಿಮಾ ಕೂಡ ರಿಲೀಸ್ ಆಗಿದೆ. ಅಪ್ಪು ಹುಟ್ಟುಹಬ್ಬದ ಜೊತೆಗೆ 'ಜೇಮ್ಸ್' ಸಿನಿಮಾಗೆ ಶುಭ ಕೋರಿ ಸ್ಟಾರ್ ಸೆಲೆಬ್ರೆಟಿಗಳು ಶುಭ ಹಾರೈಸಿದ್ದಾರೆ. ಅಪ್ಪು ಜೊತೆ ನಟಿಸಿರುವವರು, ನಟಿಸದೇ ಇರುವವರು ಸಾಮಾಜಿಕ ಜಾಲ ತಾಣದ ಮೂಲಕ ಶುಭ ಹಾರೈಸಿದ್ದಾರೆ. ಅಷ್ಟೇ ಯಾಕೆ ಅಪ್ಪು ಜೊತೆ ನಟಿಸದ ಅದೆಷ್ಟೋ ನಟಿಯರು ಕೂಡ ಅಪ್ಪು ಮೇಲಿನ ಅಭಿಮಾನಕ್ಕೆ ನೋವಿನಿಂದಲೇ ವಿಶ್ ಮಾಡಿದ್ದಾರೆ. ಆದರೆ, ಅಪ್ಪು ಜೊತೆ ನಟಿಸಿರುವ, ಕನ್ನಡದವರೇ ಆಗಿರುವ ನಟಿ ರಶ್ಮಿಕಾ ಮಂದಣ್ಣ ನನಗೂ ಅಪ್ಪುಗೂ ಪರಿಚಯನೇ ಇಲ್ಲ, 'ಜೇಮ್ಸ್' ಸಿನಿಮಾ ರಿಲೀಸ್ ಆಗ್ತಿರೋದಕ್ಕೂ ನನಗೂ ಸಂಬಂಧನೇ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ.

ಒಂಚೂರು ನಿಯತ್ತು ಇರ್ಬೇಕು ಎನ್ನುತ್ತಿರುವ ನೆಟ್ಟಿಗರು
ನಿನ್ನೆ(ಮಾರ್ಚ್ 17) ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಎಲ್ಲೆಡೆ ಅಪ್ಪು ಮಯವಾಗಿತ್ತು. 'ಅಂಜನಿಪುತ್ರ' ಸಿನಿಮಾದಲ್ಲಿ ಅಪ್ಪು ಜೊತೆ ನಟಿಸಿದ್ದ ನಟಿ ರಶ್ಮಿಕಾ ಮಂದಣ್ಣ ಮಾತ್ರ ನನಗೇನು ಗೊತ್ತೇ ಇಲ್ಲ ಎನ್ನುವಂತೆ ಕನಿಷ್ಠ ಪಕ್ಷ ಅವರೊಂದಿಗೆ ನಟಿಸಿರುವ ನಿಯತ್ತಿಗಾದ್ರೂ ಒಂದು ವಿಶ್ ಮಾಡಿಲ್ಲ. 'ಜೇಮ್ಸ್' ಚಿತ್ರದ ಬಗ್ಗೆ ಒಂದು ಪೋಸ್ಟ್ ಕೂಡ ಮಾಡಿಲ್ಲ. ಕರ್ನಾಟಕದವರೇ ಆಗಿ, ಕನ್ನಡ ಸಿನಿಮಾ ಮೂಲಕವೇ ಜನಪ್ರಿಯತೆ ಪಡೆದುಕೊಂಡು, ಈಗ ದೊಡ್ಡ ಮಟ್ಟದಲ್ಲಿ ಬೆಳೆದಿರುವ ರಶ್ಮಿಕಾಗೆ ಈಗಲಾದರೂ ಬುದ್ಧಿ ಕಲಿಸಲೇ ಬೇಕು ಎನ್ನುತ್ತಿದ್ದಾರೆ.

ಈಗಲಾದ್ರೂ ಬುದ್ಧಿ ಕಲಿಸಬೇಕು ಅನ್ನುತ್ತಿರುವ ಟ್ರೋಲರ್‌ಗಳು
ರಶ್ಮಿಕಾಗಿಂತ ಪರಭಾಷಾ ನಟಿಯರೇ ಎಷ್ಟೋ ಮೇಲು. ಯಾಕಂದ್ರೆ, ಈ ಹಿಂದೆ ಪುನೀತ್ ಅವರ 'ನಟಸಾರ್ವಭೌಮ' ಸಿನಿಮಾದಲ್ಲಿ ನಟಿಸಿದ್ದ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಮತ್ತು 'ಜೇಮ್ಸ್' ಚಿತ್ರದ ನಾಯಕಿ ಪ್ರಿಯಾ ಆನಂದ್ ಇವರಿಬ್ಬರೂ ಕನ್ನಡದವರೇ ಅಲ್ಲ. ಅಪ್ಪು ಜೊತೆ ನಟಿಸಿದ್ದಾರೆ ಅಷ್ಟೇ. ಹೀಗಿದ್ರೂ ಈ ಇಬ್ಬರು ಕೂಡ ಅಪ್ಪು ಸಾವಿನ ನಂತ್ರದಲ್ಲಿ ಸಾಕಷ್ಟು ಮಾತನಾಡಿದ್ದಾರೆ. 'ಜೇಮ್ಸ್' ಸಿನಿಮಾವನ್ನು ಪ್ರಿಯಾ ಆನಂದ್ ಫಸ್ಟ್ ಶೋವನ್ನು ವೀಕ್ಷಿಸಿ ಕಣ್ಣೀರು ಹಾಕಿದ್ದಾರೆ. ಇನ್ನು ಅನುಪಮಾ ಇವತ್ತಿಗೂ ಅಪ್ಪು ನೆನಪಲ್ಲೇ ಇದ್ದಾರೆ. ಆದರೆ ಕನ್ನಡದ್ದೇ ನೀರು ಕುಡಿದು ಬೆಳೆದಿರುವ ರಶ್ಮಿಕಾಗೆ ಈ ನಿಯತ್ತು ಅನ್ನೋದು ಇಲ್ವಾಲ್ಲ ಅಂತ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ. ಟ್ವಿಟ್ಟರ್‌ನಲ್ಲಿ ಜನರು ರಶ್ಮಿಕಾರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.


Click it and Unblock the Notifications











