»   » ರಶ್ಮಿಕಾ ಮಂದಣ್ಣ ಬಗ್ಗೆ ನೀವು ಕೇಳಿದ್ದೆಲ್ಲ ಸುಳ್ಳು ಸುದ್ದಿ, ನಂಬಬೇಡಿ!

ರಶ್ಮಿಕಾ ಮಂದಣ್ಣ ಬಗ್ಗೆ ನೀವು ಕೇಳಿದ್ದೆಲ್ಲ ಸುಳ್ಳು ಸುದ್ದಿ, ನಂಬಬೇಡಿ!

Posted By:
Subscribe to Filmibeat Kannada

ಯಶ್ ಅಭಿನಯದ 'ರಾಣಾ' ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಕೇಳಿ ಬಂದಿತ್ತು. ಈಗ ಯಶ್ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂಬ ಗುಸು ಗುಸು ಕೇಳಿಬಂದಿದೆ.

'ರಾಜಾಹುಲಿ'ಯ ಮುಂದಿನ ಚಿತ್ರಕ್ಕೆ 'ಕಿರಿಕ್' ರಶ್ಮಿಕಾ ರಾಣಿ.!

ರಶ್ಮಿಕಾ ಮಂದಣ್ಣ ಕುರಿತ ಈ ಸುದ್ದಿ ನಮ್ಮ ಕಿವಿಗೂ ಬಿತ್ತು. ಡೌಟ್ ಯಾಕೆ, ಕ್ಲಿಯರ್ ಮಾಡಿಕೊಳ್ಳೋಣ ಅಂತ ಈ ವಿಷಯದ ಬಗ್ಗೆ ರಶ್ಮಿಕಾ ಅವರಿಗೆ ಸಂಪರ್ಕ ಮಾಡಿದಾಗ ಸತ್ಯ ಗೊತ್ತಾಯ್ತು. ವಿವರ ಮುಂದಿದೆ ಓದಿರಿ....

ಡೇಟ್ ಪ್ಲಾಬಂ ಇಲ್ಲ

ಡೇಟ್ಸ್ ತೊಂದರೆಯಿಂದ ಯಶ್ ಸಿನಿಮಾವನ್ನು ರಶ್ಮಿಕಾ ಮಂದಣ್ಣ ನಿರಾಕರಿಸಿದ್ದಾರೆ ಎಂಬ ಸುದ್ದಿ ಸದ್ಯ ಗಾಂಧಿನಗರದಲ್ಲಿ ಹಬ್ಬಿದೆ. ಆದರೆ ''ಡೇಟ್ ಪ್ರಾಬ್ಲಂ ಖಂಡಿತ ಇಲ್ಲ..'' ಎಂಬ ಸತ್ಯವನ್ನ ರಶ್ಮಿಕಾ ಮಂದಣ್ಣ 'ಫಿಲ್ಮಿಬೀಟ್ ಕನ್ನಡ'ದ ಮೂಲಕ ಸ್ಪಷ್ಟವಾಗಿ ಹೇಳಿದ್ದಾರೆ.

ಇದು ರೂಮರ್

''ರಾಣಾ ಚಿತ್ರತಂಡದಿಂದ ನನಗೆ ಯಾವುದೇ ಕರೆ ಬಂದಿಲ್ಲ. ಪ್ರೊಡಕ್ಷನ್ ಕಡೆಯಿಂದ ಅಥವಾ ನಿರ್ದೇಶಕರ ಕಡೆಯಿಂದ ಚಿತ್ರದಲ್ಲಿ ನಟಿಸಿ ಅಂತ ಯಾರೂ ಸಂಪರ್ಕ ಮಾಡಿಲ್ಲ. ಇದೆಲ್ಲ ರೂಮರ್ಸ್'' - ರಶ್ಮಿಕಾ ಮಂದಣ್ಣ, ನಟಿ

'ಕಿರಿಕ್ ಬೆಡಗಿ' ರಶ್ಮಿಕಾ ಮಂದಣ್ಣ ವಿಭಿನ್ನ ಲುಕ್ ನೋಡಿ ಹೇಗಿದೆ

ಆಫರ್ ಬಂದಿಲ್ಲ

''ಸಿನಿಮಾದ ಆಫರ್ ಬಂದ ಮೇಲೆ ತಾನೇ ನಾನು ಡೇಟ್ಸ್ ಬಗ್ಗೆ ಮಾತನಾಡುವುದು. ಚಿತ್ರಕ್ಕೆ ಆಫರ್ ಬಂದಿಲ್ಲ ಅಂದರೆ ಡೇಟ್ಸ್ ಪ್ರಾಬ್ಲಂ ಹೇಗೆ ಆಗುತ್ತದೆ. ಇದು ಒಂದು ಮಿಸ್ ಅಂಡರ್ ಸ್ಟ್ಯಾಂಡಿಂಗ್ ಮತ್ತು ಗಾಸಿಪ್ ಅಷ್ಟೇ'' - ರಶ್ಮಿಕಾ ಮಂದಣ್ಣ, ನಟಿ

ನಿಶ್ಚಿತಾರ್ಥದ ನಂತರ ಮಂತ್ರಾಲಯಕ್ಕೆ ಭೇಟಿಕೊಟ್ಟ ರಕ್ಷಿತ್-ರಶ್ಮಿಕಾ

ಅವಕಾಶ ಸಿಕ್ಕರೆ ಖಂಡಿತ ಸಿನಿಮಾ ಮಾಡುತ್ತೇನೆ

''ಮುಂದೆ ಅವಕಾಶ ಸಿಕ್ಕರೆ ಖಂಡಿತ ಸಿನಿಮಾ ಮಾಡುತ್ತೇನೆ. ಯಶ್ ಸರ್ ಜೊತೆ ಯಾರಿಗೆ ನಟಿಸುವುದಕ್ಕೆ ಇಷ್ಟ ಇಲ್ಲ ಹೇಳಿ. ನಾನು ಅವರ ದೊಡ್ಡ ಫ್ಯಾನ್ಸ್ ಆಗಿ ಐ ವುಡ್ ಲವ್ ಟು ವರ್ಕ್ ವಿತ್ ಯಶ್ ಸರ್'' - ರಶ್ಮಿಕಾ ಮಂದಣ್ಣ, ನಟಿ

ರಕ್ಷಿತ್ ಶೆಟ್ಟಿ ಕನಸಿಗೆ ಕೈ ಜೋಡಿಸಿದ ಪುನೀತ್ ರಾಜ್ ಕುಮಾರ್

English summary
Kannada Actress Rashmika Mandanna gives clarity about Yash's 'Ranna' movie controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada