'ಐಪಿಎಲ್‌ನಲ್ಲೂ ಓವರ್ ಆಕ್ಟಿಂಗ್ ಮಾಡ್ತೀಯಲ್ಲವ್ವ ತಾಯಿ'; ದೊಡ್ಡ ವೇದಿಕೆ ಹತ್ತಿದ್ರೂ ರಶ್ಮಿಕಾ ಟ್ರೋಲ್!

Rashmika Mandanna got trolled after performing in IPL 2023 opening ceremony

ನಿನ್ನೆ ( ಮಾರ್ಚ್ 31 ) ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಅದ್ದೂರಿ ಚಾಲನೆ ದೊರೆಯಿತು. ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯರ್ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಪಂದ್ಯ ಜರುಗಿತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಗೆಲುವು ಸಾಧಿಸಿದವು.

ಈ ಪಂದ್ಯ ನಡೆಯುವದಕ್ಕೂ ಮುನ್ನ ದೊಡ್ಡದಾಗಿ ಇದೇ ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ಸಹ ನಡೆಯಿತು. ಸಂಜೆ ಆರು ಗಂಟೆಯಿಂದ ಏಳು ಹಂಟೆಯ ತನಕ ನಡೆದ ಈ ಕಾರ್ಯಕ್ರಮದಲ್ಲಿ ನಟಿಯರಾದ ತಮನ್ನಾ ಭಾಟಿಯಾ ಹಾಗೂ ರಶ್ಮಿಕಾ ಮಂದಣ್ಣ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಇನ್ನು ಗಾಯಕ ಹಾಗೂ ಸಂಯೋಜಕ ಅರಿಜಿತ್ ಸಿಂಗ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು‌. ತಮ್ಮ ಕೆಲ ಹಿಟ್ ಹಾಡುಗಳನ್ನು ಲೈವ್ ಕಾರ್ಯಕ್ರಮದಲ್ಲಿ ಹಾಡಿದ ಅರಿಜಿತ್ ಸಿಂಗ್ ಕ್ರೀಡಾಭಿಮಾನಿಗಳನ್ನು ಹಾಡುಗಳಿಗೆ ತಲೆದೂಗುವಂತೆ ಮಾಡಿದ್ದರು. ಅರಿಜಿತ್ ಸಿಂಗ್ ಹಾಡಿಗೆ ಎಂಎಸ್ ಧೋನಿ ಸಹ ಪ್ರೇಕ್ಷಕನಾಗಿ ಚೇರ್ ಮೇಲೆ ಕುಳಿತು ಹಾಡು ಕೇಳಿದ್ದರು.

ಇನ್ನು ಈ ಮೂವರ ಪ್ರದರ್ಶನಕ್ಕೂ ಸಹ ಸಾಮಾಜಿಕ‌ ಜಾಲತಾಣದಲ್ಲಿ ದೊಡ್ಡಮಟ್ಟದ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಈ ಮೂವರ ಪೈಕಿ ನಟಿ ರಶ್ಮಿಕಾ ಮಂದಣ್ಣ ಪ್ರದರ್ಶನಕ್ಕೆ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಹೌದು, ರಶ್ಮಿಕಾ ಮಂದಣ್ಣ ಡಾನ್ಸ್ ಬಗ್ಗೆ ಹಾಗೂ ಮಾತನಾಡಿದ ರೀತಿ ಬಗ್ಗೆ ಸಹ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗ್ತಿದೆ.

ಸಾಮಾನ್ಯವಾಗಿ ರಶ್ಮಿಕಾ ಮಂದಣ್ಣ ಎಂದರೆ ಕನ್ನಡಿಗರು ಕೋಪಗೊಳ್ತಾರೆ. ಇನ್ನು ಈ ಬಾರಿಯೂ ಸಹ ಅದೇ ನಡೆದಿದೆ. ಕನ್ನಡದ ಬಹುತೇಕ ಎಲ್ಲಾ ಟ್ರೋಲ್ ಪೇಜ್‌ಗಳೂ ಸಹ ರಶ್ಮಿಕಾ ಮಂದಣ್ಣಳನ್ನು ಟ್ರೋಲ್ ಮಾಡಿವೆ. ರಶ್ಮಿಕಾ ವೇದಿಕೆ ಮೇಲೆ ಮಾತನಾಡಿದ್ದನ್ನು ಟೀಕಿಸಿರುವ ಪೇಜ್‌ಗಳು ಓವರ್ಆಕ್ಟಿಂಗ್, ಇಂತಹ ವೇದಿಕೆ ಮೇಲೂ ಓವರ್ ಆಕ್ಟಿಗ್ ಮಾಡ್ತೀಯಲ್ಲವ್ವ ತಾಯಿ ಎಂದು ಕಿಡಿಕಾರಿದ್ದಾರೆ ಹಾಗೂ ಈಕೆಯನ್ನು ಆಯ್ಕೆ ಮಾಡಿದ ಮಹಾನುಭಾವ ಯಾರು ಎಂದು ಟೀಕಿಸಿದ್ದಾರೆ.

ಇನ್ನು ಇಷ್ಟು ದಿನಗಳ ಕಾಲ ಕೇವಲ ಕನ್ನಡದ ಟ್ರೋಲ್ ಪೇಜ್‌ಗಳ ಆಹಾರವಾಗಿದ್ದ ರಶ್ಮಿಕಾ ಮಂದಣ್ಣ ಈ ಪ್ರದರ್ಶನದಿಂದ ದೇಶದ ವಿವಿಧ ಭಾಷೆಯ ಟ್ರೋಲರ್‌ಗಳಿಂದಲೂ ಟೀಕೆಗೆ ಒಳಪಟ್ಟಿದ್ದಾರೆ. ತನ್ನ ಪ್ರದರ್ಶನ ಮುಗಿದ ಬಳಿಕ ಪ್ರದರ್ಶನ ನೀಡಿದ್ದರ ಬಗ್ಗೆ ಖುಷಿ ಹಂಚಿಕೊಂಡು ಪೋಸ್ಟ್ ಹಾಕಿರುವ ರಶ್ಮಿಕಾ ಮಂದಣ್ಣಗೆ ನಿನ್ನ ಪ್ರದರ್ಶನ ಸಾಮಾನ್ಯವಾಗಿತ್ತು ಅಷ್ಟೇ, ಅದ್ಭುತವಾಗಿ ಏನೂ ಇರಲಿಲ್ಲ, ನಿನಗಿಂತ ತಮನ್ನಾ ಪ್ರದರ್ಶನ ಚೆನ್ನಾಗಿತ್ತು ಎಂದು ಹಲವರು ಬರೆದುಕೊಂಡಿದ್ದಾರೆ.

ಇನ್ನೂ ಹಲವರು ಏನೋ ಇದೊಂದು ಬಾರಿ ಆಯ್ಕೆ ಮಾಡಿದ್ದಾಯಿತು, ನೀನು ಪ್ರದರ್ಶನ ನೀಡಿದ್ದರೂ ಆಯಿತು, ಆದ್ರೆ ಇನ್ನೊಮ್ಮೆ ಮಾತ್ರ ಪ್ರದರ್ಶನ ಮಾಡಲು ಒಪ್ಪಿಕೊಳ್ಳಬೇಡ ದಯವಿಟ್ಟು ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಹದಿನೈದು ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಕೆಟ್ಟ ಘಳಿಗೆ ಎಂದೂ ಸಹ ಕಾಲೆಳೆದಿದ್ದಾರೆ.

ಇನ್ನು ಪ್ರದರ್ಶನವೆಲ್ಲಾ ಮುಕ್ತಾಯವಾದ ನಂತರ ಫೋಟೊಗೆ ಪೋಸ್ ಕೊಡುವ ವೇಳೆ ನಟಿ ರಶ್ಮಿಕಾ ಮಂದಣ್ಣ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪಕ್ಕದಲ್ಲಿ ನಿಂತಿದ್ದರು. ಈ ವಿಷಯವನ್ನೂ ಸಹ ಟ್ರೋಲ್ ಮಾಡಿರುವ ನೆಟ್ಟಿಗರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೋಲಿಗೆ ಇದೇ ಕಾರಣ ಎಂದೂ ಸಹ ಮೀಮ್ಸ್ ಮಾಡಿದ್ದಾರೆ.

More from Filmibeat

English summary
Rashmika Mandanna got trolled after performing in IPL 2023 opening ceremony. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X