ಪ್ರಿನ್ಸ್ ಮಹೇಶ್ ಬಾಬುಗೆ ನಾಯಕಿಯಾದ ರಶ್ಮಿಕಾ ಮಂದಣ್ಣ?

ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಚಿತ್ರಪ್ರಿಯರ ನೆಚ್ಚಿನ ನಟಿ.

ಈಗಾಗಲೆ ಟಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಶ್ಮಿಕಾ, ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನ ಸೂಪರ್ ಸ್ಟಾರ್ಸ್ ಸಿನಿಮಾಗಳಲ್ಲಿ ರಶ್ಮಿಕಾ ಹೆಸರು ಕೇಳಿ ಬರುತ್ತಿದೆ.

ಹೌದು, ಟಾಲಿವುಡ್ ನಲ್ಲಿ ಯಾವುದೆ ಸ್ಟಾರ್ ನಟರ ಹೊಸ ಸಿನಿಮಾ ಸೆಟ್ಟೇರಿದ್ರು ನಾಯಕಿಯರ ಲಿಸ್ಟ್ ನಲ್ಲಿ ಕಿರಿಕ್ ಬೆಡಗಿಯ ಹೆಸರು ಮೊದಲಿರುತ್ತೆ. ಸದ್ಯ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ನಾಯಕಿಯಾಗಿ ರಶ್ಮಿಕಾ ಕಾಣಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ.

Rashmika Mandanna has been leading opposite Prince Mahesh Babu?

ಈ ಹಿಂದೆಯೆ ಮಹೇಶ್ ಬಾಬು ಜೊತೆ ರಶ್ಮಿಕಾ ಅಭಿನಯಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದ್ರೀಗ ಈ ಮಾತು ನಿಜ ಎನ್ನುತ್ತಿವೆ ಟಾಲಿವುಡ್ ಮೂಲಗಳು. ಹೌದು, ಮಹೇಶ್ ಬಾಬು ಅಭಿನಯದ 26ನೇ ಸಿನಿಮಾಗೆ ರಶ್ಮಿಕಾ ನಾಯಕಿಯಂತೆ. ಅನಿಲ್ ರವಿಪುಡಿ ನಿರ್ದೇಶನದ ಮಹೇಶ್ ಸಿನಿಮಾದಲ್ಲಿ ಕನ್ನಡತಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿವೆ.

ಇನ್ನು ಅದೇ ಸಿನಿಮಾಗೆ ಸೌತ್ ಸಿನಿ ಇಂಡಸ್ಟ್ರಿಯ ಮತ್ತೋರ್ವ ಖ್ಯಾತ ನಟಿ ಸಾಯಿ ಪಲ್ಲವಿ ಹೆಸರು ಕೂಡ ಕೇಳಿ ಬರುತ್ತಿದೆ. ಇಬ್ಬರಲ್ಲಿ ಯಾರು ಆಯ್ಕೆಯಾಗುತ್ತಾರೆ ಎನ್ನುವುದು ಸಧ್ಯದ ಕುತೂಹಲ. ಮಹೇಶ್ ಬಾಬು ಸದ್ಯ 'ಮಹರ್ಷಿ' ಸಿನಿಮಾದ ಸಕ್ಸಸ್ ನ ಸಂತಸದಲ್ಲಿದ್ದಾರೆ. ಇದೇ ಸಮಯದಲ್ಲಿ ಮಹೇಶ್ 26ನೇ ಸಿನಿಮಾದ ಕೂಡ ಭಾರಿ ಚರ್ಚೆಯಾಗುತ್ತಿದೆ.

ರಶ್ಮಿಕಾ ಬಳಿ ಸದ್ಯ ಕೈತುಂಬಾ ಸಿನಿಮಾಗಳಿವೆ. ಡೇಟ್ ಸಮಸ್ಯೆಯಾಗುವ ಸಾಧ್ಯತೆ ಕೂಡ ಇದೆಯಂತೆ. ಹಾಗಾಗಿ ಎಲ್ಲವನ್ನು ಸರಿದೂಗಿಸಿಕೊಂಡು ಪ್ರಿನ್ಸ್ ಜೊತೆ ರೋಮ್ಯಾನ್ಸ್ ಮಾಡ್ತಾರ ರಶ್ಮಿಕಾ ಎಂದು ಕಾದುನೋಡಬೇಕು.

More from Filmibeat

English summary
Kannada actres Rashmika Mandanna has been leading opposite Prince Mahesh Babu this rumors are going on in Tollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X