For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ಮಲ್ಟಿಸ್ಟಾರ್ ಸಿನಿಮಾದಲ್ಲಿ ಸ್ಥಾನ ಗಿಟ್ಟಿಸಿದ 'ಚಮಕ್' ಚಲುವೆ

  By Naveen
  |
  ಟಾಲಿವುಡ್ ಮಲ್ಟಿಸ್ಟಾರ್ ಸಿನಿಮಾದಲ್ಲಿ ಸ್ಥಾನ ಗಿಟ್ಟಿಸಿದ 'ಚಮಕ್' ಚಲುವೆ | Filmibeat Kannada

  ಕನ್ನಡದಲ್ಲಿ ಸದ್ಯ ಲಕ್ಕಿ ಸ್ಟಾರ್ ಆಗಿರುವ ನಟಿ ಅಂದರೆ ರಶ್ಮಿಕಾ ಮಂದಣ್ಣ. 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಸೈಲೆಂಟ್ ಆಗಿ ಇಂಡಸ್ಟ್ರಿಗೆ ಬಂದ ರಶ್ಮಿಕಾ ನಂತರ ಒಂದರ ನಂತರ ಒಂದರಂತೆ ಕನ್ನಡದ ಬಿಗ್ ಸ್ಟಾರ್ ಗಳ ಜೊತೆಗೆ ಸಿನಿಮಾ ಮಾಡಿದರು. ಮಾತ್ರವಲ್ಲದೆ ಟಾಲಿವುಡ್ ನಲ್ಲಿ ಕೂಡ ರಶ್ಮಿಕಾ ಸಿನಿಮಾ ಮಾಡಿ ಬಂದರು.

  ಭಾವಿ ಪತಿ ರಕ್ಷಿತ್ ಬಗ್ಗೆ 4 ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ರಶ್ಮಿಕಾ

  ರಕ್ಷಿತ್ ಶೆಟ್ಟಿ, ಪುನೀತ್ ರಾಜ್ ಕುಮಾರ್, ಗಣೇಶ್ ಬಳಿಕ ಇದೀಗ ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಆದರೆ ಅತ್ತ ತೆಲುಗಿನಲ್ಲಿಯೂ ಈ 'ಚಮಕ್' ಚಲುವೆ ದಿನೇ ದಿನೇ ಫೇಮಸ್ ಆಗುತ್ತಿದ್ದಾರೆ. 'ಚಲೋ' ಸಿನಿಮಾದ ಮೂಲಕ ತೆಲುಗಿನಲ್ಲಿ ಕೆರಿಯರ್ ಶುರು ಮಾಡಿದ್ದ ರಶ್ಮಿಕಾ ಈಗ ಮತ್ತೊಂದು ಹಂತ ತಲುಪಿದ್ದಾರೆ. ಮೊದಲ ಸಿನಿಮಾದಲ್ಲಿ ತಮ್ಮ ಲುಕ್ ಮತ್ತು ನಟನೆ ಮೂಲಕ ಹೈದರಾಬಾದ್ ಹೈದರ ಹೃದಯ ಕದಿದ್ದ ಕನ್ನಡಕದ ಹುಡುಗಿ ಸಾನ್ವಿ ಈಗ ದೊಡ್ಡ ಅವಕಾಶ ಪಡೆದಿದ್ದಾರೆ.

  'ಚಲೋ' ಚಿತ್ರದಲ್ಲಿ ರಶ್ಮಿಕಾ ಮೋಡಿಗೆ ತೆಲುಗು ಪ್ರೇಕ್ಷಕರು ಬೌಲ್ಡ್

  ಅಂದಹಾಗೆ, ತೆಲುಗಿನಲ್ಲಿ ಬರುತ್ತಿರುವ ಹೊಸ ಮಲ್ಟಿಸ್ಟಾರ್ ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ. ಕನ್ನಡದ ರೀತಿ ತೆಲುಗಿನಲ್ಲಿಯೂ ದೊಡ್ಡ ನಟರ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದೆ ಓದಿ..

  ನಾಗಾರ್ಜುನ ಮತ್ತು ನಾನಿ ಕಾಂಬಿನೇಶನ್ ಚಿತ್ರ

  ನಾಗಾರ್ಜುನ ಮತ್ತು ನಾನಿ ಕಾಂಬಿನೇಶನ್ ಚಿತ್ರ

  ತೆಲುಗಿನ ಜನಪ್ರಿಯ ನಟರಾದ ಅಕ್ಕಿನೇನಿ ನಾಗಾರ್ಜುನ ಮತ್ತು ನಾನಿ ಕಾಂಬಿನೇಶನ್ ನಲ್ಲಿ ಒಂದು ಹೊಸ ಮಲ್ಟಿಸ್ಟಾರ್ ಸಿನಿಮಾ ಬರುತ್ತಿದೆ. ಈ ಸಿನಿಮಾದ ನಾಯಕಿಯಾಗಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸೆಲೆಕ್ಟ್ ಆಗಿದ್ದಾರೆ. ಚಿತ್ರದ ಹೀರೋಯಿನ್ ಪಾತ್ರಕ್ಕೆ ಅನೇಕ ನಟಿಯರನ್ನು ಹುಡುಕಾಟ ನೆಡೆಸಿದ ಈ ಚಿತ್ರತಂಡ ಕೊನೆಗೆ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದೆ. ಇನ್ನು ಶ್ರೀರಾಮ್ ಆದಿತ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ತೆಲುಗಿನಲ್ಲಿ ರಶ್ಮಿಕಾ 2ನೇ ಸಿನಿಮಾ

  ತೆಲುಗಿನಲ್ಲಿ ರಶ್ಮಿಕಾ 2ನೇ ಸಿನಿಮಾ

  ಮೊದಲ ಚಿತ್ರದಲ್ಲಿ ಯುವ ನಟ ನಾಗಶೌರ್ಯಗೆ ಜೋಡಿಯಾಗಿದ್ದ ರಶ್ಮಿಕಾ ಈಗ ಅಕ್ಕಿನೇನಿ ನಾಗಾರ್ಜುನ ಮತ್ತು ನಾನಿ ಚಿತ್ರದಲ್ಲಿ ಒಬ್ಬರಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಒಟ್ಟಾರೆಯಾಗಿ ಅವರ ಆರನೇ ಸಿನಿಮಾ ಇದಾಗಿದೆ. ಆರು ಸಿನಿಮಾಗಳ ಪೈಕಿ ಬಹುಪಾಲು ಸ್ಟಾರ್ ನಟರ ಚಿತ್ರದಲ್ಲಿಯೇ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

  ಶ್ರದ್ಧಾ ಶ್ರೀನಾಥ್ ನಟಿಸಬೇಕಿತ್ತು

  ಶ್ರದ್ಧಾ ಶ್ರೀನಾಥ್ ನಟಿಸಬೇಕಿತ್ತು

  ಪ್ರಾರಂಭದಲ್ಲಿ ಈ ಸಿನಿಮಾದ ನಾಯಕಿಯ ಪಾತ್ರಕ್ಕೆ ಅಂದರೆ ನಟ ನಾನಿಯ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಅಥವಾ ಲಾವಣ್ಯಾ ತ್ರಿಪತಿ ನಟಿಸಬೇಕಿತಂತೆ. ಆದರೆ ಕಾರಣಾಂತರಗಳಿಂದ ಅವರು ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿಲ್ಲ. ಆ ನಂತರ ಪಾತ್ರಕ್ಕೆ ನಡೆದ ನಟಿಯ ಹುಡುಕಾಟದಲ್ಲಿ ರಶ್ಮಿಕಾ ಮಂದಣ್ಣ ಸಿಕ್ಕಿದ್ದಾರೆ. ಈ ಚಿತ್ರದಲ್ಲಿ ನಟ ನಾನಿ ಅವರ ಜೋಡಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ.

  ನಾಗಾರ್ಜುನಗೆ ಅನುಷ್ಕಾ ಜೋಡಿ

  ನಾಗಾರ್ಜುನಗೆ ಅನುಷ್ಕಾ ಜೋಡಿ

  ಅಕ್ಕಿನೇನಿ ನಾಗಾರ್ಜುನ ಮತ್ತು ನಾನಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಹೊಸ ಸಿನಿಮಾಗೆ ಟೈಟಲ್ ಇನ್ನು ಫಿಕ್ಸ್ ಆಗಿಲ್ಲ. ಸಿನಿಮಾದಲ್ಲಿ ಡಾನ್ ಪಾತ್ರದಲ್ಲಿ ನಾಗಾರ್ಜುನ ಮತ್ತು ಡಾಕ್ಟರ್ ಪಾತ್ರದಲ್ಲಿ ನಾನಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಗಾರ್ಜುನಗೆ ನಟಿ ಅನುಷ್ಕಾ ಶೆಟ್ಟಿ ಜೋಡಿಯಾಗಲಿದ್ದಾರೆ ಎನ್ನುವ ಸುದ್ದಿ ಇದೆ. ಮಾರ್ಚ್ 18 ರಿಂದ ಸಿನಿಮಾದ ಶೂಟಿಂಗ್ ಶುರು ಆಗಿದೆ.

  'ಯಜಮಾನ'ನ ಸಂಗತಿ

  'ಯಜಮಾನ'ನ ಸಂಗತಿ

  'ಚಮಕ್' ಸಿನಿಮಾದ ನಂತರ ಸದ್ಯ ರಶ್ಮಿಕಾ ಮಂದಣ್ಣ ನಟ ದರ್ಶನ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕಿರಿಕ್ ಹುಡುಗಿ ಇದೀಗ 'ಯಜಮಾನ'ನ ಸಂಗತಿ ಆಗಿದ್ದಾರೆ. ಬಿ.ಸುರೇಶ್ ಬ್ಯಾನರ್ ನಲ್ಲಿ ಬರುತ್ತಿರುವ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. 'ಯಜಮಾನ' ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ.

  ಮೊಸ್ಟ್ ಡಿಸೈರಬಲ್ ವುವೆನ್

  ಮೊಸ್ಟ್ ಡಿಸೈರಬಲ್ ವುವೆನ್

  ಒಂದು ಕಡೆ ಸ್ಟಾರ್ ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೆ ಟೈಮ್ಸ್ ಮೊಸ್ಟ್ ಡಿಸೈರಬಲ್ ವುವೆನ್ 2017 ಪಟ್ಟ ಪಡೆದಿದ್ದಾರೆ.

  English summary
  Kannada actress Rashmika Mandanna has been roped for Actor Akkineni Nagarjuna and Nani's new movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X