For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣಗೆ ಈ ಸ್ಟಾರ್ ನಟಿಯ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುವ ಆಸೆಯಂತೆ

  |

  ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿರುವ ರಶ್ಮಿಕಾ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಸದ್ಯ ಟಾಲಿವುಡ್ ನ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

  ರಶ್ಮಿಕಾ ಕೈಯಲ್ಲಿ ಸದ್ಯ ಸಾಕಷ್ಟು ಸಿನಿಮಾಗಳಿವೆ. ತೆಲುಗು, ತಮಿಳು ಕನ್ನಡ ಭಾಷೆಯಲ್ಲಿ ಬ್ಯುಸಿಯಾಗಿರುವ ರಶ್ಮಿಕಾಗೆ ಮತ್ತೊಂದು ದೊಡ್ಡ ಆಸೆ ಇದೆಯಂತೆ. ರಶ್ಮಿಕಾ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿಯ ಬಯೋಪಿಕ್ ಮಾಡುವ ಆಸೆಯಂತೆ.

  ಏನಾದ್ರೂ ಕೇಳಿ, ನಿಮ್ಮ ಪ್ರಶ್ನೆಗೆ ಉತ್ತರಿಸಲು ರಶ್ಮಿಕಾ ಮಂದಣ್ಣ ಸಿದ್ಧಏನಾದ್ರೂ ಕೇಳಿ, ನಿಮ್ಮ ಪ್ರಶ್ನೆಗೆ ಉತ್ತರಿಸಲು ರಶ್ಮಿಕಾ ಮಂದಣ್ಣ ಸಿದ್ಧ

  ಅದು ಮತ್ಯಾರು ಅಲ್ಲ ಕನ್ನಡತಿ, ದಕ್ಷಿಣ ಭಾರತೀಯ ಚಿತ್ರರಂಗವಾಳಿ ದುರಂತ ಅಂತ್ಯ ಕಂಡ ಅಪ್ರತಿಮ ಸೌಂದರ್ಯವತಿ ನಟಿ ಸೌಂದರ್ಯ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುವ ಆಸೆಯಂತೆ. ಈ ಬಗ್ಗೆ ರಶ್ಮಿಕಾ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯಾರಾದರು ಯಾವುದೆ ಪ್ರಶ್ನೆಗಳನ್ನು ಕೇಳಬಹುದು ಎಂದು ಹೇಳಿದ್ದರು. ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು.

  ಒಬ್ಬರು ಅಭಿಮಾನಿ ಯಾವ ಸ್ಟಾರ್ ನಟಿಯ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳಲು ಬಯಸುತ್ತೀರಾ ಎಂದು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, "ಸೌಂದರ್ಯ ಅವರ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ. ತನ್ನ ತಂದೆ ಹೇಳುತ್ತಿರುತ್ತಾರೆ. ನೀನು ಸೌಂದರ್ಯ ಹಾಗೆ ಕಾಣಿಸುತ್ತೀಯಾ ಎಂದು ಹೇಳುತ್ತಾರೆ" ಎಂದು ಹೇಳಿದ್ದಾರೆ.

  ಈಗಾಗಲೆ ಸಾಕಷ್ಟು ಸ್ಟಾರ್ ನಟಿಯರ ಬಯೋಪಿಕ್ ಬಂದಿವೆ. ಆದರೆ ಇನ್ನು ಸೌಂದರ್ಯ ಬಗ್ಗೆ ಬಯೋಪಿಕ್ ತಯಾರಾಗಿಲ್ಲ. ಅಲ್ಲದೆ ಸೌಂದರ್ಯ ಬಯೋಪಿಕ್ ಮಾಡುವ ಬಗ್ಗೆಯು ಯಾವ ನಿರ್ದೇಶಕರು ಚರ್ಚೆ ನಡೆಸಿದ ಹಾಗಿಲ್ಲ. ಒಂದು ವೇಳೆ ಸೌಂದರ್ಯ ಅವರ ಬಯೋಪಿಕ್ ಸೆಟ್ಟೇರಿದರೆ ರಶ್ಮಿಕಾ ಆಯ್ಕೆ ಮೊದಲಾಗಿದ್ದರು ಅಚ್ಚರಿ ಇಲ್ಲ.

  English summary
  Kannada actress Rashmika Mandanna has desire to make actress Soundarya biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X