For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ಹೆಚ್ಚಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ

  |
  ನಟಿ ರಶ್ಮಿಕಾ ಮಂದಣ್ಣ ಈಗ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ | FILMIBEAT KANNADA

  ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಯ ನಟಿ ರಶ್ಮಿಕಾ ಮಂದಣ್ಣ ಈಗ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ದಿಢೀರನೆ ಸಂಭಾವನೆ ದುಪ್ಪಟ್ಟು ಮಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ.

  ಕಡಿಮೆ ಅವದಿಯಲ್ಲೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಯ ನಟಿಯಾಗಿ ಬೆಳೆದು ನಿಂತಿದ್ದಾರೆ ಕಿರಿಕ್ ಸುಂದರಿ. ರಶ್ಮಿಕಾ ಈಗ ಬೇಡಿಕೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ ದಕ್ಷಿಣ ಭಾರತೀಯ ಚಿತ್ರರಂಗದ ಸ್ಟಾರ್ ನಟರ ಚಿತ್ರಗಳಿಗೆ ಮೊದಲ ಆಯ್ಕೆ ರಶ್ಮಿಕಾ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಶ್ಮಿಕಾ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

  ಮಹೇಶ್ ಬಾಬುಗಾಗಿ ಹಿಂದಿ ಸಿನಿಮಾ ರಿಜೆಕ್ಟ್ ಮಾಡಿದ್ರಾ ರಶ್ಮಿಕಾ?

  ಈ ಮೊದಲು ಒಂದು ಸಿನಿಮಾಗೆ 40 ಲಕ್ಷ ಪಡೆಯುತ್ತಿದ್ದ ರಶ್ಮಿಕಾ ಈಗ 80 ಲಕ್ಷಕ್ಕೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಸ್ಟಾರ್ ನಾಯಕರ ಸಿನಿಮಾಗಳು. ರಶ್ಮಿಕಾ ಕೈಯಲ್ಲಿ ಇರುವ ಪ್ರಾಜೆಕ್ಟ್ ಗಳು ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾಗಳೆ ಆಗಿವೆ.

  ಟಾಲಿವುಡ್ ನ ಸ್ಟಾರ್ ನಟರಾದ ಅಲ್ಲು ಅರ್ಜುನ್, ನಿತಿನ್ ಸಿನಿಮಾಗಳಿಗೆ ರಶ್ಮಿಕಾನೆ ನಾಯಕಿ. ಅಲ್ಲದೆ ಪ್ರಿನ್ಸ್ ಮಹೇಶ್ ಬಾಬು ಸಿನಿಮಾಗೂ ರಶ್ಮಿಕಾ ನಾಯಕಿ ಅಂತ ಹೇಳಲಾಗುತ್ತಿದೆ. ಹಾಗಾಗಿ ಬೇಡಿಕೆ ಹೆಚ್ಚಾಗುತ್ತಿದಂತೆ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ರಶ್ಮಿಕಾ.

  'ಗೀತಾ ಗೋವಿಂದಂ' ಮತ್ತು 'ಯಜಮಾನ' ಚಿತ್ರದ ಸಕ್ಸಸ್ ಅಲ್ಲದೆ ರಿಲೀಸ್ ಗೂ ಮೊದಲ 'ಡಿಯರ್ ಕಾಮ್ರೇಡ್' ಕ್ರಿಯೆಕ್ ಮಾಡಿರುವ ಹೈಪ್ ರಶ್ಮಿಕಾ ಸಂಭಾವನೆ ಹೆಚ್ಚಿಸಿಕೊಳ್ಳಲು ಮುಖ್ಯವಾದ ಕಾರಣವಾಗಿದೆ. ಸದ್ಯ 80ಲಕ್ಷದಲ್ಲಿ ಇರುವ ಸಂಭಾವನೆ ಮುಂದಿನ ದಿನಗಳಲ್ಲಿ ಕೋಟಿಗೆ ತಲುಪಿದ್ರು ಅಚ್ಚರಿ ಇಲ್ಲ. ಯಾಕಂದ್ರೆ ಸದ್ಯ ರಶ್ಮಿಕಾ ಕೈಯಲ್ಲಿರುವ ಸಿನಿಮಾ ಪ್ರಾಜೆಕ್ಟ್ ಗಳು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ್ರೆ ರಶ್ಮಿಕಾ ಸಂಭಾವನೆ ಕೋಟಿಗೆ ತಲುಪುತ್ತೆ ಎನ್ನುತ್ತಿವೆ ಮೂಲಗಳು.

  English summary
  Kannada actress Rashmika Mandanna has increased her remuneration. She is now demanding anywhere between 60-80 lakhs per film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X