ಜನ ಮೆಚ್ಚುವ ಕೆಲಸ ಮಾಡಿದ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಕನ್ನಡಕ್ಕಿಂತಲೂ ತೆಲುಗು ಚಿತ್ರರಂಗದಲ್ಲಿಯೇ ಹೆಚ್ಚು ಮಿಂಚುತ್ತಿದ್ದಾರೆ. ಖ್ಯಾತಿಯ ಜೊತೆಗೆ ಆಗಾಗ್ಗೆ ಸಣ್ಣ-ಪುಟ್ಟ ವಿವಾದಗಳನ್ನೂ ಮೈ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ.
ಕನ್ನಡ ಭಾಷೆ ಮಾತನಾಡಲು ಸರಿಯಾಗಿ ಬಾರದು ಎಂದು ರಶ್ಮಿಕಾ ಹೇಳಿದ್ದು, ರಕ್ಷಿತ್ ಶೆಟ್ಟಿ ಜೊತೆಗೆ ನಿಶ್ಚಿತಾರ್ಥ ರದ್ದಾಗಿದ್ದು, ವಿಜಯ್ ದೇವರಕೊಂಡ ಜೊತೆಗೆ ಆಪ್ತತೆ ಹೀಗೆ ಹಲವು ಕಾರಣಕ್ಕೆ ಸುದ್ದಿಯಲ್ಲಿರುವ ರಶ್ಮಿಕಾ ಈಗ ಒಂದೊಳ್ಳೆ ಕೆಲಸ ಮಾಡಿ ಸುದ್ದಿಗೆ ಬಂದಿದ್ದಾರೆ.
ಕೊರೊನಾ ಸಮಯದಲ್ಲಿ ರಶ್ಮಿಕಾ ಮಂದಣ್ಣ ಏನು ಮಾಡಿದ್ದಾರೆ ಎಂದು ಕೇಳುವವರಿಗೆ ರಶ್ಮಿಕಾ ಮಂದಣ್ಣ ಕೆಲಸದ ಮೂಲಕವೇ ಉತ್ತರ ನೀಡಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಒಳ್ಳೆ ಕಾರ್ಯ
ಲಾಕ್‌ಡೌನ್ ಸಮಯದಲ್ಲಿ ರಮ್ಮಿ ಜಾಹೀರಾತು ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಕೆಲವರಿಂದ ಆಕ್ರೋಶಕ್ಕೆ ಗುರಿಯಾಗಿದ್ದ ರಶ್ಮಿಕಾ ಮಂದಣ್ಣ. ಇದೇ ಲಾಕ್‌ಡೌನ್ ಸಮಯದಲ್ಲಿ ಒಂದೊಳ್ಳೆ ಕೆಲಸವನ್ನೂ ಮಾಡಿದ್ದಾರೆ.

ಕೊರೊನಾ ವಾರಿಯರ್ಸ್ ರಶ್ಮಿಕಾ ಮಂದಣ್ಣ ಸಹಾಯ
ಕೊರೊನಾ ವಾರಿಯರ್ಸ್ ಗೆ ರಶ್ಮಿಕಾ ಮಂದಣ್ಣ ಉಚಿತ ಊಟದ ವ್ಯವಸ್ಥೆ ಮಾಡಿದ್ದಾರೆ. ಕೊಡಗಿನ ವಿರಾಜಪೇಟೆಯಲ್ಲಿರುವ ತಮ್ಮ ಕುಟುಂಬದ ಒಡೆತನದ ಸೆರೆನಿಟಿ ಹಾಲ್‌ನಲ್ಲಿ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಉಚಿತ ಊಟದ ವ್ಯವಸ್ಥೆ ಮಾಡಿದ್ದಾರೆ.

ಕೊರೊನಾ ವಾರಿಯರ್ಸ್ ಗೆ ಉಚಿತ ಆಹಾರ
ಪೊಲೀಸರು, ಆಶಾ ಕಾರ್ಯಕರ್ತೆಯರು, ವೈದ್ಯರು, ಆಂಬುಲೆನ್ಸ್ ಡ್ರೈವರ್‌ಗಳು ಇನ್ನಿತರೆ ಕೊರೊನಾ ವಾರಿಯರ್ಸ್ ಗೆ ಸುಮಾರು ಒಂದು ತಿಂಗಳಿನಿಂದಲೂ ಸೆರೆನಿಟಿ ಹಾಲ್‌ನಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಊಟವನ್ನು ಉಚಿತವಾಗಿ ಒದಗಿಸಲಾಗುತ್ತಿದೆ.

ರಶ್ಮಿಕಾ ಮಂದಣ್ಣ ಮುಂಬರುವ ಸಿನಿಮಾಗಳು
ರಶ್ಮಿಕಾ ಮಂದಣ್ಣ ತೆಲುಗು ಸಿನಿಉದ್ಯಮದಲ್ಲಿ ಬೇಡಿಕೆಯ ನಟಿಯಾಗಿದ್ದು, ತೆಲುಗಿನ ಪುಷ್ಪಾ, ಕನ್ನಡದ ಪೊಗರು, ತಮಿಳಿನ ಸುಲ್ತಾನ್ ರಶ್ಮಿಕಾ ಅವರ ಮುಂಬರುವ ಸಿನಿಮಾಗಳಾಗಿವೆ. ಸುಲ್ತಾನ್ ರಶ್ಮಿಕಾ ಅಭಿನಯದ ಮೊದಲ ತಮಿಳು ಸಿನಿಮಾ ಆಗಿದೆ.


Click it and Unblock the Notifications











