ರಶ್ಮಿಕಾ ಮಂದಣ್ಣ ನಡೆಗೆ ಭಾರಿ ವಿರೋಧ: ನಟಿ ಮಾಡಿದ್ದೇನು ಗೊತ್ತಾ?

ಪುಷ್ಪ ಸಿನಿಮಾದ ಯಶಸ್ಸಿನ ನಂತರ ನಟಿ ರಶ್ಮಿಕಾ ಮಂದಣ್ಣ ಅವರ ಬೇಡಿಕೆ ಹೆಚ್ಚಾಗಿದೆ.‌‌‌ ಪುಷ್ಪ ಸಿನಿಮಾದಲ್ಲಿನ ರಶ್ಮಿಕಾ ಅಭಿನಯಕ್ಕೆ ಪ್ರೇಕ್ಷಕರು, ಸಿನಿಮಾಮಂದಿ ಮನ ಸೋತಿದ್ದಾರೆ. ಸೌತ್ ಜೊತೆಗೆ ಬಾಲಿವುಡ್ ಮಂದಿಯ ಗಮನವನ್ನು ಸೆಳೆದಿದ್ದಾರೆ. ಪುಷ್ಪ ಹಿಂದಿಯಲ್ಲೂ ರಿಲೀಸ್ ಆದ ಕಾರಣ, ರಶ್ಮಿಕಾಗೆ ಅಲ್ಲಿ ಅದಾಗಲೇ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಖ್ಯಾತಿ ಪಡೆಯುತ್ತಿದ್ದ ಹಾಗೆ ಟ್ರೋಲ್ ಗೂ ಅಷ್ಟೇ ಹೆಚ್ಚಾಗಿ ತುತ್ತಾಗುತ್ತಿದ್ದಾರೆ ರಶ್ಮಿಕಾ ಮಂದಣ್ಣ.

ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಾನು ತೊಟ್ಟ ಉಡುಪಿನಿಂದ ಟ್ರೋಲ್ ‌ಆಗಿದ್ರು. ಮುಂಬೈನಲ್ಲಿ ಇಳಿಯುತ್ತಿದ್ದ ಹಾಗೆ ರಶ್ಮಿಕಾ ನಿನ್ನ ಪ್ಯಾಂಟ್‌ ಎಲ್ಲಿ ಎಂದು ಕೆಲವರು ಕಾಲೆಳೆದಿದ್ದರು. ಈಗ ಮತ್ತೊಮ್ಮೆ ಮುಂಬೈ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ.

ರಶ್ಮಿಕಾಳನ್ನು ನೋಡಲು ಬಂದ, ಮಕ್ಕಳೊಂದಿಗೆ ಆಕೆ ನಡೆದುಕೊಂಡ ರೀತಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಇದು ನೆಟ್ಟಿಗರ ಕಣ್ಣು ಕೆಂಪಾಗುವಂತೆ ಮಾಡಿದೆ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾಳನ್ನು ಪ್ರಶ್ನೆ ಮಾಡಲಾಗುತ್ತಿದೆ.

ಕರಣ್ ಜೋಹರ್ ಮನೆ ಮುಂದೆ ನಡೆದಿದ್ದು ಏನು?

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈಗೆ ತೆರಳಿದ್ದಾರೆ. ಅಲ್ಲಿ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರನ್ನು ಭೇಟಿ ಮಾಡಿದ್ದಾರೆ. ಕರಣ್ ಭೇಟಿ ಮಾಡಿ ವಾಪಸ್ ಬರುವ ವೇಳೆ ಒಂದಷ್ಟು ಮಕ್ಕಳು‌ ರಶ್ಮಿಕಾಳನ್ನು ನೋಡಲು ಕಾಯುತ್ತಾ ನಿಂತಿರುವುದು ಕಂಡುಬಂತು.‌ ಆದರೆ ರಶ್ಮಿಕಾ ಅವರನ್ನು ಪಕ್ಕಕ್ಕೆ ತಳ್ಳಿ ಕಾರು ಹತ್ತುತ್ತಾರೆ.

ಊಟ ಬೇಕು ಎಂದು ಕೇಳಿದ ಮಕ್ಕಳು?

ಊಟ ಬೇಕು ಎಂದು ಕೇಳಿದ ಮಕ್ಕಳು?

ನಟಿ ರಶ್ಮಿಕಾ ಅವರು ಬಂದ ಕೂಡಲೇ, ಆ ಮಕ್ಕಳು ಊಟ ಬೇಕು ಎಂದು ‌ಕೇಳುತ್ತಾರೆ. ಆದರೆ ನ್ಯಾಷನಲ್ ಕ್ರಶ್ ಒಂದು ಗಳಿಗೆಯೂ ಆ ಜಾಗದಲ್ಲಿ ನಿಲ್ಲುವುದಿಲ್ಲ.‌‌ ಆ ಮಕ್ಕಳನ್ನು ಬದಿಗೊತ್ತಿ ಕಾರು ಹತ್ತುತ್ತಾರೆ. ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.‌ ರಶ್ಮಿಕಾ ‌ಹೀಗೆ ಮಾಡಿದ್ದು ಎಷ್ಟು ಸರಿ ಎನ್ನುವ ಚರ್ಚೆಗಳು ಸಾಮಾಜಿಕ ಜಾಲಣದಲ್ಲಿ ಹುಟ್ಟಿಕೊಂಡಿವೆ.

ರಶ್ಮಿಕಾ ಜಾಗದಲ್ಲಿ ಸುಶಾಂತ್ ಇರಬೇಕಿತ್ತು ಎಂದ ಜನ!

ರಶ್ಮಿಕಾ ಜಾಗದಲ್ಲಿ ಸುಶಾಂತ್ ಇರಬೇಕಿತ್ತು ಎಂದ ಜನ!

ರಶ್ಮಿಕಾಳ ಈ ನಡೆ‌ ಖಂಡಿಸಿದ ಜ‌ನ, ಆ ಜಾಗದಲ್ಲಿ ಸುಶಾಂತ್ ಸಿಂಗ್ ಇರಬೇಕಿತ್ತು. ಮಕ್ಕಳನ್ನು ನೋಡುವ ರೀತಿಯೇ ಬೇರೆ ಆಗುತ್ತಿತ್ತು. ಸುಶಾಂತ್ ಉತ್ತಮ ಮನಸ್ಸು ಉಳ್ಳ ವ್ಯಕ್ತಿ ಎನ್ನುವ ಕಾಮೆಂಟ್ ಗಳು ಬಂದಿವೆ. ಆದರೆ ಇವರೆಲ್ಲಾ ಒಂದು ಸಿನಿಮಾ ಹಿಟ್ ಆದರೇ ಸಾಕು, ಜಂಭ ತೋರಿಸುತ್ತಾರೆ ಎನ್ನುವ ಕಾಮೆಂಟ್‌ಗಳು ರಶ್ಮಿಕಾ ನಡೆಗೆ ವ್ಯಕ್ತ ಆಗಿವೆ. ಈ ಮೂಲಕ ರಶ್ಮಿಕಾಳನ್ನು ಟ್ರೋಲ್ ಮಾಡಲಾಗುತ್ತಿದೆ.

ತುಂಡುಡುಗೆ ಧರಿಸಿ ಟ್ರೋಲ್ ಆಗಿದ್ದ ನಟಿ!

ತುಂಡುಡುಗೆ ಧರಿಸಿ ಟ್ರೋಲ್ ಆಗಿದ್ದ ನಟಿ!

ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಅವರು ಟಿ-ಶರ್ಟ್ ಹಾಗೂ ಶಾರ್ಟ್ಸ್ ಹಾಕಿರುವ ವಿಡಿಯೋ ಅದು. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಲವರು ರಶ್ಮಿಕಾ ನಿಮ್ಮ ಪ್ಯಾಂಟ್ ಎಲ್ಲಿ ಎಂದು ಕೂಡ ಪ್ರಶ್ನಿಸಿದ್ದರು.

More from Filmibeat

English summary
Rashmika Mandanna trolling again for ignore children who ask for food
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X