ಸದ್ಯದಲ್ಲೇ ಒಂದರ ಮೇಲೊಂದು ಭರ್ಜರಿ ಸುದ್ದಿ ಕೊಡಲಿದ್ದಾರೆ ರಶ್ಮಿಕಾ ಮಂದಣ್ಣ!

ಸ್ಯಾಂಡಲ್ ವುಡ್ ನ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಈಗ ಸಖತ್ ಬ್ಯುಸಿ. ಸೌತ್ ಸಿನಿ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ತೆಲುಗು ಸಿನಿಮಾರಂಗದಲ್ಲಿ ಸಖತ್ ಬ್ಯುಸಿ ಇದ್ದ ರಶ್ಮಿಕಾ ಪಕ್ಕದ ತಮಿಳಿನಲ್ಲೂ ಮಿಂಚುತ್ತಿದ್ದಾರೆ.

ರಶ್ಮಿಕಾ ಹೆಸರು ಸೌತ್ ಸಿನಿ ಇಂಡಸ್ಟ್ರಿಯ ಟಾಪ್ ನಟರ ಸಿನಿಮಾಗಳಲ್ಲಿ ಕೇಳಿ ಬರುತ್ತಿದೆ. ಸ್ಟಾರ್ ನಟರ ಸಿನಿಮಾಗಳು ಸೆಟ್ಟೇರಿದರೆ ಆ ಸಿನಿಮಾಗೆ ರಶ್ಮಿಕನೆ ನಾಯಕಿಯಂತೆ ಹೌದಾ ಎನ್ನುವ ಮಟ್ಟಕ್ಕೆ ರಶ್ಮಿಕಾ ಹೆಸರು ಚಾಲ್ತಿಯಲ್ಲಿದೆ. ರಶ್ಮಿಕಾ ಅಭಿನಯಿಸುತ್ತಾರೊ ಇಲ್ಲವೊ ಆದರೆ ರಶ್ಮಿಕಾ ಹೆಸರು ಮಾತ್ರ ಸ್ಟಾರ್ ನಟರ ಜೊತೆ ಓಡಾಡುತ್ತಿದೆ.

ಇದುವರೆಗೂ ಕೇವಲ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಮಾತ್ರ ಕೇಳಿ ಬರುತ್ತಿದ್ದ ರಶ್ಮಿಕಾ ಹೆಸರು ಈಗ ಬಾಲಿವುಡ್ ವರೆಗೂ ಓಡಾಡುತ್ತಿದೆ. ಹೌದು, ರಶ್ಮಿಕಾ ಬಾಲಿವುಡ್ ನ ಸ್ಟಾರ್ ನಿರ್ದೇಶನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರೆಲ್ಲ ಸ್ಟಾರ್ ನಟರ ಜೊತೆ ರಶ್ಮಿಕಾ ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿದೆ? ಮುಂದೆ ಓದಿ..

ಮಹೇಶ್ ಬಾಬು ಸಿನಿಮಾದಲ್ಲಿ ರಶ್ಮಿಕಾ

ಮಹೇಶ್ ಬಾಬು ಸಿನಿಮಾದಲ್ಲಿ ರಶ್ಮಿಕಾ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ವರ್ಷದಿಂದ ಹರಿದಾಡುತ್ತಿದೆ. ಮಹೇಶ್ ಬಾಬು ಅಭಿನಯದ ಬಹುನಿರೀಕ್ಷೆಯ 'ಮಹರ್ಷಿ' ಚಿತ್ರಕ್ಕೆ ರಶ್ಮಿಕಾನೆ ನಾಯಕಿ ಅಂತ ಹೇಳಲಾಗುತ್ತಿತ್ತು. ಅದೇ ಸಮಯದಲ್ಲಿ ರಶ್ಮಿಕಾ ಅಭಿನಯದ 'ಗೀತಾ ಗೋವಿಂದಂ' ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಅಲ್ಲದೆ ಮಹೇಶ್ ಬಾಬು ಸಿನಿಮಾ ನೋಡಿ ಹಾಡಿಹೊಗಳಿದ್ದರು. ಆ ನಂತರ ಮಹೇಶ್ ಬಾಬು ಜೊತೆ ರಶ್ಮಿಕಾ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಮಹೇಶ್ ಬಾಬು ಮುಂದಿನ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನುತ್ತದೆ ಟಾಲಿವುಡ್.

ಇಳೆಯದಳಪತಿ ವಿಜಯ್ ಜೊತೆ ರಶ್ಮಿಕಾ

ಇಳೆಯದಳಪತಿ ವಿಜಯ್ ಜೊತೆ ರಶ್ಮಿಕಾ

ತಮಿಳಿನ ಸ್ಟಾರ್ ನಟ ವಿಜಯ್ ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಒಂದಿಷ್ಟು ದಿನ ಹರಿದಾಡುತ್ತಿತ್ತು. ವಿಜಯ್ ಅಭಿನಯದ 63ನೇ ಸಿನಿಮಾ 'ದಳಪತಿ 63' ಚಿತ್ರದಲ್ಲಿ ಕನ್ನಡದ ಸಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮೂಲಕವೇ ತಮಿಳು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ದಳಪತಿ ಸಿನಿಮಾದಲ್ಲಿ ನಾಯಕಿಯಾಗಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ರಶ್ಮಿಕಾ ತಮಿಳು ನಟ ಕಾರ್ತಿಗೆ ನಾಯಕಿಯಾಗುವ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಬಾಲಿವುಡ್ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ಅಭಿನಯ

ಬಾಲಿವುಡ್ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ಅಭಿನಯ

ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸದ್ದ ರಶ್ಮಿಕಾ ಹೆಸರು ಈಗ ಬಾಲಿವುಡ್ ನಲ್ಲು ಹರಿದಾಡುತ್ತಿದೆ. ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬನ್ಸಾಲಿ ಸಿನಿಮಾದಲ್ಲಿ ನಾಯಕನಾಗಿ ರಣದೀಪ್ ಹೂಡ ಕಾಣಿಸಿಕೊಳ್ಳಲಿದ್ದಾರೆ. ರಣದೀಪ್ ಹೂಡಾಗೆ ರಶ್ಮಿಕಾ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಯಾವುದು ಅಧಿಕೃತವಾಗಿಲ್ಲ.

ಅಖಿಲ್ ಮತ್ತು ವೈಶ್ಣವ್ ತೇಜ್ ಸಿನಿಮಾದಲ್ಲಿ ರಶ್ಮಿಕಾ

ಅಖಿಲ್ ಮತ್ತು ವೈಶ್ಣವ್ ತೇಜ್ ಸಿನಿಮಾದಲ್ಲಿ ರಶ್ಮಿಕಾ

ಟಾಲಿವುಡ್ ನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್ ಎರಡನೆ ಪುತ್ರ ಅಖಿಲ್ ಸಿನಿಮಾದಲ್ಲಿ ರಶ್ಮಿಕಾ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಖಿಲ್ ಅಕ್ಕಿನೇನಿ ಅಭಿನಯದ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿ ಅಂತೆ. ಈ ಹಿಂದೆ ನಾಗಾರ್ಜುನ್ ಜೊತೆ ಸಿನಿಮಾ ಮಾಡಿರುವ ರಶ್ಮಿಕಾ ಈಗ ಮಗನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇನ್ನು ಚಿರಂಜೀವಿ ಸಹೋದರನ ಮಗ ಸಾಯಿ ಧರ್ಮಂ ತೇಜ ಸಹೋದರ ವೈಶ್ಣವ್ ತೇಜ್ ಅಭಿನಯದ ಮೊದಲ ಸಿನಿಮಾಗೆ ರಶ್ಮಿಕಾ ನಾಯಕಿ ಎಂದು ಹೇಳಲಾಗುತ್ತಿದೆ. ಆದ್ರೆ ಯಾವುದು ಅಧಿಕೃತವಾಗಿಲ್ಲ. ಆದ್ರೆ ರಶ್ಮಿಕಾ ಹೆಸರು ಮಾತ್ರ ಹರಿದಾಡುತ್ತಿದೆ.

More from Filmibeat

English summary
Kannada actress Rashmika Mandanna will acting with Mahesh Babu, Vijay and Bollywood film, news is going on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X