ರಶ್ಮಿಕಾ ಮಂದಣ್ಣ ಮೇಲೆ ಗರಂ ಆದ ತಮಿಳು 'ಸುಲ್ತಾನ್'

Recommended Video

ತಮಿಳುನಾಡಿನಲ್ಲೂ ಮುಂದುವರೆದ ರಶ್ಮಿಕಾ ಮಂದಣ್ಣ ಕಿರಿಕ್..! | Rashmika Mandanna

ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ವಿಚಾರ ಕನ್ನಡಿಗರಿಗೆ ಗೊತ್ತಿರುವುದೆ. ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿರುವ ರಶ್ಮಿಕಾ ಇತ್ತೀಚಿಗಷ್ಟೆ ಕಾಲಿವುಡ್ ಪ್ರವೇಶಿಸಿದ್ದರು.

ತಮಿಳಿನಲ್ಲಿ ಮೊದಲ ಸಿನಿಮಾ ಮಾಡುತ್ತಿರುವ ಖುಷಿಯಲ್ಲಿದ್ದಾರೆ ರಶ್ಮಿಕಾ. ಅದೆ ಸಂತಸದಲ್ಲಿ ರಶ್ಮಿಕಾ ಮಾಡಿರುವ ಎಡವಟ್ಟು ಚಿತ್ರತಂಡದ ಕೋಪಕ್ಕೆ ಕಾರಣವಾಗಿದೆ. ಕಾಲಿವುಡ್ ಅಂಗಳದಲ್ಲಿ ಇದೇನಿದು ರಶ್ಮಿಕಾ ಹೊಸ ರಗಳೆ ಎಂದುಕೊಳ್ಳುತ್ತಿದ್ದೀರಾ? ಮುಂದೆ ಓದಿ..

ತಮಿಳು ಚಿತ್ರದಲ್ಲಿ ರಶ್ಮಿಕಾ

ತಮಿಳು ಚಿತ್ರದಲ್ಲಿ ರಶ್ಮಿಕಾ

ರಶ್ಮಿಕಾ ತಮಿಳು ನಟ ಕಾರ್ತಿ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಚಿತ್ರ ಸೆಟ್ಟೇರಿ ಅನೇಕ ದಿನಗಳಾಗಿತ್ತು. ಆದ್ರೀಗ ಚಿತ್ರೀಕರಣ ಪ್ರಾರಂಭವಾಗಿದೆ. ಮೊದಲ ಬಾರಿಗೆ ರಶ್ಮಿಕಾ ತಮಿಳು ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೇಮೋ ಖ್ಯಾತಿಯ ನಿರ್ದೇಶಕ ಭಾಗ್ಯರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರಶ್ಮಿಕಾ 'ಸುಲ್ತಾನ್' ಎಡವಟ್ಟು

ರಶ್ಮಿಕಾ 'ಸುಲ್ತಾನ್' ಎಡವಟ್ಟು

ರಶ್ಮಿಕಾ ಮೊದಲ ತಮಿಳು ಚಿತ್ರದ ಟೈಟಲ್ ಇನ್ನು ಫಿಕ್ಸ್ ಆಗಿರಲಿಲ್ಲ. ಆದ್ರೀಗ ಚಿತ್ರಕ್ಕೆ 'ಸುಲ್ತಾನ್' ಎಂದು ನಾಮಕರಣ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತಾಗಿದೆ. ಚಿತ್ರತಂಡ ಟೈಟಲ್ ಅನ್ನು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಆದ್ರೆ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ "ನಾಲ್ಕನೆ ದಿನದ 'ಸುಲ್ತಾನ್' ಶೂಟಿಂಗ್, ನನ್ನ ಲುಕ್ ಹೇಗಿದೆ ಎನ್ನುವುದು ನಿಮಗೆ ಕಾಣಿಸುವುದಿಲ್ಲ" ಎಂದು ಬರೆದುಕೊಂಡು ಅಸ್ಪಷ್ಟವಾದ ಫೊಟೋವನ್ನು ಶೇರ್ ಮಾಡಿದ್ದರು.

ರಶ್ಮಿಕಾ ಮೇಲೆ ಗರಂ ಆದ ಚಿತ್ರತಂಡ

ರಶ್ಮಿಕಾ ಮೇಲೆ ಗರಂ ಆದ ಚಿತ್ರತಂಡ

ರಶ್ಮಿಕಾ ಸುಲ್ತಾನ್ ಶೂಟಿಂಗ್ ಎಂದು ಹಾಕುತ್ತಿದ್ದಂತೆ ಚಿತ್ರದ ಟೈಟಲ್ ಎಲ್ಲರಿಗೂ ಗೊತ್ತಾಗಿದೆ. ರಶ್ಮಿಕಾ ಕಡೆಯಿಂದ ಚಿತ್ರದ ಟೈಟಲ್ ಸೋರಿಕೆಯಾದ ವಿಚಾರ ಗೊತ್ತಾಗುತ್ತಿದ್ದಂತೆ ಚಿತ್ರತಂಡ ಗರಂ ಆಗಿದೆ. ಸ್ಟೇಟಸ್ ಹಾಕಿದ ಸ್ವಲ್ಪ ಹೊತ್ತಲ್ಲೆ ಕಿರಿಕ್ ರಾಣಿ ಪೋಸ್ಟ್ ಡಿಲಿಟ್ ಮಾಡಿದ್ದಾರೆ. ಆದ್ರೆ ಅಷ್ಟರಲ್ಲೆ 'ಸುಲ್ತಾನ್' ಟೈಟಲ್ ವೈರಲ್ ಆಗಿತ್ತು. ರಶ್ಮಿಕಾ ಮಾಡಿದ ಎಡವಟ್ಟಿನಿಂದ ಚಿತ್ರತಂಡ ರಶ್ಮಿಕಾ ಮೇಲೆ ರಗಂ ಆಗಿದೆ.

ರಶ್ಮಿಕಾ ಮೇಲೆ ನಟ ಕಾರ್ತಿ ಅಸಮಾಧಾನ

ರಶ್ಮಿಕಾ ಮೇಲೆ ನಟ ಕಾರ್ತಿ ಅಸಮಾಧಾನ

ಕೋಪಗೊಂಡ ಚಿತ್ರತಂಡ ರಶ್ಮಿಕಾಗೆ ಸರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ಕಾರ್ತಿ ಕೂಡ ರಶ್ಮಿಕಾ ಮಾಡಿದ ಎಡವಟ್ಟಿನಿಂದ ಅಸಮಾಧಾನಗೊಂಡಿದ್ದಾರಂತೆ. ಇದರಿಂತ ಚಿತ್ರತಂಡ ಈಗ ಅಧಿಕೃತವಾಗಿ ಟೈಟಲ್ ರಿವೀಲ್ ಮಾಡುವ ಅನಿವಾರ್ಯತೆ ಎದುರಾಗಿದೆಯಂತೆ.

More from Filmibeat

English summary
Sultan film team angry with Kannada actress Rashmika Mandanna. Rashmika infuriates Karthi for reveals title of her Tamil debut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X