ಒಂದು ಕೋಟಿ ತಲುಪಿದ ರಶ್ಮಿಕಾ ಮಂದಣ್ಣ ಸಂಭಾವನೆ?
Recommended Video
ಸ್ಯಾಂಡಲ್ ವುಡ್ ನ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಮತ್ತು ಕಾಲಿವುಡ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ನಲ್ಲಿ ಸ್ಟಾರ್ ನಟನ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ಕಡೆಯಿಂದ ಒಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಸಂಭಾವನೆ ವಿಚಾರದಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ರಶ್ಮಿಕಾ ಸಂಭಾವನೆ 70-80 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ಭರ್ತಿ ಒಂದು ಕೋಟಿ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈ ಮೂಲಕ ಕೋಟಿ ಸಂಭಾವನೆ ತಲುಪಿದ್ದಾರೆ ಸ್ಯಾಂಡಲ್ ವುಡ್ ನ ಸಾನ್ವಿ.
ಅಂದ್ಹಾಗೆ ರಶ್ಮಿಕಾ ದಿಢೀರನೆ ಒಂದು ಕೋಟಿ ಬೇಡಿಕೆ ಇಡಲು ಕಾರಣ ಕೂಡ ಇದೆಯಂತೆ. ಯಾಕಂದ್ರೆ ರಶ್ಮಿಕಾ ರಶ್ಮಿಕಾ ತಮಿಳಿನ ಸ್ಟಾರ್ ನಟ ವಿಜಯ್ ಜೊತೆ ಅಭಿನಯಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕರು ರಶ್ಮಿಕಾನೆ ನಾಯಕಿ ಆಗಬೇಂದು ಪಟ್ಟು ಹಿಡಿದ್ದಾರಂತೆ. ಹಾಗಾಗಿ ರಶ್ಮಿಕಾ ತನ್ನೆಲ್ಲ ಡೇಟ್ಸ್ ಗಳನ್ನು ಹೊಂದಿಸಿಕೊಂಡು ಸಿನಿಮಾ ಅಭಿನಯಿಸಬೇಕೆಂದ್ರೆ ಒಂದು ಕೋಟಿ ಬೇಕು ಎನ್ನು ಬೇಡಿಕೆ ಇಟ್ಟಿದ್ದಾರಂತೆ.

ರಶ್ಮಿಕಾ ಇತ್ತೀಚಿಗಷ್ಟೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಗೆ ನಾಯಕಿಯಾಗಿ ಅಭಿನಯಿಸುವ ಅವಕಾಶ ಪಡೆಕೊಂಡಿದ್ದಾರೆ. ಜೊತೆಗೆ ಇನ್ನು ಹೆಸರಿಡದ ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಭೀಷ್ಮ ಚಿತ್ರದಲ್ಲಿ ಅಭಿನಿಯಿಸುತ್ತಿದ್ದಾರೆ ಮತ್ತು ವಿಜಯ್ ದೇವರಕೊಂಡ ಜೊತೆ ಎರಡನೆ ಬಾರಿಗೆ ಅಭಿನಯಿಸಿರುವ ಡಿಯರ್ ಕಾಮ್ರೇಡ್ ಚಿತ್ರ ಇದೆ ತಿಂಗಳು 26ಕ್ಕೆ ತೆರೆಗೆ ಬರುತ್ತಿದೆ.


Click it and Unblock the Notifications











