ಪುಷ್ಪಾ: ಅಲ್ಲು ಅರ್ಜುನ್‌ಗೆ ರಶ್ಮಿಕಾ ಮಂದಣ್ಣ ಜೋಡಿಯಲ್ಲ, ಮತ್ಯಾರೋ
ಪುಷ್ಮಾ ಸಿನಿಮಾ ಕೇವಲ ಒಂದೇ ಪೋಸ್ಟರ್ ನಿಂದ ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾದ ಪೋಸ್ಟರ್ ಈಗಾಗಲೇ ವೈರಲ್ ಆಗಿದೆ.
Recommended Video
ಪುಷ್ಪಾ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು, ಆದರೆ ಪೂರ್ಣ ಸತ್ಯವಲ್ಲ. ರಶ್ಮಿಕಾ ಮಂದಣ್ಣ ಸಿನಿಮಾದ ಪ್ರಮುಖ ಪಾತ್ರದಲ್ಲಿದ್ದಾರಾದರೂ ನಾಯಕ ಅಲ್ಲು ಅರ್ಜುನ್ ಗೆ ಜೋಡಿ ರಶ್ಮಿಕಾ ಮಂದಣ್ಣ ಅಲ್ಲವಂತೆ.
ಹೀಗೆಂದು ಸುದ್ದಿ ಹರಿದಾಡುತ್ತಿದ್ದು, ಅಲ್ಲು ಅರ್ಜುನ್ ನಾಯಕಿ ಬೇರೆಯೇ ಇದ್ದು, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲು ಅರ್ಜುನ್ ಜೊತೆ ರೋಮಾನ್ಸ್ ಮಾಡುವುದಿಲ್ಲ ಎನ್ನಲಾಗಿದೆ.

ಅಲ್ಲು ಅರ್ಜುನ್ ನಾಯಕಿಯಾಗಿ ಕ್ಯೂಟ್ ನಟಿ
ಅಲ್ಲು ಅರ್ಜುನ್ ನಾಕಿಯಾಗಿ ನಿವೇದಾ ಥೋಮಸ್ ಆಯ್ಕೆ ಆಗಿದ್ದಾರೆ. ಅಲ್ಲು ಅರ್ಜುನ್ ಪ್ರೇಯಸಿಯ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ. ರಶ್ಮಿಕಾ ಮಂದಣ್ಣ ಮುಖ್ಯಪಾತ್ರದಲ್ಲಿದ್ದರೂ ಅಲ್ಲು ಅರ್ಜುನ್‌ಗೆ ನಾಯಕಿ ಅಲ್ಲ.

ಸ್ಟಾರ್‌ಗಳ ಸಿನಿಮಾದಲ್ಲಿ ನಿವೇತಾ ಥೋಮಸ್
ನಿವೇದಾ ಥೋಮಸ್ ಕೊನೆಯದಾಗಿ ರಜನೀಕಾಂತ್ ಅಭಿನಯದ ದರ್ಬಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಸಿನಿಮಾದಲ್ಲೂ ಅವರು ಮುಖ್ಯಪಾತ್ರದಲ್ಲಿದ್ದಾರೆ.

ಅಲ್ಲು ಅರ್ಜುನ್ ಎದುರು ಡಾಲಿ ಧನಂಜಯ್
ಇನ್ನುಳಿದಂತೆ ಪುಷ್ಪಾ ಸಿನಿಮಾದಲ್ಲಿ ಕನ್ನಡದ ಡಾಲಿ ಧನಂಜಯ್ ಅಭಿನಯಿಸುತ್ತಿದ್ದಾರೆ. ವಿಜಯ್ ಸೇತುಪತಿ ನಿರ್ವಹಿಸಬೇಕಿದ್ದ ಪಾತ್ರವನ್ನು ಅವರಿಗೆ ನೀಡಲಾಗಿದೆ ಎಂಬ ಸುದ್ದಿ ಇದೆ. ಧನಂಜಯ್ ಪ್ರತಿಭೆಗೆ ಪರರಾಜ್ಯಗಳಿಂದಲೂ ಅವಕಾಶಗಳು ಬರುತ್ತಿವೆ.

ಸುಕುಮಾರ್ ನಿರ್ದೇಶನದ ಸಿನಿಮಾ
ಪುಷ್ಪಾ ಸಿನಿಮಾವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾವು ಕನ್ನಡ, ತಮಿಳು, ಮಲೆಯಾಳಂ ಭಾಷೆಗಳಲ್ಲೂ ಬಿಡುಗಡೆ ಆಗಲಿದೆ. ಲಾಕ್‌ಡೌನ್ ನಂತರ ಭರದಿಂದ ಚಿತ್ರೀಕರಣ ನಡೆಯಲಿದೆ.


Click it and Unblock the Notifications











