ರಶ್ಮಿಕಾ ಮಂದಣ್ಣ ಸೈಕೊ: ಹೀಗೆ ಹೇಳಿದ್ದು ಯಾರು ಗೊತ್ತಾ?

ನಟಿ ರಶ್ಮಿಕಾ ಮಂದಣ್ಣ ಸದ್ಯ ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ಅದರಲ್ಲೂ ಪುಷ್ಪ ಚಿತ್ರದ ಬಳಿಕ ರಶ್ಮಿಕಾಗೆ ಇರುವ ಬೇಡಿಕೆ, ಸಂಭಾವನೆ ಎಲ್ಲವೂ ಹೆಚ್ಚಾಗಿದೆ. ಹಾಗಾಗಿ ಸದ್ಯ ಇದೇ ಸಂಭ್ರಮದಲ್ಲಿ ಇದ್ದಾರೆ ನಟಿ ರಶ್ಮಿಕಾ ಮಂದಣ್ಣ. ಆದರೆ ಈಗ ಇದ್ದಕ್ಕಿದ್ದ ಹಾಗೆ ತಮ್ಮ ಪೋಸ್ಟ್‌ ಒಂದರ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಜಾಲತಾಣದ ಮೂಲಕ ಸದಾ ತಮ್ಮ ಅಭಿಮಾನಿಗಳ ಜೊತೆಗೆ ಕನೆಕ್ಟ್‌ ಆಗಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಬರುವ ಮೂಲಕ, ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಆಗಾಗ ತಮ್ಮ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.

ಈಗ ತಾನು ಜಿಮ್‌ನಲ್ಲಿ ಇರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೊಟೋಗೆ ಕ್ಯಾಪ್ಷನ್ ಕೊಟ್ಟಿರುವ ರಶ್ಮಿಕಾ, ತನ್ನನ್ನು ತಾನೇ ಸೈಕೋ ಎಂದು ಕರೆದುಕೊಂಡಿದ್ದಾರೆ. ಅದು ಯಾಕೆ ಎನ್ನುವುದನ್ನು ಮುಂದೆ ಓದಿ..

ನಾನು ಜಿಮ್‌ನಲ್ಲಿ ವಾಸ ಮಾಡುವ ಸೈಕೋ: ರಶ್ಮಿಕಾ ಮಂದಣ್ಣ!

ನಟಿ ರಶ್ಮಿಕಾಳನ್ನು ಯಾರೋ ಸೈಕೋ ಎಂದು ಕರೆದಿಲ್ಲ. ತನ್ನನ್ನು ತಾನೇ ನಾನು ಸ್ವಲ್ಪ ಸೈಕೋ ಎಂದು ಕರೆದು ಕೊಂಡಿದ್ದಾಳೆ. ರಶ್ಮಿಕಾ ಅವರು ಜಿಮ್‌ನಲ್ಲಿ ಇರುವ ಫೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಜಿಮ್‌ನಲ್ಲಿ ಆಕೆಯ ಸುತ್ತಮುತ್ತ ಯಾರೂ ಇಲ್ಲ. ಜಿಮ್ ಖಾಲಿ ಖಾಲಿ ಆಗಿದೆ. ಈ ಫೊಟೋಗೆ ರಶ್ಮಿಕಾ ಕೊಟ್ಟಿರುವ ಕ್ಯಾಪ್ಷನ್ ಹೀಗಿದೆ. "ನಾನೊಬ್ಬಳೇ ಜಿಮ್‌ನಲ್ಲಿ ವಾಸ ಮಾಡುವ ಸೈಕೋ ಎಂದು ಮತ್ತೆ ಸಾಬೀತಾಯಿತು" ಎಂದು ಬರೆದಿದ್ದಾರೆ. ಅಂದರೆ ರಶ್ಮಿಕಾ ವರ್ಕೌಟ್‌ ಮಾಡುತ್ತಾ ಜಿಮ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಹಾಗಾಗಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.

ಫಿಟ್‌ನೆಸ್ ಬಗ್ಗೆ ಹೆಚ್ಚು ಕಾಳಜಿ ಮಾಡುವ ರಶ್ಮಿಕಾ ಮಂದಣ್ಣ!

ಫಿಟ್‌ನೆಸ್ ಬಗ್ಗೆ ಹೆಚ್ಚು ಕಾಳಜಿ ಮಾಡುವ ರಶ್ಮಿಕಾ ಮಂದಣ್ಣ!

ನಟಿ ರಶ್ಮಿಕಾ ಮಂದಣ್ಣ ವರ್ಕೌಟ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ತಮ್ಮ ದೇಹದ ಬಗ್ಗೆ ಹೆಚ್ಚಾಗಿ ಕಾಳಜಿ ಮಾಡುತ್ತಾರೆ. ರಶ್ಮಿಕಾ ವರ್ಕೌಟ್ ಮಾಡುವುದನ್ನು ತಪ್ಪಿಸುವುದಿಲ್ಲವಂತೆ. ಎಷ್ಟೇ ಬ್ಯುಸಿ ಇದ್ದರು ಕೂಡ ರಶ್ಮಿಕಾ ಮಂದಣ್ಣ ಅವರು ಸಂಜೆ ಮೇಲೆ 4 ರಿಂದ 5 ಗಂಟೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರಂತೆ. ತಾನು ವರ್ಕೌಟ್ ಮಾಡುವ ಹಲವು ವಿಡಿಯೋಗಳನ್ನು ಕೂಡ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಮೂಲಕ ರಶ್ಮಿ ಒಂದಷ್ಟು ಮಂದಿಗೆ ಸ್ಫೂರ್ತಿ ಕೂಡ ಹೌದು.

ಕಾರ್ಡಿಯೋ ರಶ್ಮಿಕಾಳ ಇಷ್ಟದ ವರ್ಕೌಟ್ ವಿಧ!

ಕಾರ್ಡಿಯೋ ರಶ್ಮಿಕಾಳ ಇಷ್ಟದ ವರ್ಕೌಟ್ ವಿಧ!

ಇನ್ನು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕೆಲವು ವರ್ಕೌಟ್‌ ವಿಧಾನಗಳು ಅಂದರೆ ಬಲು ಇಷ್ಟ ಅಂತೆ. ಕಾರ್ಡಿಯೋ, ಕೋರ್, ಸ್ಟ್ರೆಂತ್ ಟ್ರೈನಿಂಗ್, ವೇಟ್ ಟ್ರೇನಿಂಗ್ ಮಾಡುವುದು ಎಂದರೆ ರಶ್ಮಿಕಾ ಅವರಿಗೆ ತುಂಬಾ ಇಷ್ಟ ಅಂತೆ. ಈ ಬಗ್ಗೆ ರಶ್ಮಿಕಾ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಊಟದ ವಿಚಾರದಲ್ಲೂ ಕೂಡ ರಶ್ಮಿಕಾ ತುಂಬಾನೇ ಕಟ್ಟು ನಿಟ್ಟಂತೆ. ತಪ್ಪದೇ ರಶ್ಮಿಕಾ ಡಯೆಟ್ ಫಾಲೋ ಮಾಡುತ್ತಾರೆ.

ತೆಲುಗು, ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ!

ತೆಲುಗು, ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ!

ಸದ್ಯ ರಶ್ಮಿಕಾ ಸಂಭಾವನೆ 3 ಕೋಟಿ ಆಗಿದೆ ಎನ್ನುವ ಸುದ್ದಿ ಸಂಚಲನ ಮೂಡಿಸಿದೆ. ಸದ್ಯ ತೆಲುಗು ಮತ್ತು ಬಾಲಿವುಡ್‌ ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಅವರು ಮುಂದಿನ ತೆಲುಗು ಚಿತ್ರ ಪುಷ್ಪ ಭಾಗ ಎರಡು ಎನ್ನುವುದು ಗೊತ್ತಿದೆ. ಇನ್ನು ಬಾಲಿವುಡ್‌ನಲ್ಲಿ ರಶ್ಮಿಕಾಳ ಒಂದು ಚಿತ್ರವೂ ರಿಲೀಸ್‌ ಆಗಿಲ್ಲ. ಹಾಗಾಗಿ ಮೊದಲ ಬಾಲಿವುಡ್‌ ಚಿತ್ರ 'ಮಿಷನ್ ಮಜ್ನು' ರಿಲೀಸ್‌ಗಾಗಿ ರಶ್ಮಿಕಾ ಎದುರು ನೋಡುತ್ತಿದ್ದಾರೆ. ಆದರೆ ರಶ್ಮಿಕಾಳ ಮುಂದಿನ ಬಾಲಿವುಡ್‌ ಚಿತ್ರ ಯಾವುದು ಎನ್ನುವ ಬಗ್ಗೆಯೂ ಕುತೂಹಲ ಮೂಡಿದೆ.

More from Filmibeat

English summary
Rashmika Mandanna Is Psycho, When It Comes To Gym Matter: She Live In Gym All The Time,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X