Don't Miss!
- News
ಹೊಸ ಘಟಕ, ಪದಾಧಿಕಾರಿ ಘೋಷಣೆ, ಶೀಘ್ರವೇ ಚುನಾವಣೆ ಅಭ್ಯರ್ಥಿ ಆಯ್ಕೆ ಆರಂಭ: AAP
- Sports
ಟೆಸ್ಟ್ನಲ್ಲೂ ನಂಬರ್ 1 ಸ್ಥಾನದ ಮೇಲೆ ಕಣ್ಣಿಟ್ಟ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Lifestyle
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
- Automobiles
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಶ್ಮಿಕಾ ಮಂದಣ್ಣ ಮೇಲೆ ಮುನಿಸಿಕೊಂಡ ಉತ್ತರ ಕರ್ನಾಟಕ ಫ್ಯಾನ್ಸ್
ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ತೆಲಂಗಾಣದ ಅನೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿನ ಬೆಳಗಾವಿ, ವಿಜಯಪುರ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕಳೆದ 12 ದಿನಗಳಿಂದ ಸತತ ಮಳೆ ಹಾಗೂ ಪ್ರವಾಹದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಸಿಎಂ ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ಸಹ ನಡೆಸಿದ್ದಾರೆ.
ಈ ಕಡೆ ಹೈದರಾಬಾದ್‌ನಲ್ಲಿ ಸುಮಾರು 37 ಸಾವಿರಕ್ಕೂ ಹೆಚ್ಚು ಕುಟುಂಬಗಳು ಆಸ್ತಿ-ಪಾಸ್ತಿ ಕಳೆದುಕೊಂಡು ಅಸಹಾಯಕರಾಗಿದ್ದಾರೆ. ಮಹೇಶ್ ಬಾಬು, ಚಿರಂಜೀವಿ, ಪ್ರಭಾಸ್, ಜೂನಿಯರ್ ಎನ್ ಟಿ ಆರ್, ನಾಗಾರ್ಜುನ ಸೇರಿದಂತೆ ಹಲವು ತೆಲುಗು ನಟರು ಸಿಎಂ ಪರಿಹಾರ ನಿಧಿಗೆ ಪರಿಹಾರ ನೀಡಿದ್ದಾರೆ. ಹೈದರಾಬಾದ್ ಸ್ಥಿತಿ ಕಂಡ ನಟಿ ರಶ್ಮಿಕಾ ಮಂದಣ್ಣ ಟ್ವಿಟ್ಟರ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....
ಕರ್ನಾಟಕ
ತೊರೆದರೇ
ರಶ್ಮಿಕಾ
ಮಂದಣ್ಣ:
ವಿಳಾಸ
ಬದಲಿಸಿದ
ನಟಿ!

ಜಾಗರೂಕರಾಗಿರಿ ಹೈದರಾಬಾದ್
''ಹೈದರಾಬಾದ್.., ದಯವಿಟ್ಟು ನಿಮ್ಮ ಬಗ್ಗೆ ಕಾಳಜಿ ವಹಿಸಿ.! ಅಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ನಾನು ಕೇಳಲ್ಪಟ್ಟೆ..ಹೆಚ್ಚು ಜಾಗರೂಕರಾಗಿರಿ..ಪ್ರೀತಿಯ ಹಾರೈಕೆ, ಒಳ್ಳೆಯದಾಗಲಿ'' ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲೂ ಪರಿಸ್ಥಿತಿ ಕೆಟ್ಟದಾಗಿದೆ
ಹೈದರಾಬಾದ್‌ನಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿಯೂ ತೀವ್ರ ಮಳೆ ಸಂಭವಿಸಿದ್ದು, ಹಲವು ಕಡೆ ಪ್ರವಾಹ ಉಂಟಾಗಿದೆ. ಜನರ ಜೀವನ ಅಸ್ತವ್ಯಸ್ತವಾಗಿದೆ. ಆದರೆ, ಈ ಕುರಿತು ರಶ್ಮಿಕಾ ಮಂದಣ್ಣ ಒಂದೇ ಒಂದು ಸಾಂತ್ವನದ ಮಾತು ಸಹ ಹೇಳಿಲ್ಲ. ಆದರೆ, ಹೈದರಾಬಾದ್ ಬಗ್ಗೆ ಮಾತ್ರ ಮರುಗಿದ್ದಾರೆ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್
ಪ್ರವಾಹ:
ಸಂತ್ರಸ್ಥರ
ನೆರವು
ಧಾವಿಸಿದ
ಚಿರಂಜೀವಿ-ಪ್ರಭಾಸ್

ಹೈದರಾಬಾದ್‌ನಲ್ಲಿ ಮನೆ ಖರೀದಿ!
ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್‌ನಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ ಎಂಬ ವರದಿಗಳು ತಿಂಗಳಿಂದ ಸದ್ದು ಮಾಡ್ತಿದೆ. ಹೆಚ್ಚು ತೆಲುಗು ಸಿನಿಮಾಗಳನ್ನು ಮಾಡುತ್ತಿರುವ ಕಾರಣ ಹೆಚ್ಚು ಕಾಲ ಹೈದರಾಬಾದ್‌ನಲ್ಲೇ ಸಮಯ ಕಳೆಯಬೇಕಾಗಿದೆ. ಹಾಗಾಗಿ, ಹೈದರಾಬಾದ್‌ನಲ್ಲಿ ಮನೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.
Recommended Video

ರಶ್ಮಿಕಾ ಸಿನಿಮಾಗಳು
ಎರಡು ವರ್ಷದ ಹಿಂದೆ ಒಪ್ಪಿಕೊಂಡ ಚಿತ್ರ ಪೊಗರು. ಆದಾದ ಬಳಿಕ ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿಲ್ಲ. ಈಗಲೂ ಪರಭಾಷೆಯಲ್ಲಿ ರಶ್ಮಿಕಾ ಹೆಚ್ಚು ಪ್ರಾಜೆಕ್ಟ್ ಹೊಂದಿದ್ದಾರೆ. ಅಲ್ಲು ಅರ್ಜುನ್ ಜೊತೆ ಪುಷ್ಪ, ಕಾರ್ತಿ ಸುಲ್ತಾನ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.