For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಕೈನಲ್ಲಿರುವುದು 3 ಚಿತ್ರಗಳಷ್ಟೇ; ಮುಗಿಯಿತಾ ನ್ಯಾಷನಲ್ ಕ್ರಶ್ ಕ್ರೇಜ್?

  |

  ರಶ್ಮಿಕಾ ಮಂದಣ್ಣ ಬಹುಬೇಗನೇ ದೇಶದಾದ್ಯಂತ ಹೆಸರನ್ನು ಮಾಡಿ ಜನಪ್ರಿಯತೆ ಗಳಿಸಿದ ನಟಿ. ಮೊದಲಿಗೆ ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಚಲೋ ಚಿತ್ರದ ಮೂಲಕ ತೆಲುಗಿಗೆ ಹಾರಿದರು. ನಂತರ ತೆಲುಗಿನ ವಿಜಯ್ ದೇವರಕೊಂಡ ನಟನೆಯ ಗೀತಾ ಗೋವಿಂದಂ ಚಿತ್ರದ ಮೂಲಕ ದೊಡ್ಡ ಹೈಪ್ ಪಡೆದುಕೊಂಡ ರಶ್ಮಿಕಾ ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳಲು ಆರಂಭಿಸಿದರು.

  ಭಿನ್ನ ವಿಭಿನ್ನ ಜಾನರ್ ಚಿತ್ರಗಳಲ್ಲಿ ನಟಿಸಿ, ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಸಂಪಾದಿಸಿರುವ ನಟಿಯರಿಗೂ ಸಿಗದಷ್ಟು ಪ್ರಚಾರ ರಶ್ಮಿಕಾ ಮಂದಣ್ಣಗೆ ಲಭಿಸಿತು. ಸಾಮಾಜಿಕ ಜಾಲತಾಣದ ಯುಗದಲ್ಲಿ ನಟ ಹಾಗೂ ನಟಿಯರು ಎಷ್ಟು ಸುಲಭವಾಗಿ ಖ್ಯಾತಿ ಗಳಿಸಬಹುದು ಎಂಬುದಕ್ಕೆ ರಶ್ಮಿಕಾ ಮಂದಣ್ಣ ಉದಾಹರಣೆ ಎಂದೇ ಹೇಳಬಹುದು.

  ಹೀಗೆ ಖ್ಯಾತಿ ಪಡೆದ ರಶ್ಮಿಕಾ ಮಂದಣ್ಣ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು ಹಾಗೂ ಬಾಲಿವುಡ್‌ಗೂ ಪದಾರ್ಪಣೆ ಮಾಡಿದರು. ಬಾಲಿವುಡ್‌ನ ಮೊದಲ ಚಿತ್ರ 'ಗುಡ್ ಬೈ' ಸೋತು ಟಾಟಾ ಬೈ ಬೈ ಹೇಳಿದ್ದು ಮಿಷನ್ ಮಜ್ನು ನೇರವಾಗಿ ಓಟಿಟಿಗೆ ಬರಲಿದೆ. ರಶ್ಮಿಕಾ ಸದ್ಯ ತಮಿಳಿನ ವಿಜಯ್ ಜತೆ ನಟಿಸಿರುವ ಚಿತ್ರ ವಾರಿಸು ಬಿಡುಗಡೆಯಾಗಬೇಕಿದೆ. ವಾರಿಸು ಮುಂದಿನ ಸಂಕ್ರಾಂತಿ ಪ್ರಯುಕ್ತ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದ್ದು, ಇದಾದ ಬಳಿಕ ರಶ್ಮಿಕಾ ಮಂದಣ್ಣ ಮುಂದಿನ ಕಥೆ ಏನು ಎಂಬ ಪ್ರಶ್ನೆಗಳು ಸದ್ಯ ಸಾಮಾಜಿ ಜಾಲತಾಣದಲ್ಲಿ ಹರಿದಾಡಿವೆ.

  ವಾರಿಸು ಬಿಟ್ರೆ ಕೈನಲ್ಲಿರುವುದು ಮೂರು ಚಿತ್ರಗಳಷ್ಟೇ!

  ವಾರಿಸು ಬಿಟ್ರೆ ಕೈನಲ್ಲಿರುವುದು ಮೂರು ಚಿತ್ರಗಳಷ್ಟೇ!

  ಹೌದು, ವಾರಿಸು ಹೊರತುಪಡಿಸಿದರೆ ರಶ್ಮಿಕಾ ಮಂದಣ್ಣ ಕೈನಲ್ಲಿ ಮೂರು ಚಿತ್ರಗಳು ಮಾತ್ರ ಬಾಕಿ ಉಳಿದಿವೆ. ಅಲ್ಲು ಅರ್ಜುನ್ ನಟನೆಯ ಪುಷ್ಪ ದ ರೂಲ್, ಬಾಲಿವುಡ್‌ನ ಮತ್ತೊಂದು ಚಿತ್ರ 'ಅನಿಮಲ್' ಹಾಗೂ ತಮಿಳು ನಟ ಶಿವ ಕಾರ್ತಿಕೇಯನ್ ನಟನೆಯ 21ನೇ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಎಂದು ಈ ಮೂರು ಚಿತ್ರಗಳು ಮಾತ್ರ ಖಚಿತಗೊಂಡಿದ್ದು, ಬೇರೆ ಯಾವ ಚಿತ್ರಗಳೂ ಸಹ ರಶ್ಮಿಕಾ ಕೈನಲ್ಲಿ ಇಲ್ಲ.

  ಮಹೇಶ್ ಬಾಬು ಚಿತ್ರದಲ್ಲಿ ಐಟಂ ಸಾಂಗ್?

  ಮಹೇಶ್ ಬಾಬು ಚಿತ್ರದಲ್ಲಿ ಐಟಂ ಸಾಂಗ್?

  ಈ ಹಿಂದೆ ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣ ಇದೇ ಮಹೇಶ್ ಬಾಬು ಅಭಿನಯದ 28ನೇ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿದೆ. ಈ ಚಿತ್ರಕ್ಕೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದಾರೆ. ಸ್ಟಾರ್‌ಗಳ ಜತೆ ತೆರೆಹಂಚಿಕೊಳ್ಳಬೇಕಾದ ರಶ್ಮಿಕಾ ಮಂದಣ್ಣ ಸ್ಟಾರ್‌ಗಳ ಚಿತ್ರದಲ್ಲಿ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿ ಕೇಳಿ ಫೇಮ್ ತಗ್ಗಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಇನ್ನು ಈ ವರ್ಷ ಬಿಡುಗಡೆಗೊಂಡ ಸೀತಾ ರಾಮಮ್ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಾಗಲೂ ರಶ್ಮಿಕಾ ಕ್ರೇಜ್ ಮುಗಿಯಿತೇ ಎಂಬ ಪ್ರಶ್ನೆ ಎದ್ದಿತ್ತು.

  ರಶ್ಮಿಕಾಗೆ ಬಾಲಿವುಡ್‌ನಲ್ಲಿ ಭವಿಷ್ಯವಿಲ್ಲ ಎಂದ ಕೆಆರ್‌ಕೆ!

  ರಶ್ಮಿಕಾಗೆ ಬಾಲಿವುಡ್‌ನಲ್ಲಿ ಭವಿಷ್ಯವಿಲ್ಲ ಎಂದ ಕೆಆರ್‌ಕೆ!

  ಕೇವಲ ನೆಟ್ಟಿಗರು ಮಾತ್ರವಲ್ಲದೇ ಚಿತ್ರ ವಿಮರ್ಶಕ ಕೆಆರ್‌ಕೆ ಸಹ ಟ್ವಿಟರ್‌ನಲ್ಲಿ ರಶ್ಮಿಕಾ ಕತೆ ಮುಗಿಯಿತು ಆಕೆಗೆ ಭವಿಷ್ಯವಿಲ್ಲ ಎಂದಿದ್ದಾರೆ. "ರಶ್ಮಿಕಾ ಮಂದಣ್ಣ ಲುಕ್ ನೋಡಿದರೆ, ದಕ್ಷಿಣ ಭಾರತದ ಸಿನಿಮಾಗಳು ಹಾಗೂ ಭೋಜ್‌ಪುರಿ ಸಿನಿಮಾಗಳಿಗೆ ಸೂಕ್ತ ಹೊರತು ಹಿಂದಿ ಸಿನಿಮಾಗಳಿಗಲ್ಲ. ಹಿಂದಿ ಪ್ರೇಕ್ಷಕರು ರಶ್ಮಿಕಾಳನ್ನು ಹೀರೊಯಿನ್ ಆಗಿ ಒಪ್ಪಿಕೊಳ್ಳಲ್ಲ. ಈಗಾಗಲೇ ಐಶ್ವರ್ಯಾ, ಮಾಧುರಿ, ಕರೀನಾರನ್ನು ನೋಡಿದ್ದಾರೆ." ಎಂದು ಟ್ವೀಟ್ ಮಾಡಿದ್ದಾರೆ.

  English summary
  Rashmika Mandanna might lose her craze as she has only 3 movies in her hands after Varisu. Read on
  Wednesday, December 28, 2022, 17:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X