'ಕಿರಿಕ್ ಪಾರ್ಟಿ' ಬಳಿಕ ರಶ್ಮಿಕಾ ಖಾತೆಯಲ್ಲಿ 11 ಸಿನಿಮಾ, ಆದ್ರೆ ಆ ನಟನ.?
Recommended Video

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಪರಿಚಯವಾದ ರಶ್ಮಿಕಾ ಮಂದಣ್ಣ, ಈಗ ಸೌತ್ ಇಂಡಸ್ಟ್ರಿಯ ಬಹುಬೇಡಿಕೆಯ ನಟಿ. ಕನ್ನಡ, ತೆಲುಗು, ತಮಿಳು ಸ್ಟಾರ್ ಗಳಿಗೆ ಈಕೆಯೇ ಲಕ್ಕಿ ನಾಯಕಿ.
ಒಂದು ಸಿನಿಮಾ ಮುಗಿಯುಷ್ಟರಲ್ಲಿ ಮತ್ತೊಂದು ಸಿನಿಮಾ ಎಂಬಂತೆ ವರ್ಷಕ್ಕೆ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ಕಿರಿಕ್ ಪಾರ್ಟಿ' ಬಳಿಕ ಇಲ್ಲಿಯವರೆಗೂ ರಶ್ಮಿಕಾ ಅಭಿನಯದ ಆರು ಚಿತ್ರಗಳು ರಿಲೀಸ್ ಆಗಿವೆ. ಬಹುತೇಕ ಆರು ಸಿನಿಮಾನೂ ಸೂಪರ್ ಹಿಟ್.
ಅಷ್ಟೇ ಅಲ್ಲದೇ, ಕೊಡಗಿನ ಕುವರಿಯ ಕೈಯಲ್ಲಿ ಹೊಸದಾಗಿ ಐದು ಸಿನಿಮಾ ಇದೆ. ಈ ಐದು ಚಿತ್ರಗಳು ಸೌತ್ ಇಂಡಸ್ಟ್ರಿಯ ಬಿಗ್ ಸ್ಟಾರ್ ಗಳ ಪ್ರಾಜೆಕ್ಟ್ ಎಂಬುದು ವಿಶೇಷ. ಆದ್ರೆ, ಕಿರಿಕ್ ಪಾರ್ಟಿ ನಂತರ ನಟ ರಕ್ಷಿತ್ ಶೆಟ್ಟಿ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಬಟ್, ಎರಡು ನಿರೀಕ್ಷೆ ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ. ಯಾವುದು ಆ ಚಿತ್ರಗಳು? ಮುಂದೆ ಓದಿ.....

'ಡಿಯರ್ ಕಾಮ್ರೇಡ್'ಗೆ ಪೊಗರು
ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯಕ್ಕೆ ರಶ್ಮಿಕಾ ಕಾಣಿಸಿಕೊಳ್ಳುತ್ತಿರುವ ಕನ್ನಡದ ಸಿನಿಮಾ ಇದೊಂದೆ. ಆ ಕಡೆ ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾದಲ್ಲೂ ರಶ್ಮಿಕಾ ನಾಯಕಿ.

ಅಲ್ಲು ಅರ್ಜುನ್ ಮತ್ತು ನಾನಿ ಸಿನಿಮಾ
ತೆಲುಗು ನಟ ನ್ಯಾಚುರಲ್ ಸ್ಟಾರ್ ನಾನಿ ಅಭಿನಯಿಸುತ್ತಿರುವ ಭೀಷ್ಮ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರ ಜೊತೆಯಲ್ಲೇ ಅಲ್ಲು ಅರ್ಜುನ್ ಅಭಿನಯದ 20ನೇ ಚಿತ್ರಕ್ಕೂ ಕಿರಿಕ್ ಪಾರ್ಟಿ ಚೆಲುವೆ ಹೀರೋಯಿನ್.

ತಮಿಳಿನಲ್ಲಿ ಒಂದು ಸಿನಿಮಾ
ಇಷ್ಟು ದಿನ ಕನ್ನಡ ಮತ್ತು ತೆಲುಗಿನಲ್ಲಿ ಮೋಡಿ ಮಾಡುತ್ತಿದ್ದ ರಶ್ಮಿಕಾ, ಈಗ ಮೊದಲ ಸಲ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟ ಕಾರ್ತಿ ಅವರ 19ನೇ ಸಿನಿಮಾದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಎರಡು ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ
ಕಿರಿಕ್ ಪಾರ್ಟಿ ಚಿತ್ರದ ನಂತರ ಹಂಬಲ್ ಪೊಲಿಟಿಶಿಯನ್ ನೊಗರಾಜ್ ನಿರ್ಮಾಣ ಮಾಡಿದ್ದು ಬಿಟ್ಟರೇ, ನಾಯಕನಾಗಿ ಕಾಣಿಸಿಕೊಂಡ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಐದು ಭಾಷೆಯಲ್ಲಿ ತೆರೆಕಾಣಲಿರುವ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ. ಇನ್ನೊಂದು ಕಡೆ ಚಾರ್ಲಿ ಸಿನಿಮಾದ ಚಿತ್ರೀಕರಣವೂ ಸಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಈ ವರ್ಷವೇ ಈ ಎರಡು ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

ರಶ್ಮಿಕಾ ಚಿತ್ರಗಳ ಪಟ್ಟಿ
2016ರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆಗಿತ್ತು. 2017ರಲ್ಲಿ ಅಂಜನಿಪುತ್ರ, ಚಮಕ್, ತೆಲುಗಿನ ಚಲೋ ಚಿತ್ರಗಳು ಬಿಡುಗಡೆಯಾದವು. 2018ರಲ್ಲಿ ಗೀತಾ ಗೋವಿಂದಂ, ದೇವದಾಸ್ ಸಿನಿಮಾ ರಿಲೀಸ್ ಆಯ್ತು. 2019ರಲ್ಲಿ ಯಜಮಾನ ಚಿತ್ರ ರಿಲೀಸ್ ಆಗಿತ್ತು.


Click it and Unblock the Notifications











