For Quick Alerts
  ALLOW NOTIFICATIONS  
  For Daily Alerts

  ಸಕ್ಸಸ್ ಕಂಡರೂ ಈ ವರ್ಷ ರಶ್ಮಿಕಾ ಮಂದಣ್ಣ ಟ್ರೋಲ್ ಆಗಿದ್ದೇ ಜಾಸ್ತಿ

  |

  ಕನ್ನಡ ನಟಿ ರಶ್ಮಿಕಾ ಮಂದಣ್ಣ ವರ್ಷವೆಲ್ಲಾ ಸುದ್ದಿಯಲ್ಲಿದ್ದರು. ಸೋಶಿಯಲ್ ಮೀಡಿಯಾದಲ್ಲಂತೂ ಒಂದಲ್ಲ ಒಂದು ವಿಷ್ಯಕ್ಕೆ ಚರ್ಚೆಯಾಗುತ್ತಲೇ ಇದ್ದರೂ. ಸಿನಿಮಾಗಳಿಂದ ಹೆಚ್ಚು ಸದ್ದು ಮಾಡಿದ ಕೊಡಿಗಿನ ಕುವರಿ, ಟ್ರೋಲ್ ವಿಚಾರದಲ್ಲೂ ಜಾಸ್ತಿ ಸುದ್ದಿಯಾದರು.

  ಒಂದು ಕಡೆ ಹೊಸ ಹೊಸ ಸಿನಿಮಾಗೆ ಸಹಿ ಹಾಕುತ್ತಿದ್ದರು. ಮತ್ತೊಂದೆಡೆ ಆ ವಿಚಾರ, ಈ ವಿಚಾರ ಎಂದು ಟೀಕೆಗೂ ಗುರಿಯಾಗುತ್ತಿದ್ದರು. ಹಾಗಿದ್ರೆ, ರಶ್ಮಿಕಾ ಪಾಲಿಗೆ ಈ ವರ್ಷ ಹೇಗಿತ್ತು? ಕಿರಿಕ್ ಹುಡುಗಿಯ ಜೀವನದಲ್ಲಿ ಏನೆಲ್ಲಾ ನಡೆಯಿತು?

  ರಶ್ಮಿಕಾ ಕುರಿತು ಈ ವರ್ಷ ಸದ್ದು ಮಾಡಿದ್ದ ಪಾಸಿಟೀವ್ ವಿಷಯವೇನು? ನೆಗಿಟೀವ್ ವಿಷಯವೇನು? ಇದೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

  ಕನ್ನಡಕ್ಕೆ ಅಪಮಾನ ಗಲಾಟೆ

  ಕನ್ನಡಕ್ಕೆ ಅಪಮಾನ ಗಲಾಟೆ

  ತಮಿಳು ಸಂದರ್ಶನದಲ್ಲಿ ಭಾಗಿಯಾಗಿದ್ದ ರಶ್ಮಿಕಾ ಮಂದಣ್ಣ ''ನನಗೆ ಕನ್ನಡ ಭಾಷೆ ಮಾತನಾಡಲು ಸರಿಯಾಗಿ ಬರಲ್ಲ'' ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಳಿಕ, ಕರ್ನಾಟಕದಲ್ಲಿ ಕೆಲವು ಕನ್ನಡ ಪರ ಸಂಘಟನೆಗಳು, ಪ್ರತಿಭಟನೆಕಾರರು ವಿರೋಧ ಮಾಡಿದರು. ರಶ್ಮಿಕಾ ವಿರುದ್ಧ ಧಿಕ್ಕಾರ ಕೂಗಿದರು. ಫಿಲಂ ಚೇಂಬರ್ ನಲ್ಲಿ ದೂರು ಕೂಡ ದಾಖಲಿಸಿದರು. ಸೋಶಿಯಲ್ ಮೀಡಿಯಾದಲ್ಲೂ ರಶ್ಮಿಕಾಗೆ ಅವರನ್ನು ಕನ್ನಡಿಗರು ಟೀಕಿಸಿದರು.

  "ಕನ್ನಡ ತುಂಬ ಕಷ್ಟ, ಸರಿಯಾಗಿ ಮಾತನಾಡಲು ಬರಲ್ಲ" ಎಂದ ರಶ್ಮಿಕಾ

  ಅನುಷ್ಕಾ ಕನ್ನಡ ಪ್ರೇಮ, ರಶ್ಮಿಕಾ ಟ್ರೋಲ್

  ಅನುಷ್ಕಾ ಕನ್ನಡ ಪ್ರೇಮ, ರಶ್ಮಿಕಾ ಟ್ರೋಲ್

  ಇದಾದ ಬಳಿಕ ರಶ್ಮಕಾ ಮಂದಣ್ಣ ಪದೇ ಪದೇ ಟ್ರೋಲ್ ಆದರು. ಬಹುಭಾಷೆ ನಟಿ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಟ್ವೀಟ್ ಮಾಡಿದ್ರೆ, ಈ ಕಡೆ ರಶ್ಮಿಕಾ ಅವರನ್ನು ಜನರು ಟ್ರೋಲ್ ಮಾಡಿದರು. 'ಕನ್ನಡದ ಹುಡುಗಿ, ಬೇರೆ ಭಾಷೆಯಲ್ಲಿ ಅಷ್ಟು ಯಶಸ್ಸು ಕಂಡರೂ ಕನ್ನಡದ ಮೇಲಿನ ಅಭಿಮಾನಿ ಕಮ್ಮಿಯಾಗಿಲ್ಲ, ನೀವು ಕನ್ನಡಕ್ಕೆ ಅಪಮಾನ ಮಾಡ್ತಿದ್ದೀರಾ' ಎಂದು ಟೀಕಿಸಿದರು. ಈ ಬಗ್ಗೆ ರಶ್ಮಿಕಾ ಮಂದಣ್ಣ ತಾಯಿ ಬೇಸರ ಕೂಡ ವ್ಯಕ್ತಪಡಿಸಿದ್ದರು.

  'ಡಿಯರ್ ಕಾಮ್ರೇಡ್' ಲಿಪ್ ಲಾಕ್ ಸದ್ದು

  'ಡಿಯರ್ ಕಾಮ್ರೇಡ್' ಲಿಪ್ ಲಾಕ್ ಸದ್ದು

  'ಗೀತಾ ಗೋವಿಂದಂ' ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಮಾಡಿ ಭಾರಿ ಸದ್ದು ಮಾಡಿದ್ದ ರಶ್ಮಿಕಾ, 'ಡಿಯರ್ ಕಾಮ್ರೇಡ್' ಸಿನಿಮಾ ಮಾಡಿದರು. ಈ ಚಿತ್ರದಲ್ಲೂ ಲಿಪ್ ಲಾಕ್ ಸೀನ್ ಇತ್ತು. ಇದನ್ನು ಗಮನಿಸಿದ ಕನ್ನಡ ಪ್ರೇಕ್ಷಕರು ರಶ್ಮಿಕಾ ಅವರ ನಿರ್ಧಾರವನ್ನ ವಿರೋಧಿಸಿದರು. ಇದರಿಂದ ವಿಜಯ್ ದೇವರಕೊಂಡ ಅವರನ್ನು ಕೂಡ ಟ್ರೋಲ್ ಮಾಡಲಾಯಿತು.

  ಮತ್ತೆ ಲಿಪ್ ಲಾಕ್: ಸಂಚಲನ ಸೃಷ್ಟಿಸಿದ ರಶ್ಮಿಕಾ-ವಿಜಯ್ 'ಡಿಯರ್ ಕಾಮ್ರೇಡ್'ಮತ್ತೆ ಲಿಪ್ ಲಾಕ್: ಸಂಚಲನ ಸೃಷ್ಟಿಸಿದ ರಶ್ಮಿಕಾ-ವಿಜಯ್ 'ಡಿಯರ್ ಕಾಮ್ರೇಡ್'

  ತಮಿಳು ನಟ ಕಾರ್ತಿ ಬೇಸರ

  ತಮಿಳು ನಟ ಕಾರ್ತಿ ಬೇಸರ

  ತಮಿಳು ನಟ ಕಾರ್ತಿ ಜೊತೆ ರಶ್ಮಿಕಾ ಮಂದಣ್ಣ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಅಧಿಕೃತವಾಗಿ ಪ್ರಕಟಿಸಿರಲಿಲ್ಲ. ಅಷ್ಟರೊಳಗೆ ರಶ್ಮಿಕಾ ಟ್ವೀಟ್ ಮಾಡಿ ''ಸುಲ್ತಾನ್'' ಎಂದು ಹೇಳಿಬಿಟ್ಟಿದ್ದರು. ಇದರಿಂದ ನಟ ಕಾರ್ತಿ ಬೇಸರ ಮಾಡಿಕೊಂಡಿದ್ದರು ಎಂಬ ಸುದ್ದಿ ಕಾಲಿವುಡ್ ನಲ್ಲಿ ವರದಿಯಾಗಿತ್ತು.

  ಸಂಭಾವನೆ ವಿವಾದ

  ಸಂಭಾವನೆ ವಿವಾದ

  ಎರಡು ಸಿನಿಮಾ ಹಿಟ್ ಆದ ತಕ್ಷಣ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತು ಟಾಲಿವುಡ್ ವಲಯದಲ್ಲಿ ಕೇಳಿಬಂತು. ಕೋಟಿವರೆಗೂ ಸಂಭಾವನೆ ಬೇಡಿಕೆಯಿಡುತ್ತಿದ್ದಾರೆ ಎಂದು ನಿರ್ಮಾಪಕರು ದೂರಿದರು. ಇದರಿಂದ ಕೆಲವು ದೊಡ್ಡ ಪ್ರಾಜೆಕ್ಟ್ ಗಳನ್ನು ಕೂಡ ರಶ್ಮಿಕಾ ಕಳೆದುಕೊಳ್ಳಬೇಕಾಯಿತಂತೆ.

  ಸಂಭಾವನೆ ವಿಚಾರದಲ್ಲಿ ಕಿರಿಕ್ ಮಾಡಿಕೊಂಡ ರಶ್ಮಿಕಾ ಮಂದಣ್ಣ?ಸಂಭಾವನೆ ವಿಚಾರದಲ್ಲಿ ಕಿರಿಕ್ ಮಾಡಿಕೊಂಡ ರಶ್ಮಿಕಾ ಮಂದಣ್ಣ?

  ಪೊಗರು ಡೈಲಾಗ್ ಪಂಚ್

  ಪೊಗರು ಡೈಲಾಗ್ ಪಂಚ್

  ಕನ್ನಡದ ಬಗ್ಗೆ ಮೊದಲೇ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡುವಂತಹ ಡೈಲಾಗ್ ವೊಂದು ಪೊಗರು ಟ್ರೈಲರ್ ನಲ್ಲಿ ಬಂತು. ''ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು'' ಎಂದು ಧ್ರುವ ಸರ್ಜಾ ನಾಯಕಿ ರಶ್ಮಿಕಾಗೆ ಹೇಳ್ತಾರೆ. ಈ ಡೈಲಾಗ್ ಉದ್ದೇಶಪೂರ್ವಕವಾಗಿ ರಶ್ಮಿಕಾಗೆ ಟಾಂಗ್ ನೀಡಿದ್ದಾರೆ ಎಂದು ಟ್ರೋಲ್ ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಶ್ಮಿಕಾ ಕೂಡ ಕೂಲ್ ಆಗಿ ರಿಯಾಕ್ಟ್ ಮಾಡಿದ್ದರು.

  'ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು' ಡೈಲಾಗ್ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ'ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು' ಡೈಲಾಗ್ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ

  ಕೆಟ್ಟದಾಗಿ ನಿಂದಿಸಿದ್ದ ಟ್ರೋಲಿಗರು

  ಕೆಟ್ಟದಾಗಿ ನಿಂದಿಸಿದ್ದ ಟ್ರೋಲಿಗರು

  ರಶ್ಮಿಕಾ ಅವರ ಬಾಲ್ಯದ ಫೋಟೋ ಶೇರ್ ಮಾಡಿದ್ದ ಸಮಯದಲ್ಲಿ, ಆ ಫೋಟೋಗಳಿಗೆ ಬಹಳ ಕೆಟ್ಟದಾಗಿ, ಅಸಭ್ಯ ಪದಗಳಿಂದ ನಿಂದಿಸಿದ್ದರು. ಇದರ ವಿರುದ್ಧ ಕೆಲವರು ನಟಿಯರು ಕೂಡ ಬೇಸರ ವ್ಯಕ್ತಪಡಿಸಿ, ರಶ್ಮಿಕಾ ಪರ ದನಿ ಎತ್ತಿದ್ದರು.

  ರಶ್ಮಿಕಾ ಬಾಲ್ಯದ ಫೋಟೋಗೆ ಕೆಟ್ಟ ಪದ ಬಳಸಿ ಟ್ರೋಲ್: ಬೇಸರಗೊಂಡ ನಟಿರಶ್ಮಿಕಾ ಬಾಲ್ಯದ ಫೋಟೋಗೆ ಕೆಟ್ಟ ಪದ ಬಳಸಿ ಟ್ರೋಲ್: ಬೇಸರಗೊಂಡ ನಟಿ

  ಯಜಮಾನನ ರಾಣಿ

  ಯಜಮಾನನ ರಾಣಿ

  ದರ್ಶನ್ ಜೊತೆ ನಟಿಸಿದ್ದ ಯಜಮಾನ ಸಿನಿಮಾ ಈ ವರ್ಷದಲ್ಲಿ ತೆರೆಕಂಡಿತ್ತು. ಕನ್ನಡದಲ್ಲಿ ಈ ವರ್ಷ ರಶ್ಮಿಕಾ ಕಾಣಿಸಿಕೊಂಡ ಚಿತ್ರ ಇದೊಂದೆ. ಹಾಗಾಗಿ, ವರ್ಷವೆಲ್ಲ ಈ ಸಿನಿಮಾ ಸುದ್ದಿಯಲ್ಲಿತ್ತು. ಸಿನಿಮಾ ಟ್ರೈಲರ್, ಸಾಂಗ್, ಬಿಡುಗಡೆ, ದಾಖಲೆ, ಮೆಚ್ಚುಗೆ ಹೀಗೆ ವರ್ಷದ ಹಿಟ್ ಸಿನಿಮಾ ಯಜಮಾನ. ಈ ಚಿತ್ರಕ್ಕೆ ನಾಯಕಿ ರಶ್ಮಿಕಾ.

  ಸ್ಟಾರ್ ನಟರ ಹೊಸ ಸಿನಿಮಾಗಳು

  ಸ್ಟಾರ್ ನಟರ ಹೊಸ ಸಿನಿಮಾಗಳು

  ಮಹೇಶ್ ಬಾಬು ಜೊತೆ ಸರಿಲೇರು ನೀಕೇವರು, ಅಲ್ಲು ಅರ್ಜುನ್ ಅವರ 20ನೇ ಸಿನಿಮಾ, ನಿತೀನ್ ಜೊತೆ ಭೀಷ್ಮ, ಕಾರ್ತಿ ಜೊತೆ ಸುಲ್ತಾನ್, ಸಿನಿಮಾ 2019ರಲ್ಲಿ ಆರಂಭವಾಯಿತು. ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಟ್ರೈಲರ್ ಬಿಟ್ಟು ಸುದ್ದಿ ಆಯ್ತು.

  ಬಾಲಿವುಡ್ ಗೆ ರಶ್ಮಿಕಾ!

  ಬಾಲಿವುಡ್ ಗೆ ರಶ್ಮಿಕಾ!

  ಸೌತ್ ನಲ್ಲಿ ಕಮಾಲ್ ಮಾಡಿದ್ದ ರಶ್ಮಿಕಾ ಮಂದಣ್ಣ ಜೆರ್ಸಿ ರೀಮೇಕ್ ಮೂಲಕ ಬಾಲಿವುಡ್ ಗೆ ಹೋಗ್ತಾರೆ, ಹೋಗ್ತಿದ್ದಾರೆ,ಹೋಗಿಬಿಟ್ಟಿದ್ದಾರೆ ಎಂಬ ಸುದ್ದಿ ಪದೇ ಪದೇ ಕೇಳಿಬಂತು. ಆದರೆ, ಅಂತಿಮವಾಗಿ ಆ ಪ್ರಾಜೆಕ್ಟ್ ರಶ್ಮಿಕಾ ಅವರ ಕೈಚೆಲ್ಲಿತ್ತು.

  English summary
  Kannada actress Rashmika Mandanna name was most debated name in kannada film industry in 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X