'ವಿಜಯ್ ಜೊತೆ ಸಿನಿಮಾ ಬೇಡ' ಎಂದಿದ್ದ ರಶ್ಮಿಕಾ ತಾಯಿ 'ಕಾಮ್ರೇಡ್' ನೋಡಿ ಏನಂದ್ರು?
Recommended Video
ವಿಜಯ್ ದೇವರಕೊಂಡ ಜೊತೆ ಒಂದು ಸಿನಿಮಾ ಆಗಿದೆ, ಇನ್ನೊಂದು ಸಿನಿಮಾ ಬೇಡ ಎಂದು 'ಡಿಯರ್ ಕಾಮ್ರೇಡ್' ಚಿತ್ರವನ್ನ ನಿರಾಕರಿಸಿದ್ದರು ರಶ್ಮಿಕಾ ಮಂದಣ್ಣ ಕುಟುಂಬದವರು. ಆದರೆ ಸ್ಕ್ರಿಪ್ಟ್ ಬಗ್ಗೆ ಬಹಳ ಆಸಕ್ತಿ ಹೊಂದಿದ್ದ ರಶ್ಮಿಕಾ, ಈ ಚಿತ್ರವನ್ನ ಮಾಡಲೇಬೇಕು ಎಂದು ಒಪ್ಪಿಸಿ ಪ್ರಾಜೆಕ್ಟ್ ಗೆ ಜೈ ಎಂದಿದ್ದರು.
ಇದೀಗ, ವಿಜಯ್ ದೇವರಕೊಂಡ ಜೊತೆ ಎರಡನೇ ಸಲ ಜೋಡಿಯಾಗಿ ನಟಿಸಿದ್ದ 'ಡಿಯರ್ ಕಾಮ್ರೇಡ್' ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೊಂದು ಎಮೋಷನಲ್ ಸಿನಿಮಾ ಎಂದು ಹೇಳುತ್ತಿದ್ದಾರೆ.
ಸಿನಿಮಾ ರಿಲೀಸ್ ಆಗಿ ಮೂರ್ನಾಲ್ಕು ದಿನಗಳು ಕಳೆದಿದೆ. ಈಗ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಚಿತ್ರದ ಬಗ್ಗೆ ಮತ್ತು ಮಗಳ ಅಭಿನಯದ ಬಗ್ಗೆ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗಿದ್ರೆ, ರಶ್ಮಿಕಾ ಸಿನಿಮಾ ನೋಡಿ ಏನಂದ್ರು? ಮುಂದೆ ಓದಿ.....

ನಿನ್ನ ನೋಡಿ ಹೆಮ್ಮೆ ಆಗುತ್ತಿದೆ
''ಡಿಯರ್ ಲಿಲ್ಲಿ....
ನಿನ್ನ ಹೆತ್ತವರು ಹೆಮ್ಮೆಪಡುವಂತೆ ಮಾಡಿದ್ದಿಯ. ನೀನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನೀನು ಮಿಂಚುತ್ತಿರುವುದು ನಮಗೆ ಖುಷಿ ಕೊಟ್ಟಿದೆ. ಲವ್ ಯೂ ಬೇಬಿ.
ದೇವರಕೊಂಡ...ನೀವು ತುಂಬಾ ಚೆನ್ನಾಗಿ ಮಾಡಿದ್ದೀರ. ನಿಮ್ಮ ಮುಂದಿನ ಪ್ರಾಜೆಕ್ಟ್ ಗಳಿಗೆ ಆಲ್ ದಿ ಬೆಸ್ಟ್....
ನಿರ್ದೇಶಕ ಭರತ್ ನಿಜಕ್ಕೂ ಅದ್ಭುತ...ಮೈತ್ರಿ ಎಂಎಂ ಥ್ಯಾಂಕ್ ಯೂ'' ಎಂದು ಟ್ವಿಟ್ ಮಾಡಿದ್ದಾರೆ.

ಅಮ್ಮನ ಟ್ವೀಟ್ ಗೆ ರಶ್ಮಿಕಾ ದಿಲ್ ಖುಷ್
ಸುಮನ್ ಮಂದಣ್ಣ ಅವರ ಟ್ವೀಟ್ ನೋಡಿ ಫುಲ್ ಖುಷ ಆದ ರಶ್ಮಿಕಾ, ''ಮತ್ತೊಮ್ಮೆ ಸಿನಿಮಾ ನೋಡಿ ಅಮ್ಮ'' ಎಂದು ಮನವಿ ಮಾಡಿದ್ದಾರೆ. ಬಳಿಕ ಮಗಳ ಬಗ್ಗೆ ಮತ್ತಷ್ಟು ಮೆಚ್ಚುಗೆ ವ್ಯಕ್ತಪಡಿಸಿದ ಅಮ್ಮನಿಗೆ, ರಶ್ಮಿಕಾ ''ನೀನು ಇದನ್ನೆಲ್ಲಾ ಟ್ವೀಟ್ ನಲ್ಲಿ ಹೇಳಬೇಡ. ಫೋನ್ ಮಾಡು, ನನ್ನ ಬಳಿಯೂ ಫೋನ್ ಇದೆ, ನಿನ್ನ ಬಳಿಯೂ ಫೋನ್ ಇದೆ'' ಎಂದು ಕಾಲೆಳೆದಿದ್ದಾರೆ.

ದೇವರಕೊಂಡ ಜೊತೆ ಮುಂದಿನ ಸಿನಿಮಾ.!
'ಗೀತಾ ಗೋವಿಂದಂ' ಹಿಟ್ ಆದ ಬಳಿಕ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಬಗ್ಗೆ ಹಲವು ರೀತಿಯ ಕಾಮೆಂಟ್ ಗಳು ಬಂದವು. ಹಾಗಾಗಿ, ಈ ರೀತಿ ಆಗೋದು ಬೇಡ ಎಂಬ ಕಾರಣಕ್ಕೆ ಡಿಯರ್ ಕಾಮ್ರೇಡ್ ಚಿತ್ರವನ್ನ ಕುಟುಂಬಸ್ಥರು ನಿರಾಕರಿಸಿದ್ದರು. ನಂತರ ರಶ್ಮಿಕಾ ಆಸೆಯಂತೆ ಸಿನಿಮಾ ಮಾಡಿದ್ರು. ಎರಡು ಚಿತ್ರಗಳ ಸಕ್ಸಸ್ ಇನ್ನೊಂದು ಚಿತ್ರಕ್ಕೆ ನಾಂದಿ ಆಗುತ್ತಾ?

ಅಲ್ಲು ಅರ್ಜುನ್, ಮಹೇಶ್ ಜೊತೆ ರಶ್ಮಿಕಾ.!
ಸದ್ಯ ಅಲ್ಲು ಅರ್ಜುನ್ ಅಭಿನಯಿಸುತ್ತಿರುವ 19ನೇ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದಕ್ಕೂ ಮುಂಚೆ ಮಹೇಶ್ ಬಾಬು ಜೊತೆ 'ಸರಿಲೇರು ನೀಕೇವರು' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಕಾರ್ತಿ ಜೊತೆ ಒಂದು ಚಿತ್ರ ಮಾಡುತ್ತಿದ್ದಾರೆ. ಕನ್ನಡದಲ್ಲಿ ಪೊಗರು ಸಿನಿಮಾ ಮಾಡ್ತಿದ್ದಾರೆ.


Click it and Unblock the Notifications











