ಕಿರಿಕ್ ಬೆಡಗಿಯ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರಿಗೆ ವ್ಯಂಗ್ಯ ಮಾಡಿದ ರಶ್ಮಿಕಾ ತಾಯಿ

Recommended Video

Dear Comrade Movie: ಕಿರಿಕ್ ಬೆಡಗಿಯ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರಿಗೆ ವ್ಯಂಗ್ಯ ಮಾಡಿದ ರಶ್ಮಿಕಾ ತಾಯಿ

ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ನೆಟ್ಟಿಗರ ಆಕ್ರೋಶ ಇನ್ನೂ ಕಮ್ಮಿಯಾಗಿಲ್ಲ. ಕನ್ನಡ ಬರಲ್ಲ, ಮಾತನಾಡಲು ತುಂಬ ಕಷ್ಟ ಅಂತ ತಮಿಳು ಸಂದರ್ಶನದಲ್ಲಿ ರಶ್ಮಿಕಾ ಹೇಳಿದ್ದ ಮಾತು ಕನ್ನಡಾಭಿಮಾನಿಗಳನ್ನು ಕೆರಳಿಸಿದೆ. ಕನ್ನಡ ನಟಿಯಾಗಿ ಇಲ್ಲಿಯೆ ಹುಟ್ಟಿ ಬೆಳೆದು ಓದಿ ಈಗ ಕನ್ನಡ ಬರಲ್ಲ ಎಂದು ಹೇಳುತ್ತಿರುವ ರಶ್ಮಿಕಾ ಅವರನ್ನು ನೆಟ್ಟಿಗರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ರಶ್ಮಿಕಾ ಕನ್ನಡ ವಿರೋದಿ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಿರುವ ಸಂದರ್ಭದಲ್ಲಿ, ರಶ್ಮಿಕಾ ಈ ಹೇಳಿಕೆ ಕನ್ನಡಿಗರನ್ನು ಮತ್ತಷ್ಟು ಸಿಟ್ಟಿಗೇರಿಸಿತ್ತು. ಕನ್ನಡಿಗರು ಮೇಲಿತ್ತಿದ ಕಾರಣಕ್ಕಾಗಿಯೆ ಇಂದು ತೆಲುಗಿನಲ್ಲಿ ಮೆರೆಯುತ್ತಿದ್ದೀರಿ, ಆದ್ರೆ ಹತ್ತಿದ ಏಣಿಯನ್ನು ಒದ್ದು ಮುನ್ನಡೆಯುತ್ತಿದ್ದೀರಿ ಎಂದು ರಶ್ಮಿಕಾರನ್ನು ಪ್ರಶ್ನಿಸುತ್ತಿದ್ದಾರೆ.

ಇದರ ನಡುವೆ ಈಗ ರಶ್ಮಿಕಾ ತಾಯಿ ಸುಮನ ಮಂದಣ್ಣ ನೆಟ್ಟಿಗರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಡಿಯರ್ ಕಾಮ್ರೇಡ್ ಸಿನಿಮಾ ನೋಡಿ ಚಿತ್ರತಂಡವನ್ನು ಮತ್ತು ಮಗಳನ್ನು ಹಾಡಿ ಹೊಗಳಿರುವ ಸುಮನ ಮಂದಣ್ಣ ವಿರುದ್ಧ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ. ಸಾಮಾಜಿ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸುಮನ್ ಮಂದಣ್ಣ ವ್ಯಂಗ್ಯವಾಡಿದ್ದಾರೆ.

ಕನ್ನಡ ಹುಡುಗನಿಗೆ ಮೋಸ ಮಾಡಿದ್ದೀರಾ

ಕನ್ನಡ ಹುಡುಗನಿಗೆ ಮೋಸ ಮಾಡಿದ್ದೀರಾ

"ರಶ್ಮಿಕಾಳನ್ನು ಹಾಡಿಹೊಗಳಿದ ತಾಯಿ ಸುಮನಾ ಮಂದಣ್ಣ ವಿರುದ್ದ ನೆಟ್ಟಿಗರು ರೊಚ್ಚಿಗೆದಿದ್ದಾರೆ. ನಿಮ್ಮ ಮಗಳಿಗೆ ಮೊದಲು ಕನ್ನಡ ಕಲಿಸಿ. ಓದಿದ್ದು ಬೆಳೆದಿದ್ದು ಎಲ್ಲಾ ಕರ್ನಾಟಕದಲ್ಲಿ. ತಮಿಳಿಗೆ ಹೋಗಿ ಕನ್ನಡ ಗೊತ್ತಿಲ್ಲ ಅಂತ ಡವ್ ಮಾಡೋದು, ಕನ್ನಡ ಹುಡುಗನಿಗೆ ಮೋಸ ಮಾಡಿದ್ದೀರಾ. ನಿಮ್ಮನ್ನು ದೇವರು ಯಾವತ್ತು ಕ್ಷಮಿಸಲ್ಲ" ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಅವಳ ಮೂತಿನ ಜಗತ್ತಿಗೆ ತೋರಿಸಿದ್ದು ಕನ್ನಡ

ಅವಳ ಮೂತಿನ ಜಗತ್ತಿಗೆ ತೋರಿಸಿದ್ದು ಕನ್ನಡ

"ಮೇಡಮ್ ನಿಮ್ಮ ಮಗಳಿಗೆ ಮೊದಲು ಕನ್ನಡ ಕಲಿಸಮ್ಮ. ಎಲ್ಲೋ ಮೂಲೇಲಿ ಡಿಗ್ರಿ ಮಾಡಿಕೊಂಡು ಇದ್ದವಳನ್ನು ಮೇಲಕ್ಕೆ ತಂದಿದ್ದು ನಮ್ಮ ಕನ್ನಡ. ಅವಳ ಮೂತಿನ ಜಗತ್ತಿಗೆ ತೋರಿಸಿದ್ದು ನಮ್ಮ ಕನ್ನಡ. ಅಂತಹ ಕನ್ನಡವೆ ಬರಲ್ಲ ಅಂತಾಳೆ, ನಾಚಿಕೆ ಆಗಬೇಕು.

ನೆಟ್ಟಿಗರಿಗೆ ವ್ಯಂಗ್ಯಮಾಡಿದ ರಶ್ಮಿಕಾ ತಾಯಿ

ನೆಟ್ಟಿಗರಿಗೆ ವ್ಯಂಗ್ಯಮಾಡಿದ ರಶ್ಮಿಕಾ ತಾಯಿ

"ನೀವು ತುಂಬಾ ಬುದ್ದಿವಂತರು, ಉಪಯೋಗ ಆಗುವಂತಹದನ್ನು ಏನಾದ್ರು ಮಾಡಿ" ನೆಟ್ಟಿಗನ ಮಾತಿಗೆ ಸುಮನ ಮಂದಣ್ಣ ತಿರುಗೇಟು ನೀಡಿದ್ದಾರೆ. ಇನ್ನೋರ್ವನ ಮಾತಿಗೆ ಪ್ರತಿಕ್ರಿಯಿಸಿರುವ ಸಮನಾ "ನಿಮ್ಮಂತಹ ಸಾಧಕರ ಆಶೀರ್ವಾದ ಬೇಕು" ಎಂದು ಕಾಲೆಳೆಯುತ್ತಿದ್ದ ನೆಟ್ಟಿಗರನ್ನು ಅಣಕಿಸಿದ್ದಾರೆ.

ಸಂದರ್ಶನದಲ್ಲಿ ರಶ್ಮಿಕಾ ಮಾತು

ಸಂದರ್ಶನದಲ್ಲಿ ರಶ್ಮಿಕಾ ಮಾತು

ರಶ್ಮಿಕಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಂದರ್ಶಕ "ಕನ್ನಡ ತುಂಬ ಸುಲಭ ಅಲ್ಲವಾ ನಿಮಗೆ" ಎಂದು ಕೇಳಿದಕ್ಕೆ ರಶ್ಮಿಕಾ "ಕನ್ನಡ ತುಂಬ ಕಷ್ಟ, ಮಾತನಾಡಲು ಸರಿಯಾಗಿ ಬರಲ್ಲ" ಎಂದು ಹೇಳಿದ್ದರು. "ಕನ್ನಡ ಮಾತ್ರವಲ್ಲ ಯಾವ ಭಾಷೆಯನ್ನು ಸರಿಯಾಗಿ ಮಾತನಾಡಲು ಬರಲ್ಲ" ಎಂದು ತಮಿಳಿನಲ್ಲಿ ಹೇಳಿದ್ದರು. ವರ್ಷದಲ್ಲೆ ತೆಲುಗು ಮತ್ತು ತಮಿಳು ಮಾತನಾಡಲು ಕಲಿತ ರಶ್ಮಿಕಾ ಕರ್ನಾಟಕದಲ್ಲೆ ಹುಟ್ಟಿಬೆಳೆದರು ಕನ್ನಡ ಬರಲ್ವಾ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Kannada actor Rashmika Mandanna mother Suman Mandanna mocked to netizens for outraged to Rashmika in social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X