'ಚಲೋ' ನಿರ್ದೇಶಕನ ಜೊತೆಗೆ ರಶ್ಮಿಕಾ ಮತ್ತೊಂದು ಸಿನಿಮಾ

ನಟಿ ರಶ್ಮಿಕಾ ಮಂದಣ್ಣ ಇಂದು ಸಂಜೆ ಆರು ಗಂಟೆಗೆ ಎಲ್ಲರಿಗೂ ಹೇಳಿಕೊಳ್ಳುವ ಒಂದು ವಿಷಯ ಇದೆ ಎಂದು ಟ್ವೀಟ್ ಮಾಡಿದ್ದರು. ರಶ್ಮಿಕಾ ಯಾವ ವಿಷಯ ಹೇಳುತ್ತಾರೆ ಎಂದು ಅಭಿಮಾನಿಗಳು ಅವರ ಟ್ವೀಟ್ ಗಾಗಿ ಕಾಯುತ್ತಿದ್ದರು.

ಅದೇ ರೀತಿ ಆರು ಗಂಟೆಗೆ ಸರಿಯಾಗಿ ರಶ್ಮಿಕಾ ನ್ಯೂಸ್ ಹೇಳಿದ್ದಾರೆ. ತಮ್ಮ ಹೊಸ ಸಿನಿಮಾದ ಸುದ್ದಿಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ರಶ್ಮಿಕಾ ಈಗ 'ಬೀಷ್ಮ' ಎಂಬ ಹೊಸ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೊದಲ ಪೋಸ್ಟರ್ ಅನ್ನು ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

rashmika mandanna new telugu movie announced

'ಬೀಷ್ಮ' ಸಿನಿಮಾವನ್ನು ವೆಂಕಿ ಕುದುಮುಲಾ ನರ್ದೇಶಕ ಮಾಡುತ್ತಿದ್ದಾರೆ. ವಿಶೇಷ ಅಂದರೆ, ರಶ್ಮಿಕಾ ಅಭಿನಯದ 'ಚಲೋ' ಸಿನಿಮಾವನ್ನು ಕೂಡ ಇವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ಮೂಲಕ ಟಾಲಿವುಡ್ ಗೆ ರಶ್ಮಿಕಾರನ್ನು ಲಾಂಚ್ ಮಾಡಿದ್ದರು. ಆ ಚಿತ್ರದ ಬಳಿಕ ಟಾಲಿವುಡ್ ನಲ್ಲಿ ಸಖತ್ ಬ್ಯುಸಿ ಆದರು ರಶ್ಮಿಕಾ.

ಸೌತ್ ಚಿತ್ರರಂಗದ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿರುವ ರಶ್ಮಿಕಾ ಈ ಬಾರಿ ನಿತಿನ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿಂಗಲ್ ಫಾರ್ ಎವರ್ ಎಂಬ ಅಡಿ ಬರಹ ಹೊಂದಿರುವ ಈ ಸಿನಿಮಾ ಒಂಟಿ ಹುಡುಗನ ಕಥೆ ಹೇಳಬಹುದು.

More from Filmibeat

English summary
Actress Rashmika Mandanna new telugu movie announced. The movie titled as 'Bheeshma' and Nithin will playing lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X