For Quick Alerts
  ALLOW NOTIFICATIONS  
  For Daily Alerts

  'ಪೊಗರು' ಆದ್ಮೇಲೆ ರಶ್ಮಿಕಾ ಮಂದಣ್ಣ ಮತ್ತೊಂದು ಕನ್ನಡ ಚಿತ್ರ!

  |
  ಧೃವ ಸರ್ಜಾ ಡೈಲಾಗ್ ಗೆ ರಶ್ಮಿಕಾ ಕ್ಲೀನ್ ಬೌಲ್ಡ್..! | Rashmika Mandanna | Dhruva Sarja | Pogaru

  'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಸಿನಿಮಾ ಮಾಡೋದು ಕಮ್ಮಿ ಆಗಿದೆ ಎಂಬ ಆರೋಪ ಇದೆ. ತೆಲುಗಿನಲ್ಲಿ ಹೆಚ್ಚು ಯಶಸ್ಸು ಕಂಡ ಮೇಲೆ ಅಲ್ಲಿ ಹೆಚ್ಚಿನ ಸಿನಿಮಾ ಮಾಡ್ತಿದ್ದಾರೆ.

  ಧ್ರುವ ಸರ್ಜಾ ಜೊತೆ 'ಪೊಗರು' ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಆ ಚಿತ್ರದ ಬಳಿಕ ಯಾವ ಕನ್ನಡ ಸಿನಿಮಾನೂ ಅನೌನ್ಸ್ ಆಗಿಲ್ಲ. ಇದು ಕೂಡ ಈ ಆರೋಪಕ್ಕೆ ನೀಡಿದಂತಿದೆ.

  ಮತ್ತೆ ಸಂಭಾವನೆ ಜಾಸ್ತಿ: ನಟಿ ರಶ್ಮಿಕಾ ಮಂದಣ್ಣ ಇನ್ನಷ್ಟು ಕಾಸ್ಟ್ಲಿ.?ಮತ್ತೆ ಸಂಭಾವನೆ ಜಾಸ್ತಿ: ನಟಿ ರಶ್ಮಿಕಾ ಮಂದಣ್ಣ ಇನ್ನಷ್ಟು ಕಾಸ್ಟ್ಲಿ.?

  ಆದರೆ, ರಶ್ಮಿಕಾ ಮಂದಣ್ಣ ಪೊಗರು ಸಿನಿಮಾ ಮುಗಿದ ಮೇಲೆ ಇನ್ನೊಂದು ಕನ್ನಡ ಚಿತ್ರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚಿಗಷ್ಟೆ ಪೊಗರು ಸಿನಿಮಾದ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟಿ ಈ ಕುರಿತು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಅಷ್ಟಕ್ಕೂ, ರಶ್ಮಿಕಾ ಮುಂದಿನ ಚಿತ್ರ ಯಾವುದು? ಮುಂದೆ ಓದಿ...

  ಹೊಸ ಚಿತ್ರದ ತಯಾರಿ?

  ಹೊಸ ಚಿತ್ರದ ತಯಾರಿ?

  ಪೊಗರು ಸಿನಿಮಾ ಸೆಟ್ಟೇರಿ ಸುಮಾರು 2 ವರ್ಷ ಆಗಿದೆ. ಯಜಮಾನ ಸಿನಿಮಾ ಆರಂಭವಾಗಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಆಗಿದೆ. ಅದು ಬಿಡುಗಡೆಯೂ ಆಯ್ತು. ಈ ಎರಡು ಚಿತ್ರಗಳ ಬಳಿಕ ರಶ್ಮಿಕಾ ಯಾವ ಕನ್ನಡ ಚಿತ್ರದಲ್ಲೂ ನಟಿಸುತ್ತಿಲ್ಲ, ಮಾತುಕತೆಯೂ ಆಗಿರುವ ಸುಳಿವು ಇಲ್ಲ. ಕನ್ನಡ ಸಿನಿಮಾ ಮಾಡ್ತಾರಾ? ಇಲ್ವಾ ಎಂಬ ಕುತೂಹಲಕ್ಕೆ ರಶ್ಮಿಕಾ ಉತ್ತರಿಸಿದ್ದಾರೆ. ''ಕನ್ನಡ ಸಿನಿಮಾ ಇದೆ, ಆದರೆ ನಾನು ಹೇಳಲ್ಲ...ನಾನು ಸ್ವಲ್ಪ ಸೀಕ್ರೆಟ್'' ಎಂದು ಹೇಳಿದ್ದಾರೆ.

  ಇಷ್ಟು ಲೇಟ್ ಆಗಲು ಕಾರಣವೇನು?

  ಇಷ್ಟು ಲೇಟ್ ಆಗಲು ಕಾರಣವೇನು?

  2016ರಲ್ಲಿ ಕಿರಿಕ್ ಪಾರ್ಟಿ, 2017ರಲ್ಲಿ ಅಂಜನಿಪುತ್ರ ಮತ್ತು ಚಮಕ್ ಸಿನಿಮಾ 2018ರಲ್ಲಿ ಕನ್ನಡ ಸಿನಿಮಾ ಇಲ್ಲ, 2019ರಲ್ಲಿ ಯಜಮಾನ. ಸ್ಟಾರ್ ನಟಿಯಾಗಿದ್ದರೂ ಸಿಕ್ಕಾಪಟ್ಟೆ ಬೇಡಿಕೆ ಇದ್ದರೂ ವರ್ಷಕ್ಕೆ ಒಂದರಂತೆ ಕೂಡ ಸಿನಿಮಾ ಮಾಡಿಲ್ಲ. ಯಾಕೆ ಎಂದು ನೋಡಿದಾಗ ಆ ಕಡೆ ತೆಲುಗಿನಲ್ಲಿ ಹೆಚ್ಚು ಬ್ಯುಸಿ ಇದ್ದಾರೆ ಎಂಬ ಕಾರಣ ಸಿಗುತ್ತೆ.

  ಮಹೇಶ್ ಬಾಬು, ಅಲ್ಲು ಅರ್ಜುನ್ ಆಯ್ತು: ರಶ್ಮಿಕಾ ಮುಂದಿನ ಹೀರೋ ಈ 'ಬಿಗ್' ಸ್ಟಾರ್.!ಮಹೇಶ್ ಬಾಬು, ಅಲ್ಲು ಅರ್ಜುನ್ ಆಯ್ತು: ರಶ್ಮಿಕಾ ಮುಂದಿನ ಹೀರೋ ಈ 'ಬಿಗ್' ಸ್ಟಾರ್.!

  ಸಂಭಾವನೆ ವಿಚಾರದಿಂದ ಕನ್ನಡ ಸಿನಿಮಾ ಆಗ್ತಿಲ್ವಾ?

  ಸಂಭಾವನೆ ವಿಚಾರದಿಂದ ಕನ್ನಡ ಸಿನಿಮಾ ಆಗ್ತಿಲ್ವಾ?

  ತೆಲುಗಿನಲ್ಲಿ ಹಿಟ್ ಚಿತ್ರಗಳನ್ನು ನೀಡಿದ ಬಳಿಕ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಹೆಚ್ಚಾಗಿದೆ ಎಂಬ ಮಾತಿದೆ. ಲಕ್ಷದಿಂದ ಕೋಟಿವರೆಗೂ ಸಂಭಾವನೆ ಏರಿಕೆಯಾಗಿದ್ದು ಕನ್ನಡ ನಿರ್ಮಾಪಕರಿಗೆ ಇದು ದುಬಾರಿಯಾಗಿದೆ. ಹಾಗಾಗಿ, ಕನ್ನಡ ಸಿನಿಮಾಗೆ ರಶ್ಮಿಕಾ ಅವರನ್ನು ಕರೆತರಲು ಕಷ್ಟವಾಗುತ್ತಿದೆ ಎನ್ನಲಾಗಿದೆ.

  ಜೇಮ್ಸ್ ಚಿತ್ರಕ್ಕೆ ಅವಕಾಶ ಸಿಗುತ್ತಾ?

  ಜೇಮ್ಸ್ ಚಿತ್ರಕ್ಕೆ ಅವಕಾಶ ಸಿಗುತ್ತಾ?

  ಬಹುದ್ದೂರ್ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿರುವ ಜೇಮ್ಸ್ ಚಿತ್ರಕ್ಕಾಗಿ ನಾಯಕಿಯ ಹುಡುಕಾಟ ನಡೆಯುತ್ತಿದೆ. ಪುನೀತ್ ರಾಜ್ ಕುಮಾರ್ ನಾಯಕರಾಗಿರುವ ಈ ಚಿತ್ರಕ್ಕಾಗಿ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ, ನಿಧಿ ಅಗರ್ ವಾಲ್, ಶ್ರೀಲೀಲಾ ಅವರ ಜೊತೆ ಮಾತುಕತೆಗೆ ಮುಂದಾಗಿದೆಯಂತೆ ಚಿತ್ರತಂಡ. ಬಹುಶಃ ಈ ಚಿತ್ರಕ್ಕೆ ರಶ್ಮಿಕಾ ನಾಯಕಿ ಆದರೂ ಅಚ್ಚರಿ ಇಲ್ಲ.

  English summary
  Kannada actress Rashmika Mandanna acting in dhruva sarja's pogaru movie. then she will ready to act one more kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X