ಕನ್ನಡ ಸಿನಿಮಾ ಬಗ್ಗೆ ನಿರ್ಲಕ್ಷ್ಯ: ರಶ್ಮಿಕಾ ಮಂದಣ್ಣ ವಿರುದ್ಧ ಅಸಮಾಧಾನ
ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತೆ ಕನ್ನಡಿಗರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ. ಈ ಹಿಂದೆ ಕನ್ನಡ ಭಾಷೆ ಬರುವುದಿಲ್ಲವೆಂದು ಹೇಳಿ ಬಹುವಾಗಿ ಟ್ರೋಲ್ ಆಗಿದ್ದ ರಶ್ಮಿಕಾ ಮಂದಣ್ಣ ಈ ಬಾರಿ ಸಿನಿಮಾ ಕಾರಣಕ್ಕೆ ಟ್ರೋಲ್ ಆಗಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ 'ಪೊಗರು' ಸಿನಿಮಾ ಫೆಬ್ರವರಿ 19 ರಂದು ಬಿಡುಗಡೆ ಆಗಿದೆ. ಆದರೆ ರಶ್ಮಿಕಾ ಮಂದಣ್ಣ ಸಿನಿಮಾ ಬಗ್ಗೆ ಒಂದೇ ಒಂದು ಪೋಸ್ಟ್ ಸಹ ಸಾಮಾಜಿಕ ಜಾಲತಾಣದಲ್ಲಿ ಹಾಕಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮಂದಣ್ಣ ಬಹು ಸಕ್ರಿಯರಾಗಿರುತ್ತಾರೆ. ತಮ್ಮ ಎಲ್ಲ ಸಿನಿಮಾಗಳ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಬಾಲಿವುಡ್‌ನ ರ್ಯಾಪ್ ಹಾಡಿನ ವಿಡಿಯೋ, ಚಿತ್ರಗಳನ್ನು ಸಹ ಅವರು ಹಂಚಿಕೊಂಡಿದ್ದರು. ಆದರೆ ಪೊಗರು ಸಿನಿಮಾ ಬಗ್ಗೆ ಒಂದು ಪೋಸ್ಟ್ ಸಹ ಹಾಕಿಲ್ಲ. ಕನಿಷ್ಟ ಬಿಡುಗಡೆ ದಿನಾಂಕವನ್ನು ಸಹ ಪ್ರಕಟಿಸಿಲ್ಲ.

ರಶ್ಮಿಕಾ ಮಂದಣ್ಣ, 'ಪೊಗರು' ಸಿನಿಮಾದ ಪ್ರಚಾರಕ್ಕೆ ಬರುವುದಿಲ್ಲ ಎನ್ನಲಾಗಿತ್ತು ಆದರೆ ಒಂದು ದಿನ ಪ್ರಚಾರಕ್ಕಾಗಿ ಬಂದ ರಶ್ಮಿಕಾ ಮಂದಣ್ಣ, ಸಾಲಾಗಿ ಟಿವಿಗಳಿಗೆ ಸಂದರ್ಶನವನ್ನು ನೀಡಿ ತೆರಳಿದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಯಾವ ಪೋಸ್ಟ್ ಸಹ ಮಾಡಲಿಲ್ಲ.
ರಶ್ಮಿಕಾ ಪ್ರಸ್ತುತ ತೆಲುಗು, ತಮಿಳು, ಹಿಂದಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇನ್ನೂ ಚಿತ್ರೀಕರಣ ಹಂತದಲ್ಲಿರುವಾಗಲೇ ಸಿನಿಮಾಗಳ ಬಗ್ಗೆ ಸಾಕಷ್ಟು ಪೋಸ್ಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಕನ್ನಡದ ಸಿನಿಮಾ ಬಗ್ಗೆ ಏಕೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪ್ರಶ್ನಿಸಿದ್ದಾರೆ. ರಶ್ಮಿಕಾ ಗೆ 'ಪೊಗರು' ಚಿತ್ರದ ಬಗ್ಗೆ ಮಾತ್ರ ಅಸಡ್ಡೆಯೋ ಅಥವಾ ಕನ್ನಡದ ಬಗ್ಗೆಯೇ ಅಸಡ್ಡೆಯೇ ಗೊತ್ತಿಲ್ಲ.
Recommended Video
ನಟಿ ರಶ್ಮಿಕಾ ಮಂದಣ್ಣ ತೆಲುಗಿನ ಪುಷ್ಪ, ಹಿಂದಿಯ ಮಿಷನ್ ಮಜ್ನು ಹಾಗೂ ಇನ್ನೂ ಹೆಸರಿಡದ ಮತ್ತೊಂದು ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸಹ ಇರಲಿದ್ದಾರೆ.


Click it and Unblock the Notifications











