ಸತತ ಟ್ರೋಲ್: ನಟಿಯಾಗಿದ್ದಕ್ಕೆ ಬೆಲೆ ತೆರುತ್ತಿದ್ದೇನೆ ಎಂದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಈಗ ದೊಡ್ಡ ನಟಿ. 'ಕಿರಿಕ್ ಪಾರ್ಟಿ' ಸಿನಿಮಾದಿಂದ ಚಿತ್ರರಂಗಕ್ಕೆ ಬಂದ ಈ ಬೆಡಗಿ, ಕಡಿಮೆ ಅವಧಿಯಲ್ಲಿ ಬೆಳೆದ ಎತ್ತರ ಸಾಮಾನ್ಯದ್ದಲ್ಲ. ರಶ್ಮಿಕಾ ಈಗ ಎಷ್ಟೆ ದೊಡ್ಡ ಸ್ಟಾರ್ ನಟಿ ಎನಿಸಿಕೊಂಡಿದ್ದರೂ ಪಾಪ ಟ್ರೋಲ್‌ಗಳಿಂದ ಮಾತ್ರ ತಪ್ಪಿಸಿಕೊಳ್ಳಲಾಗುತ್ತಿಲ್ಲ.

ತಮ್ಮ ವೃತ್ತಿ ಜೀವನದ ಆರಂಭದಿಂದಲೂ ರಶ್ಮಿಕಾ ಮಂದಣ್ಣ ಟ್ರೋಲ್‌ಗೆ ಗುರಿಯಾಗುತ್ತಲೇ ಬಂದಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕ್‌ಅಪ್, ತೆಲುಗು ಸಿನಿಮಾ ಸಂದರ್ಶನದಲ್ಲಿ ತಮಗೆ ಕನ್ನಡ ಭಾಷೆ ಮಾತನಾಡಲು ಬರಲ್ಲ ಎಂದಿದ್ದು ಇನ್ನೂ ಹಲವು ಕಾರಣಗಳಿಗೆ ರಶ್ಮಿಕಾ ಸತತವಾಗಿ ಟ್ರೋಲ್‌ಗೆ ಒಳಗಾಗುತ್ತಲೇ ಬಂದಿದ್ದಾರೆ. ಕೆಲವೊಮ್ಮೆಯಂತೂ ಮಿತಿ ದಾಟಿ ರಶ್ಮಿಕಾರನ್ನು ಟ್ರೋಲ್ ಮಾಡಿದ್ದೂ ಸಹ ಇದೆ.

ಇದೀಗ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬಹಳ ಉದ್ದದ ಪತ್ರವೊಂದನ್ನು ಬರೆದಿದ್ದು, ತಮ್ಮನ್ನು ಟ್ರೋಲ್ ಮಾಡುವವರನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ತಾನು ಮಾಡದ ಕಾರ್ಯಕ್ಕೆ ತನ್ನನ್ನು ಗುರಿ ಮಾಡಲಾಗುತ್ತಿದೆ ಇದರಿಂದ ನನ್ನ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು ಹೇಳಿದ್ದಾರೆ.

''ಕೆಲವು ದಿನ, ವಾರ, ತಿಂಗಳು ವರ್ಷಗಳಿಂದಲೂ ಕೆಲವು ವಿಷಯಗಳು ನನಗೆ ಸಮಸ್ಯೆ ನೀಡುತ್ತಿವೆ. ಈ ವಿಷಯದ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು. ಆದರೆ ಈಗ ಆ ನಿರ್ಣಯ ಮಾಡಿದ್ದೇನೆ. ನಾನು ನನ್ನ ವೃತ್ತಿ ಜೀವನ ಆರಂಭಿಸಿದಾಗಿನಿಂದಲೂ ಸಾಕಷ್ಟು ದ್ವೇಷ, ನಿಂದನೆಗಳನ್ನು ಸ್ವೀಕರಿಸುತ್ತಲೇ ಬಂದಿದ್ದೇನೆ. ಕೆಲವು ಟ್ರೋಲರ್‌ಗಳಿಗಂತೂ ನಾನು ಒಂದು ರೀತಿ ಪಂಚಿಂಗ್ ಬ್ಯಾಗ್ ಆಗಿದ್ದೇನೆ. ಸಾಕಷ್ಟು ಋಣಾತ್ಮಕತೆಯನ್ನು ನಾನು ಪಡೆಯುತ್ತಲೇ ಬಂದಿದ್ದೇನೆ'' ಎಂದಿದ್ದಾರೆ ರಶ್ಮಿಕಾ.

ನಟಿಯಾಗಿದ್ದಕ್ಕೆ ಬೆಲೆ ತೆರುತ್ತಿದ್ದೇನೆ: ರಶ್ಮಿಕಾ

ನಟಿಯಾಗಿದ್ದಕ್ಕೆ ಬೆಲೆ ತೆರುತ್ತಿದ್ದೇನೆ: ರಶ್ಮಿಕಾ

''ನಾನು ಆಯ್ದುಕೊಂಡಿರುವ ಈ ವೃತ್ತಿ ಜೀವನಕ್ಕೆ ತೆರಬೇಕಾದ ಮೌಲ್ಯವಿದು ಎಂಬುದು ನನಗೆ ಗೊತ್ತಿದೆ. ಎಲ್ಲರೂ ನನ್ನ ಪ್ರೀತಿಸಬೇಕು ಎಂದುಕೊಳ್ಳುವುದು ಸಹ ತಪ್ಪು ಎಂಬುದು ಸಹ ನನಗೆ ಅರಿವಿದೆ. ಆದರೆ, ನಾನು ನಿಮಗೆ ಹಿಡಿಸಲಿಲ್ಲ ಎಂದ ಕೂಡಲೇ ನನ್ನ ಬಗ್ಗೆ ವಿಷಕಾರಬೇಕು ಎಂದಲ್ಲವಲ್ಲ. ನಿಮ್ಮನ್ನೆಲ್ಲ ಮನರಂಜಿಸಲು ನಾನು ಪ್ರತಿದಿನ ಎಷ್ಟು ಕಷ್ಟಪಡುತ್ತೇನೆ ಎಂಬುದು ನನಗೆ ಮಾತ್ರವೆ ತಿಳಿದಿದೆ. ನಾನು ಮಾಡುವ ಕೆಲಸದಿಂದ ನೀವು ಅನುಭವಿಸುವ ಖುಷಿ ನನಗೆ ಬಹು ಮುಖ್ಯ. ಅದಕ್ಕಾಗಿಯೇ ನಾನು ಪ್ರತಿದಿನ ಶ್ರಮಪಡುತ್ತಿದ್ದೇನೆ. ನೀವು ಮತ್ತು ನಾನು ಇಬ್ಬರೂ ಹೆಮ್ಮೆ ಪಡುವಂಥಹಾ ಕೆಲಸ ಮಾಡಬೇಕೆಂದು ಪ್ರಯತ್ನಿಸುತ್ತಲೇ ಇದ್ದೀನಿ'' ಎಂದಿದ್ದಾರೆ ರಶ್ಮಿಕಾ.

ಹೃದಯ ಒಡೆದಂತೆ ಭಾಸವಾಗುತ್ತದೆ: ರಶ್ಮಿಕಾ

ಹೃದಯ ಒಡೆದಂತೆ ಭಾಸವಾಗುತ್ತದೆ: ರಶ್ಮಿಕಾ

''ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಅಪಹಾಸ್ಯ ಮಾಡಿದಾಗ ಅದೂ ನಾನು ಹೇಳದ ವಿಷಯಕ್ಕಾಗಿ ನನ್ನನ್ನು ಕೆಟ್ಟದಾಗಿ ಮೂದಲಿಸಿದಾಗ ಹೃದಯ ಒಡೆದಂತೆ ಭಾಸವಾಗುತ್ತದೆ. ಸಂದರ್ಶನಗಳಲ್ಲಿ ನಾನು ಹೇಳಿದ ಕೆಲವು ವಿಷಯಗಳನ್ನು ಹೆಕ್ಕಿ ಅದಕ್ಕೆ ಬೇರೆ ರೂಪ ನೀಡುವುದು. ನಾನು ಬೇರೆ ಅರ್ಥದಲ್ಲಿ ಹೇಳಿದ ವಿಷಯಗಳನ್ನು ನನ್ನ ಚಾರಿತ್ರ್ಯಹರಣಕ್ಕೆ ಬಳಸುವುದು. ನಾನು ಹೇಳದ ವಿಷಯಗಳನ್ನು ಹೇಳಿದ್ದಾಗಿ ಪ್ರಕಟಿಸುವುದು. ಇದರಿಂದ ನನ್ನ ವೈಯಕ್ತಿಕ ಸಂಬಂಧ ಹಾಗೂ ವೃತ್ತಿ ಸಂಬಂಧ ಹದಗೆಡುತ್ತದೆ'' ಎಂದಿದ್ದಾರೆ ರಶ್ಮಿಕಾ.

ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತೇನೆ: ರಶ್ಮಿಕಾ

ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತೇನೆ: ರಶ್ಮಿಕಾ

''ನನ್ನ ಬಗ್ಗೆ ಮಾಡಲಾಗುವ ರಚನಾತ್ಮಕ ಟೀಕೆಗಳನ್ನು ನಾನು ಸ್ವಾಗತಿಸುತ್ತೇನೆ. ಆ ರೀತಿಯ ಟೀಕೆಗಳು ನಾನು ಸುಧಾರಿಸಲು, ಇನ್ನಷ್ಟು ಉತ್ತಮಗೊಳ್ಳಲು ಸಹಕರಿಸುತ್ತವೆ. ಆದರೆ ನಕಾರಾತ್ಮಕತೆ, ಮೂದಲಿಕೆಯಿಂದ ಯಾವ ಲಾಭವೂ ಇಲ್ಲ. ಇಂಥಹುವನ್ನು ನಿರ್ಲಕ್ಷಿಸು ಎಂದೇ ನನಗೆ ಹೇಳಲಾಗುತ್ತಿತ್ತು, ನಾನೂ ಹಾಗೆಯೇ ಮಾಡುತ್ತಲೇ ಬಂದೆ. ಆದರೆ ಅದು ಇನ್ನಷ್ಟು-ಮತ್ತಷ್ಟು ಹೆಚ್ಚಾಗುತ್ತಾ ಸಾಗಿದೆ. ಈಗ ಅದರ ಬಗ್ಗೆ ಮಾತನಾಡಿ, ನಾನು ಯಾರನ್ನೂ ಮೆಚ್ಚಿಸುವ ಅಥವಾ ಮನಗೆಲ್ಲುವ ಪ್ರಯತ್ನ ಮಾಡುತ್ತಿಲ್ಲ. ನಾನು ಸ್ವೀಕರಿಸುತ್ತಿರುವ ಈ ದ್ವೇಷ, ಮೂದಲಿಕೆಗಳು ನನ್ನ ವ್ಯಕ್ತಿತ್ವವನ್ನು ಕೆಟ್ಟ ರೀತಿಯಲ್ಲಿ ಬದಲಾಯಿಸುವುದು ಅಥವಾ ನಾನು ಸಮಾಜಕ್ಕೆ ವಿಮುಖಗೊಳ್ಳುವಂತೆ ಆಗುವುದು ನನಗೆ ಇಷ್ಟವಿಲ್ಲ'' ಎಂದು ಬರೆದುಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.

ನೀವು ಖುಷಿಪಟ್ಟರೆ ನನಗೂ ಖುಷಿ: ರಶ್ಮಿಕಾ

ನೀವು ಖುಷಿಪಟ್ಟರೆ ನನಗೂ ಖುಷಿ: ರಶ್ಮಿಕಾ

''ಕೆಟ್ಟ ಮಾತುಗಳ ನಡುವೆ, ಒಳ್ಳೆಯ ಮಾತುಗಳನ್ನಾಡಿರುವುದನ್ನೂ ನಾನು ಗಮನಿಸಿದ್ದೇನೆ. ಕೆಲವರಿಂದ ಸ್ವೀಕರಿಸಿರುವ ಪ್ರೀತಿಯನ್ನೂ ನಾನು ಗೌರವಿಸುತ್ತೇನೆ. ನಿಮ್ಮಗಳ ಸತತ ಪ್ರೀತಿಯೇ ನಾನು ಮುಂದಕ್ಕೆ ಸಾಗುವಂತೆ ಮಾಡಿದೆ, ಹಾಗೂ ಇಂದು ಈ ವಿಷಯವನ್ನು ಎಲ್ಲರೊಟ್ಟಿಗೆ ಹಂಚಿಕೊಳ್ಳುವ ಧೈರ್ಯ ನೀಡಿದೆ. ಬೇರೆಯವರಿಗೆ ಪ್ರೀತಿಯನ್ನು ಮಾತ್ರವೇ ನೀಡುತ್ತಲೇ ಸಾಗುತ್ತೇನೆ ನಾನು. ಈವರೆಗೆ ನಾನು ಕೆಲಸ ಮಾಡಿದ ಎಲ್ಲರನ್ನೂ ನಾನು ಗೌರವದಿಂದ ಕಂಡಿದ್ದೇನೆ. ಸದಾ ಕಷ್ಟಪಟ್ಟು ಕೆಲಸ ಮಾಡುವುದನ್ನು ನಾನು ಮುಂದುವರೆಸುತ್ತೇನೆ. ನೀವು ಖುಷಿ ಪಟ್ಟರಷ್ಟೆ ಅದು ನನಗೆ ಖುಷಿ ನೀಡುತ್ತದೆ. ದಯವಿಟ್ಟು ಎಲ್ಲರಿಗೂ ದಯೆ ತೋರಿಸಿ, ನಾವೆಲ್ಲರೂ ಒಳ್ಳೆಯ ಕಾರ್ಯವನ್ನು ಮಾಡುವ ಪ್ರಯತ್ನದಲ್ಲಿದ್ದೇವೆ'' ಎಂದಿದ್ದಾರೆ ರಶ್ಮಿಕಾ.

More from Filmibeat

English summary
Actress Rashmika Mandanna wrote long letter on Instagram about being trolled for past few years continuously. She request people to be kind to everyone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X