ಫೋರ್ಬ್ಸ್- ನಂ1 ಸ್ಥಾನದಲ್ಲಿರುವ ಬಗ್ಗೆ ನಟಿ ರಶ್ಮಿಕಾ ಸಂತಸ!

ನಟಿ ರಶ್ಮಿಕಾ ಮಂದಣ್ಣ ಅವರು ಈಗ ಕ್ರಶ್ಮಿಕಾ ಮಂದಣ್ಣ ಅಂತ ಕರೆಸಿ ಕೊಳ್ಳುತ್ತಾರೆ. ಯಾಕೆಂದರೆ ಅವರ ಬಗ್ಗೆ ಅಷ್ಟೊಂದು ಕ್ರೇಜ್ ಇದೆ ಅಂತಾ. ರಶ್ಮಿಕಾ ಬಗ್ಗೆ ಯಾವುದೇ ರೀತಿಯ ವಿಚಾರಗಳು ಹರಿದಾಡಿದರೂ ಕೂಡ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ರಶ್ಮಿಕಾ ಒಂದು ಕಡೆ ತಮ್ಮ ಸಿನಿಮಾಗಳ ಮೂಲಕ ದಾಖಲೆಗಳನ್ನು ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಯಾವುದೋ ಒಂದು ಸಿನಿಮಾರಂಗಕ್ಕೆ ಸೀಮಿತ ಆಗಿಲ್ಲ. ನಾಲ್ಕು ಚಿತ್ರರಂಗಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ರಶ್ಮಿಕಾ ಒಂದು ರೀತಿ ಲಕ್ಕಿ ಚಾರ್ಮ್‌ ಇರುವ ನಟಿ. ಯಾಕೆಂದರೆ ಆಕೆ ಮಾಡುವ ಸಿನಿಮಾಗಳು ಒಂದು ರೇಂಜಿಗೆ ಸದ್ದು ಮಾಡುತ್ತವೆ. ಅವರ ಸಿನಿಮಾಗಳು ದಾಖಲೆ ಮಾಡುವಲ್ಲಿ ಸದಾ ಮುಂದೆ ಇರುತ್ತವೆ.

ರಶ್ಮಿಕಾ ಹೆಸರು ಫೋರ್ಬ್ಸ್ ಪಟ್ಟಿಯಲ್ಲಿ ದಾಖಲೆ ಮಾಡಿದೆ. ರಶ್ಮಿಕಾ ಈ ವಿಚಾರವನ್ನು ಹಂಚಿಕೊಂಡು ರಶ್ಮಿಕಾ ಸಂತಸ ವ್ಯಕ್ತ ಪಡಿಸಿದ್ದಾರೆ. ಈ ದಾಖಲೆ ರಶ್ಮಿಕಾ ಇರುವ ಜನಪ್ರಿಯತೆಯನ್ನು ಸಾರಿ ಹೇಳುತ್ತಿದೆ.

ದಾಖಲೆ ಬಗ್ಗೆ ರಶ್ಮಿಕಾ ಸಂತಸ!

ದಾಖಲೆ ಬಗ್ಗೆ ರಶ್ಮಿಕಾ ಸಂತಸ!

ಫೋರ್ಬ್ಸ್ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಸ್ಥಾನ ಪಡೆದಿದ್ದಾರೆ. ದಕ್ಷಿಣ ಭಾರತದ ಸೆಲೆಬ್ರಿಟಿಗಳ ಪೈಕಿ ರಶ್ಮಿಕಾ ಕೂಡ ಗಮನ ಸೆಳೆದಿದ್ದಾರೆ. ಈ ವರ್ಷ ದಕ್ಷಿಣ ಭಾರತದ ಅತಿ ಹೆಚ್ಚು ಪ್ರಭಾವಿ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ರಶ್ಮಿಕಾ ನಂ.1 ಆಗಿದ್ದರು. ಈ ಬಗ್ಗೆ ನಟಿ ರಶ್ಮಿಕಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಅಪರಿಮಿತ ಪ್ರೀತಿಗೆ ಧನ್ಯವಾದಗಳು: ರಶ್ಮಿಕಾ ಮಂದಣ್ಣ!

ಅಪರಿಮಿತ ಪ್ರೀತಿಗೆ ಧನ್ಯವಾದಗಳು: ರಶ್ಮಿಕಾ ಮಂದಣ್ಣ!

ಜನರಿಂದ ಸಿಗುತ್ತಲಿರುವ ಪ್ರೀತಿಗೆ ನಟಿ ರಶ್ಮಿಕಾ ಮಂದಣ್ಣ ಧನ್ಯವಾದ ತಿಳಿಸಿದ್ದಾರೆ. "ಜನರಿಂದ ಸಿಗುತ್ತಿರುವ ಪ್ರೀತಿಗೆ ಧನ್ಯವಾದಗಳು. ಇದಕ್ಕಾಗಿಯೇ ನಾನು ಕೆಲಸ ಮಾಡುತ್ತಿರುವುದು. ಈ ಪ್ರೀತಿ ಅಪರಿಮಿತವಾದದ್ದು. ವಿನಮ್ರವಾಗಿ ಇರಲು ಪ್ರಯತ್ನಿಸುತ್ತಿದ್ದೇನೆ" ಎಂದು ರಶ್ಮಿಕಾ ಮಂದಣ್ಣ ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಶ್ಮಿಕಾ ಖ್ಯಾತಿ ದಿನೇ ದಿನೇ ಹೆಚ್ಚುತಿದೆ. ಇದು ಆಕೆಯ ಸಿನಿಮಾ ಮತ್ತು ವೈಯಕ್ತಿಕ ಬದುಕಿಗೆ ಪ್ಲಸ್‌ ಪಾಯಿಂಟ್‌ ಆಗಿದೆ.

ಕಿರಿಕ್‌ ಪಾರ್ಟಿ ಮೂಲಕ ಬದಲಾಯ್ತು ರಶ್ಮಿಕಾ ಲಕ್!

ಕಿರಿಕ್‌ ಪಾರ್ಟಿ ಮೂಲಕ ಬದಲಾಯ್ತು ರಶ್ಮಿಕಾ ಲಕ್!

ಕಿರಿಕ್‌ ಪಾರ್ಟಿ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ನಟಿ ರಶ್ಮಿಕಾ ಆರಂಭಿಸಿದರು, ನಂತರ ಆಕೆ ಮಾಡಿದ್ದೇಲ್ಲಾ ದೊಡ್ಡ ದೊಡ್ಡ ಸಿನಿಮಾಗಳೆ. ಪುನೀತ್ ರಾಜ್‌ಕುಮಾರ್, ದರ್ಶನ್, ಗಣೇಶ್, ಸೇರಿದಂತೆ ಹಲವು ಸ್ಟಾರ್‌ ನಟರ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ಆಕೆ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದರು. ಅಲ್ಲಿಯೂ ರಶ್ಮಿಕಾಗೆ ಲಕ್‌ ಖುಲಾಯಿಸಿತು.

ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ!

ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ!

ನಟಿ ರಶ್ಮಿಕಾ ತೆಲುಗು ಮತ್ತು ತಮಿಳಿನಲ್ಲಿ ಅಭಿನಯಿಸಿದ್ದೇ ತಡ ಬಾಲಿವುಡ್‌ನತ್ತ ಪ್ರಯಾಣ ಮಾಡೆ ಬಿಟ್ರು. ಸದ್ಯ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ರಶ್ಮಿಕಾಳನ್ನು ಹುಡುಕಿಕೊಂಡು ಬರ್ತಿವೆ. ಮಿಷನ್‌ ಮಜ್ನು ಮತ್ತು ಗುಡ್‌ ಬೈ ಸಿನಿಮಾಗಳಲ್ಲಿ ರಶ್ಮಿಕಾ ಅಭಿನಯಿಸಿದ್ದಾರೆ. ಎರಡನೇ ಸಿನಿಮಾದಲ್ಲೇ ಆಕೆ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್ ಜೊತೆಗೆ ತೆರೆಹಂಚಿಕೊಳ್ತಿದ್ದಾರೆ. ಸದ್ಯ ತಮಿಳು, ತೆಲುಗು, ಬಾಲಿವುಡ್‌ ಸಿನಿಮಾಗಳನ್ನೇ ರಶ್ಮಿಕಾ ಹೆಚ್ಚಾಗಿ ಒಪ್ಪಿಕೊಳ್ಳುತ್ತಾ ಇದ್ದಾರೆ. ಹಾಗಾಗಿ ರಶ್ಮಿಕಾ ಮುಂದೆ ಕನ್ನಡ ಸಿನಿಮಾಗಳನ್ನು ಮಾಡ್ತಾರ? ಅವರ ಮುಂದಿನ ಚಿತ್ರ ಯಾವುದು ಎನ್ನುವ ಪ್ರಶ್ನೆ ಸೃಷ್ಟಿ ಆಗಿದೆ.

More from Filmibeat

English summary
Rashmika Mandanna Overwhelmed On Being Named Most Influential South Star By Forbes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X