For Quick Alerts
  ALLOW NOTIFICATIONS  
  For Daily Alerts

  ತೆಲಂಗಾಣ ರಾಜ್ಯದ ಪರ ಕ್ರಿಕೆಟ್ ಆಡಲಿರುವ ಕನ್ನಡತಿ ರಶ್ಮಿಕಾ.!

  By Bharath Kumar
  |
  ತೆಲುಗು ಇಂಡಸ್ಟ್ರಿಗೆ ಹಾರಿ ಮತ್ತೊಬ್ಬರ ಜೊತೆ ಲವ್ ಅಲ್ಲಿ ಬಿದ್ದ ರಶ್ಮಿಕಾ !!! | Filmibeat Kannada

  'ಕಿರಿಕ್ ಪಾರ್ಟಿ' ಹುಡುಗಿ ರಶ್ಮಿಕಾ ಮಂದಣ್ಣ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಗಿಸುತ್ತಿದ್ದಂತೆ ರಶ್ಮಿಕಾ ಬಹುದೊಡ್ಡ ಸವಾಲು ಸ್ವೀಕರಿಸಲಿದ್ದಾರೆ.

  ತೆಲಂಗಾಣ ರಾಜ್ಯ ಕ್ರಿಕೆಟ್ ತಂಡದ ಪರವಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಕ್ರಿಕೆಟ್ ಆಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಟ್ರೈನಿಂಗ್ ಕೂಡ ಪಡೆದುಕೊಳ್ಳುತ್ತಿದ್ದಾರೆ.

  ಹೊಸ ಚಿತ್ರದಲ್ಲಿ ಕ್ರೀಡಾಪಟು ಆದ ರಶ್ಮಿಕಾ: ಯಾರು ಹೀರೋ.? ಹೊಸ ಚಿತ್ರದಲ್ಲಿ ಕ್ರೀಡಾಪಟು ಆದ ರಶ್ಮಿಕಾ: ಯಾರು ಹೀರೋ.?

  ಮಾಡಿದ ಕೆಲವೇ ಸಿನಿಮಾಗಳ ಮೂಲಕ ಬಹುದೊಡ್ಡ ಯಶಸ್ಸು ಕಂಡಿರುವ ರಶ್ಮಿಕಾ ವೃತ್ತಿ ಜೀವನದಲ್ಲಿ ಮತ್ತೊಂದು ಸವಾಲು ಎದುರಾಗಿದೆ. ಅಷ್ಟಕ್ಕೂ, ರಶ್ಮಿಕಾ ಕ್ರಿಕೆಟ್ ಆಟಗಾರ್ತಿ ಆಗಿದ್ದು ಯಾರಿಗಾಗಿ.? ಯಾವಾಗನಿಂದ ಕ್ರಿಕೆಟ್ ಆಡಲಿದ್ದಾರೆ.? ಎಂದು ತಿಳಿಯಲು ಮುಂದೆ ಓದಿ....

  ಕ್ರಿಕೆಟ್ ಪಟುವಾದ ರಶ್ಮಿಕಾ.!

  ಕ್ರಿಕೆಟ್ ಪಟುವಾದ ರಶ್ಮಿಕಾ.!

  ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ರಶ್ಮಿಕಾ ಕ್ರಿಕೆಟ್ ಪಟುವಾಗಿ ಕಾಣಿಸಿಕೊಳ್ಳಲಿದ್ದಾರಂತೆ. ತೆಲಂಗಾಣ ರಾಜ್ಯದ ಕ್ರಿಕೆಟ್ ಆಟಗಾರ್ತಿಯಾಗಿ ಬಣ್ಣ ಹಚ್ಚಲಿದ್ದಾರಂತೆ.

  'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ರಶ್ಮಿಕಾ

  'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ರಶ್ಮಿಕಾ

  ಚೊಚ್ಚಲ ತೆಲುಗು ಸಿನಿಮಾ ಚಲೋ ನಂತರ ಈಗ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅಭಿನಯಿಸುತ್ತಿರುವ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಅವರು ಸ್ಟೂಡೆಂಟ್ ಯೂನಿಯನ್ ಸಂಘದ ಲೀಡರ್ ಆಗಿದ್ರೆ, ರಶ್ಮಿಕಾ ತೆಲಂಗಾಣ ರಾಜ್ಯ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ.

  ಟಾಲಿವುಡ್ ನ ಮತ್ತೊಂದು ಚಿತ್ರಕ್ಕೆ ರಶ್ಮಿಕಾ ನಾಯಕಿ ಟಾಲಿವುಡ್ ನ ಮತ್ತೊಂದು ಚಿತ್ರಕ್ಕೆ ರಶ್ಮಿಕಾ ನಾಯಕಿ

  ಹೈದ್ರಾಬಾದ್ ನಲ್ಲಿ ಕೋಚಿಂಗ್

  ಹೈದ್ರಾಬಾದ್ ನಲ್ಲಿ ಕೋಚಿಂಗ್

  ಈಗಾಗಲೇ ಕ್ರಿಕೆಟ್ ಪಟು ಪಾತ್ರಕ್ಕಾಗಿ ರಶ್ಮಿಕಾ ಹೈದ್ರಾಬಾದ್ ನಲ್ಲಿ ಕ್ರಿಕೆಟ್ ಕೋಚಿಂಗ್ ಪಡೆದುಕೊಳ್ಳುತ್ತಿದ್ದಾರೆ. ಬ್ಯಾಟಿಂಗ್, ಫೀಲ್ಡಿಂಗ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

  ದರ್ಶನ್ ಬಗ್ಗೆ ಮೆಚ್ಚುಗೆ ಮಾತನಾಡಿದ ಮಂಗಳೂರು ಬೆಡಗಿ ದರ್ಶನ್ ಬಗ್ಗೆ ಮೆಚ್ಚುಗೆ ಮಾತನಾಡಿದ ಮಂಗಳೂರು ಬೆಡಗಿ

  ಮಲ್ಟಿಸ್ಟಾರ್ ಚಿತ್ರದಲ್ಲೂ ನಟನೆ.!

  ಮಲ್ಟಿಸ್ಟಾರ್ ಚಿತ್ರದಲ್ಲೂ ನಟನೆ.!

  ವಿಜಯ ದೇವರಕೊಂಡ ಜೊತೆಯಲ್ಲಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ. ಇದರ ನಡುವೆ ನಾಗಾರ್ಜುನ ಮತ್ತು ನಾನಿ ಅಭಿನಯದ ಮಲ್ಟಿಸ್ಟಾರ್ ಸಿನಿಮಾದಲ್ಲೂ ರಶ್ಮಿಕಾ ನಟಿಸಲಿದ್ದಾರಂತೆ. ಹೀಗೆ, ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟೊಟ್ಟಿಗೆ ರಶ್ಮಿಕಾ ಬ್ಯುಸಿಯಾಗಲಿದ್ದಾರೆ.

  English summary
  Actress Rashmika Mandanna, who made her debut this year with Telugu film Chalo, will share the screen space with Vijay Deverakonda in Dear Comrade. As per the reports, Rashmika will be seen as a cricketer playing for Telangana state.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X