ಪೊಲೀಸ್ ಆಫೀಸರ್ ಆದ ರಶ್ಮಿಕಾ ಮಂದಣ್ಣ

Recommended Video

ಖಾಕಿಯಲ್ಲಿ ನೋಡಿ ರಶ್ಮಿಕಾ ಖದರ್..! | Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾ ಆದ್ಮೇಲೆ ಇಷ್ಟು ದೊಡ್ಡ ಸ್ಟಾರ್ ನಟಿ ಆಗ್ತೀನಿ ಅಂತ ಸ್ವತಃ ರಶ್ಮಿಕಾ ಕೂಡ ಊಹಿಸಿರಲಿಲ್ಲ ಅನಿಸುತ್ತೆ. ಮಾಡಿದ ಮೊದಲ ಚಿತ್ರದಲ್ಲಿಯೇ ಯುವರಸಿಕರ ಮನದಲ್ಲಿ ಜಾಗ ಪಡೆದುಕೊಂಡ ರಶ್ಮಿಕಾ 'ಕರ್ನಾಟಕದ ಕ್ರಶ್' ಆದರು.

ಆಮೇಲೆ ಗೋಲ್ಡನ್ ಸ್ಟಾರ್ ಜೊತೆ 'ಚಮಕ್', ಪವರ್ ಸ್ಟಾರ್ ಜೊತೆ 'ಅಂಜನಿಪುತ್ರ' ಎಂಬ ಸಿನಿಮಾದಲ್ಲಿ ನಟಿಸಿದ್ರು. ಈ ಮಧ್ಯೆ ಟಾಲಿವುಡ್ ಗೆ ಲಗ್ಗೆಯಿಟ್ಟ ರಶ್ಮಿಕಾ ಏಕಾಏಕಿ ತೆಲುಗು ಸ್ಟಾರ್ ಫೆವರೇಟ್ ಆಗಿಬಿಟ್ಟರು.

ಈಗ ತೆಲುಗು ಸಿನಿಲೋಕದಲ್ಲಿ ಬಹುಬೇಡಿಕೆ ಹೊಂದಿರುವ ನಟಿಯರ ಪೈಕಿ ಕನ್ನಡದ ರಶ್ಮಿಕಾ ಕೂಡ ಒಬ್ಬರು. 'ಚಲೋ', 'ಗೀತಾ ಗೋವಿಂದಂ' ಈಗ 'ದೇವದಾಸ್' ಚಿತ್ರಗಳಲ್ಲಿ ನಟಿಸುವ ಮೂಲಕ ಹ್ಯಾಟ್ರಿಕ್ ಸಕ್ಸಸ್ ಮಾಡುವ ಹಾದಿಯಲ್ಲಿದ್ದಾರೆ. ಹೀಗಿರುವಾಗ, ಚಿತ್ರಪ್ರೇಮಿಗಳಿಗೆ ಸರ್ಪ್ರೈಸ್ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ಮುಂದೆ ಓದಿ.....

ಪೊಲೀಸ್ ಆಫೀಸರ್ ಆದ್ರಾ ರಶ್ಮಿಕಾ

ಪೊಲೀಸ್ ಆಫೀಸರ್ ಆದ್ರಾ ರಶ್ಮಿಕಾ

ಇಷ್ಟು ದಿನ ಕಾಲೇಜ್ ಹುಡುಗಿ, ಸಂಪ್ರದಾಯಸ್ಥ ಹುಡುಗಿ,ಮಾಡ್ರನ್ ಹುಡುಗಿ, ಗೃಹಿಣಿ ಪಾತ್ರದಲ್ಲಿ ನಟಿಸಿದ್ದ ರಶ್ಮಿಕಾ ಇದೇ ಮೊದಲ ಭಾರಿಗೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಪೊಲೀಸ್ ಪಾತ್ರದಲ್ಲಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

'ದೇವದಾಸ್' ಚಿತ್ರದಲ್ಲಿ ಪೊಲೀಸ್.!

'ದೇವದಾಸ್' ಚಿತ್ರದಲ್ಲಿ ಪೊಲೀಸ್.!

ನಾಗಾರ್ಜುನ, ನಾನಿ ಅಭಿನಯದ 'ದೇವದಾಸ್' ಸಿನಿಮಾ ನಿನ್ನೆ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಪೊಲೀಸ್ ಆಫೀಸರ್ ಪಾತ್ರವನ್ನ ನಿಭಾಯಿಸಿದ್ದಾರೆ. ಆದ್ರೆ, ಇಡೀ ಸಿನಿಮಾ ಪೂರ್ತಿ ಪೊಲೀಸ್ ಅಥವಾ ದೃಶ್ಯವೊಂದರಲ್ಲಿ ಪೊಲೀಸ್ ಎಂಬುದು ಸಿನಿಮಾದಲ್ಲೇ ನೋಡಬೇಕು.

ಹ್ಯಾಟ್ರಿಕ್ ಜಯದತ್ತ 'ಗೀತಾ'

ಹ್ಯಾಟ್ರಿಕ್ ಜಯದತ್ತ 'ಗೀತಾ'

ತೆಲುಗಿನ ಮೊದಲ 'ಚಲೋ' ಮೂಲಕವೇ ಟಾಲಿವುಡ್ ಪ್ರೇಕ್ಷಕರ ಹೃಯದಕ್ಕೆ ಕಾಲಿಟ್ಟ ರಶ್ಮಿಕಾ, ಎರಡನೇ ಸಿನಿಮಾ 'ಗೀತಾ-ಗೋವಿಂದಂ' ಚಿತ್ರದಲ್ಲಿ ಮತ್ತಷ್ಟು ಗಟ್ಟಿಯಾಗಿ ಕುಳಿತುಕೊಂಡರು. ಈಗ 'ದೇವದಾಸ್ ಸಿನಿಮಾ ಮೂಲಕ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದಾರೆ. ಬಹುಶಃ ಇಲ್ಲಿಂದ ಹ್ಯಾಟ್ರಿಕ್ ಹೀರೋಯಿನ್ ಎನಿಸಿಕೊಂಡ್ರು ಅಚ್ಚರಿಯಿಲ್ಲ.

'ವೃತ್ರ' ಚಿತ್ರ ಕೈಬಿಟ್ಟ ರಶ್ಮಿಕಾ

'ವೃತ್ರ' ಚಿತ್ರ ಕೈಬಿಟ್ಟ ರಶ್ಮಿಕಾ

ಇತ್ತೀಚಿಗೆ ಕನ್ನಡದಲ್ಲಿ 'ವೃತ್ರ' ಎಂಬ ಸಿನಿಮಾವೊಂದನ್ನ ರಶ್ಮಿಕಾ ಮಾಡಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಈ ಚಿತ್ರದಿಂದ ಹೊರಬಂದರು. ಇದು ಮಹಿಳಾ ಪ್ರಧಾನ ಸಿನಿಮಾ ಆಗಿತ್ತು. ಹೊಸ ರೀತಿ ಪಾತ್ರ ನಿಭಾಯಿಸುವ ಅವಕಾಶ ರಶ್ಮಿಕಾಗೆ ಸಿಕ್ಕಿತ್ತು. ಆದ್ರೆ, ಪಾತ್ರಕ್ಕೆ ತಾನು ಸೂಕ್ತವಲ್ಲ ಎಂಬ ಕಾರಣದಿಂದ ಹಿಂದೆ ಸರಿದರು.

'ಯಜಮಾನ' ಬಿಡುಗಡೆಯಾಗಬೇಕಿದೆ

'ಯಜಮಾನ' ಬಿಡುಗಡೆಯಾಗಬೇಕಿದೆ

ಇತ್ತ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಈ ಸಿನಿಮಾದ ಎರಡು ಹಾಡು ಬಾಕಿ ಇದೆ. ಸದ್ಯ, ದರ್ಶನ್ ಕಾರು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ, ಈ ಸಿನಿಮಾ ರಿಲೀಸ್ ಆಗುವುದು ಸ್ವಲ್ಪ ತಡವಾಗಬಹುದು.

More from Filmibeat

English summary
Rashmika mandanna's third telugu movie devdas has released and get positive response from audience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X