For Quick Alerts
  ALLOW NOTIFICATIONS  
  For Daily Alerts

  'ನಾನು ಹಿಂದಿರುಗಿ ಹೋಗಬೇಕು' ಎಂದು ಆಸೆ ವ್ಯಕ್ತಪಡಿಸಿದ ನಟಿ ರಶ್ಮಿಕಾ ಮಂದಣ್ಣ

  |

  ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸುವ ಮೂಲಕ ಬ್ಯುಸಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಬೇಡಿಕೆ ಇರುವ ನಟಿಯಾಗಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಕ್ರಿಯಳಾಗಿರುವ ರಶ್ಮಿಕಾ ಮಂದಣ್ಣ ತನ್ನೆಲ್ಲಾ ಅಪ್‌ಡೇಟ್‌ಗಳನ್ನು ಅಲ್ಲಿ ತಿಳಿಸುತ್ತಾ ಇರುತ್ತಾರೆ.

  ಮೊನ್ನೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶುಭಾಶಯವನ್ನು ಕೋರಿ ಫೋಟೊ ಹಂಚಿಕೊಂಡಿದ್ದ ರಶ್ಮಿಕಾ ಮಂದಣ್ಣ ಬಹಳ ದಿನಗಳ ಬಳಿಕ ಪೋಸ್ಟ್‌ನಲ್ಲಿ ಕನ್ನಡ ಬಳಸಿದ್ದಕ್ಕೆ ಸುದ್ದಿಯಾಗಿದ್ದರು. ಈ ಫೋಸ್ಟ್ ಮಾಡಿದ ಮರುದಿನವೇ ರಶ್ಮಿಕಾ ಮಂದಣ್ಣ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಇತ್ತೀಚೆಗಿನ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡು 'ಐ ವಾಂಟ್ ಟು ಗೋ ಬ್ಯಾಕ್' ಎಂದು ಬರೆದುಕೊಂಡಿದ್ದಾರೆ.

  ರಶ್ಮಿಕಾ ನಾನು ಹಿಂದಿರುಗಿ ಹೋಗಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದು, ಸದ್ಯ ಈ ಪೋಸ್ಟ್‌ಗೆ ಭಿನ್ನ ವಿಭಿನ್ನ ಕಾಮೆಂಟ್‌ಗಳು ಬರುತ್ತಿವೆ. ಕೆಲವರು ಯಾವ ವಿಷಯದಲ್ಲಿ ಹಿಂದಿರುಗಿ ಹೋಗಬೇಕೆಂದು ಬಯಸುತ್ತಿದ್ದೀರ ಎಂದು ರಶ್ಮಿಕಾಗೆ ಪ್ರಶ್ನೆ ಹಾಕುತ್ತಿದ್ದರೆ, ಕೆಲ ನೆಟ್ಟಿಗರು ವಾಪಸ್ ಕರ್ನಾಟಕಕ್ಕೆ ಬರುವ ಆಸೆಯಾ, ಮತ್ತೆ ಪರಮ್‌ವಃ ಸ್ಟುಡಿಯೊಸ್ ಸೇರುವ ಆಸೆಯಾ ಎಂದು ಕಾಲೆಳೆಯುತ್ತಿದ್ದಾರೆ.

  ಹೌದು, ರಶ್ಮಿಕಾ ತಾನು ನೀಡಿದ ಹೇಳಿಕೆಗಳಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವುದು ನಿಮಗೆ ಗೊತ್ತೇ ಇದೆ. ಹೀಗಾಗಿ ಈಕೆ ಏನೇ ಪೋಸ್ಟ್ ಹಂಚಿಕೊಂಡರೂ ಅದರಿಂದ ಟ್ರೋಲ್ ಆಗುವುದು ಸಹಜ. ಅದೇ ರೀತಿ ಈ ಪೋಸ್ಟ್ ಮೂಲಕವೂ ಸಹ ರಶ್ಮಿಕಾ ಟ್ರೋಲ್‌ಗೆ ಒಳಗಾಗಿದ್ದಾರೆ.

  English summary
  Rashmika Mandanna post her new pics and says I want to go back
  Tuesday, January 17, 2023, 8:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X