ಕರ್ನಾಟಕ ತೊರೆದರೇ ರಶ್ಮಿಕಾ ಮಂದಣ್ಣ: ವಿಳಾಸ ಬದಲಿಸಿದ ನಟಿ!

ಕನ್ನಡತಿ ರಶ್ಮಿಕಾ ಮಂದಣ್ಣ, ಸಿನಿಮಾರಂಗ ಪ್ರವೇಶಿಸಿದ್ದು ಕನ್ನಡ ಸಿನಿಮಾದಿಂದಾದರೂ ಮಿಂಚುತ್ತಿರುವುದು ನೆರೆಯ ತೆಲುಗು ಸಿನಿಉದ್ಯಮದಲ್ಲಿ.

ಕನ್ನಡದ ಐದು ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ತೆಲುಗಿನ ಏಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಇನ್ನೂ ಕೆಲವು ಸಿನಿಮಾಗಳ ಅವಕಾಶಗಳು ರಶ್ಮಿಕಾ ಅವರನ್ನು ಹುಡುಕಿಕೊಂಡು ಬರುತ್ತಿವೆ. ಪ್ರಸ್ತುತ ತೆಲುಗಿನ ಬ್ಯುಸಿ ನಟಿಯರಲ್ಲಿ ಒಬ್ಬರು ರಶ್ಮಿಕಾ.

ಕನ್ನಡಕ್ಕಿಂತಲೂ ತೆಲುಗಿನಲ್ಲಿ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ, ತನ್ನ ವಿಳಾಸವನ್ನೂ ಸಹ ತೆಲುಗು ರಾಜ್ಯಕ್ಕೆ ಬದಲಾಯಿಸಲು ಸಿದ್ಧರಾಗಿದ್ದಾರೆ.

ಹೈದರಾಬಾದ್‌ನಲ್ಲಿ ಮನೆ ಖರೀದಿ

ಹೈದರಾಬಾದ್‌ನಲ್ಲಿ ಮನೆ ಖರೀದಿ

ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್‌ನಲ್ಲಿ ಮನೆಯೊಂದನ್ನು ಈಗಾಗಲೇ ಖರೀದಿಸಿದ್ದಾರೆ. ಹೆಚ್ಚು ಕಾಲ ಹೈದರಾಬಾದ್‌ನಲ್ಲೇ ಕಳೆದು ತೆಲುಗು ಸಿನಿರಂಗದಲ್ಲಿಯೇ ಸೆಟಲ್ ಆಗಲು ಹೀಗೆ ಹೈದರಾಬಾದ್‌ನಲ್ಲಿ ಮನೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.

ಗೊಚ್ಚಿಬೋಲಿ ಏರಿಯಾದಲ್ಲಿ ರಶ್ಮಿಕಾ ಮನೆ

ಗೊಚ್ಚಿಬೋಲಿ ಏರಿಯಾದಲ್ಲಿ ರಶ್ಮಿಕಾ ಮನೆ

ಹೈದರಾಬಾದ್‌ನ ದುಬಾರಿ ಏರಿಯಾಗಳಲ್ಲಿ ಒಂದಾದ ಗೊಚ್ಚಿಬೋಲಿ ಏರಿಯಾದಲ್ಲಿ ರಶ್ಮಿಕಾ ಮಂದಣ್ಣ ಮನೆ ಖರೀದಿಸಿದ್ದಾರೆ. ನಾಲ್ಕು ಬೆಡ್‌ರೂಮ್‌ನ ವಿಶಾಲ ಮನೆ ಇದಾಗಿದ್ದು, ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿಯೇ ರಶ್ಮಿಕಾ ಮನೆ ಇದೆ.

ರಶ್ಮಿಕಾ ಪೋಷಕರ ಮನೆ ವಿರಾಜಪೇಟೆಯಲ್ಲಿದೆ

ರಶ್ಮಿಕಾ ಪೋಷಕರ ಮನೆ ವಿರಾಜಪೇಟೆಯಲ್ಲಿದೆ

ರಶ್ಮಿಕಾ ಅವರ ಮೂಲ ಮನೆ ಇರುವುದು ಕೊಡಗಿನ ವಿರಾಜಪೇಟೆಯಲ್ಲಿ. ರಶ್ಮಿಕಾ ಮಂದಣ್ಣ ಪೋಷಕರು ನೆಲೆಸಿರುವುದು ಇದೇ ಮನೆಯಲ್ಲಿ. ವಿರಾಜಪೇಟೆಯಲ್ಲಿ ಸಹ ಐಶಾರಾಮಿ ಮನೆ ಹೊಂದಿದ್ದಾರೆ ನಟಿ ರಶ್ಮಿಕಾ.

Recommended Video

ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
ಹಲವು ಸಿನಿಮಾಗಳು ರಶ್ಮಿಕಾ ಕೈಯಲ್ಲಿ

ಹಲವು ಸಿನಿಮಾಗಳು ರಶ್ಮಿಕಾ ಕೈಯಲ್ಲಿ

ನಟಿ ರಶ್ಮಿಕಾ ನಟಿಸಿರುವ ಕನ್ನಡದ ಪೊಗರು ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ತಮಿಳಿನ ಸುಲ್ತಾನ್ ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ಅಲ್ಲು ಅರ್ಜುನ್ ಜೊತೆಗೆ ಪುಷ್ಪಾ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ ರಶ್ಮಿಕಾ. ಇದರ ಜೊತೆಗೆ ಚಿರಂಜೀವಿ ಮುಂದಿನ ಚಿತ್ರದಲ್ಲಿ ರಾಮ್‌ಚರಣ್ ಗೆ ನಾಯಕಿಯಾಗಿ ರಶ್ಮಿಕಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Actress Rashmika Mandanna purchased a house in Hyderabad. She may settle down in Hyderabad only.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X