ಅಚ್ಚರಿ ಮೂಡಿಸುತ್ತಿದೆ ಸ್ಟಾರ್ ಗಳ ಈ ಫೋಟೋಗಳು

By Pavithra

ಸಿನಿಮಾ ಸ್ಟಾರ್ ಗಳು ಯಾವಾಗ ಎಲ್ಲಿರುತ್ತಾರೆ? ಹೇಗಿರುತ್ತಾರೆ? ಏನ್ ಮಾಡುತ್ತಿರುತ್ತಾರೆ ಎನ್ನುವ ವಿಚಾರ ಯಾರಿಗೂ ಗೊತ್ತಾಗುವುದಿಲ್ಲ. ಸಿನಿಮಾ ವಿಚಾರಗಳನ್ನ ಪ್ರೇಕ್ಷಕರಿಗೆ ಕುತೂಹಲ ಮೂಡಿಸುವ ಸಲುವಾಗಿ ಮುಚ್ಚಿ ಇಟ್ಟರೆ? ವಯಕ್ತಿಕ ಜೀವನದ ವಿಚಾರಗಳು ಗುಟ್ಟಾಗಿಯೇ ಇರಲಿ ಎಂದು ಗಪ್ ಚುಪ್ ಮಾಡುತ್ತಾರೆ.

ಕನ್ನಡ ಸಿನಿಮಾ ಸ್ಟಾರ್ ಗಳ ಕೆಲವೊಂದು ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಂದರೆ ಇನ್‌ಸ್ಟಾಗ್ರಾಂ ನಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ ತಕ್ಷಣವೇ ಥಟ್ ಅಂತ ಕುತೂಹಲ ಮೂಡಿಸುವಂತಿದೆ.

ಹಾಗಾದರೆ ಇನ್‌ಸ್ಟಾಗ್ರಾಂ ನಲ್ಲಿ ಟ್ರೆಂಡ್ ಹುಟ್ಟು ಹಾಕಿರುವ ಆ ಫೋಟೋಗಳು ಯಾವುವು? ಸ್ಟಾರ್ ಗಳ ಫೋಟೋ ವೈರಲ್ ಆಗಲು ಕಾರಣವೇನು? ಫೋಟೋಗಳ ಹಿಂದಿನ ಇಂಟ್ರೆಸ್ಟಿಂಗ್ ಕಥೆ ಏನು? ಈ ಎಲ್ಲಾ ವಿಚಾರದ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಮುಂದೆ ಓದಿ

ಹೊಸ ಅವತಾರದಲ್ಲಿ ರಚಿತಾ ರಾಮ್

ಹೊಸ ಅವತಾರದಲ್ಲಿ ರಚಿತಾ ರಾಮ್

ನಟಿ ರಚಿತಾ ರಾಮ್ ಸದ್ಯ ಸೀತಾ ರಾಮ ಕಲ್ಯಾಣ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರ ಒಂದು ಫೋಟೋ ರಚಿತಾ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೋಟೋದಲ್ಲಿ ರಚಿತಾ ಹಣೆ ತುಂಬ ಕುಂಕುಮ ಬಳಿದು ಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದ್ದು ಕುತೂಹಲ ಮೂಡಿಸುವಂತಿದೆ.

ಮಠದಲ್ಲಿ ಕಾಣಿಸಿಕೊಂಡ ರಶ್ಮಿಕಾ

ಮಠದಲ್ಲಿ ಕಾಣಿಸಿಕೊಂಡ ರಶ್ಮಿಕಾ

ಗಾಸಿಪ್ ಮತ್ತು ಟ್ರೋಲ್ ಮಾಡುವವರಿಗೆ ನಟಿ ರಶ್ಮಿಕಾ ಮಂದಣ್ಣ ಸದ್ಯ ಹಾಟ್ ಟಾಪಿಕ್. ರಶ್ಮಿಕಾ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಿರುವ ಫೋಟೋ ವೈರಲ್ ಆಗಿದೆ. ಗೀತ-ಗೋವಿಂದಂ ಸಿನಿಮಾ ಸೂಪರ್ ಹಿಟ್ ಆಗಿರುವ ಕಾರಣದಿಂದಾಗಿ ರಶ್ಮಿಕಾ ಗುರುಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.

 ಶಾನ್ವಿ ಶ್ರೀವಾಸ್ತವ ಕುದುರೆ ಸವಾರಿ

ಶಾನ್ವಿ ಶ್ರೀವಾಸ್ತವ ಕುದುರೆ ಸವಾರಿ

ಮಾಸ್ಟರ್ ಪೀಸ್ ಬೆಡಗಿ ನಟಿ ಶಾನ್ವಿ ಶ್ರೀವಾಸ್ತವ ಕುದುರೆ ಸವಾರಿ ಮಾಡುವುದನ್ನು ಕಲಿಯುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಕುದುರೆ ಮೇಲೆ ಕುಳಿತಿರುವ ಫೋಟೋವನ್ನು ಶಾನ್ವಿ ಅಪ್ಲೋಡ್ ಮಾಡಿದ್ದಾರೆ. ಅಭಿಮಾನಿಗಳಿಗೆ ಇದು ಕುತೂಹಲ ಮೂಡಿಸಿದೆ.

ತಲೆಬಾಗಿ ನಮಸ್ಕರಿಸಿದ ಉಪ್ಪಿ

ತಲೆಬಾಗಿ ನಮಸ್ಕರಿಸಿದ ಉಪ್ಪಿ

ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಂದ ಏಕೆ ಸೂಪರ್ ಸ್ಟಾರ್ ಎಂದು ಕರೆಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ. ಹೌದು ಉಪ್ಪಿ ಅಕ್ಕ ಅಮ್ಮೇಳನದಲ್ಲಿ ಭಾಗಿ ಆಗಿದ್ದರು. ಅಲ್ಲಿ ಮೈಸೂರಿನ ಯುವರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಕೂಡ ಅತಿಥಿಯಾಗಿ ಆಗಮಿಸಿದ್ದರು. ಯದುವೀರ್ ಅವರನ್ನು ಕಂಡು ಉಪ್ಪಿ ತಲೆಬಾಗಿ ನಮಸ್ಕರಿಸಿದ್ದಾರೆ.

More from Filmibeat

English summary
Kannada artists Rashmika Madandanna Rachita Ram, Upendra, Shanvi photos are viral in instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X