ರಕ್ಷಿತ್-ರಶ್ಮಿಕಾ ಬ್ರೇಕಪ್: ಅಭಿಮಾನಿಗಳು ಕೊಡುತ್ತಿರುವ ಪ್ರತಿಕ್ರಿಯೆ ಇದು.!
Recommended Video

ಯಾರೂ ಊಹಿಸದ ಸುದ್ದಿಯೊಂದು ನಿನ್ನೆ ಇದ್ದಕ್ಕಿದ್ದಂತೆ ಎಲ್ಲಾ ಮಾಧ್ಯಮಗಳಲ್ಲಿಯೂ ಬ್ರೇಕ್ ಆಯ್ತು. ಸ್ಯಾಂಡಲ್ ವುಡ್ ನಲ್ಲಿ 'ಕ್ಯೂಟ್ ಜೋಡಿ' ಎಂದೇ ಹೆಸರುವಾಸಿ ಆಗಿದ್ದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ನಿನ್ನೆ ಎಲ್ಲೆಡೆ ಹರಿದಾಡಿತು.
ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬ್ರೇಕಪ್ ಮಾಡಿಕೊಂಡಿರುವುದು ನಿಜವೇ.? ಗೊತ್ತಿಲ್ಲ. ಆದ್ರೆ, ಅವರಿಬ್ಬರ ಕುಟುಂಬದ ಆಪ್ತ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, 'ಇದು ನಿಜ'.! ನಿಶ್ಚಿತಾರ್ಥ ಮುರಿದುಕೊಂಡು ದೂರವಾಗಲು ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಮನಸ್ಸು ಮಾಡಿದ್ದಾರಂತೆ.
ತೆಲುಗು ಚಿತ್ರರಂಗದಲ್ಲಿ ಅವಕಾಶಗಳು ಹೆಚ್ಚಾಗಿರುವ ಕಾರಣ, ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹರಿಸಲು ರಶ್ಮಿಕಾ ಮಂದಣ್ಣ ನಿರ್ಧರಿಸಿದ್ದಾರಂತೆ. ಹಾಗೇ, ರಕ್ಷಿತ್ ಹಾಗೂ ರಶ್ಮಿಕಾ ಫ್ಯಾಮಿಲಿ ನಡುವೆ ಹೊಂದಾಣಿಕೆ ಕೂಡ ಸರಿಯಾಗಿಲ್ಲವಂತೆ. ಇದರಿಂದ ಇಬ್ಬರೂ ಕಠಿಣ ತೀರ್ಮಾನ ಕೈಗೊಂಡಿದ್ದಾರಂತೆ.
ಈ ಅಂತೆ-ಕಂತೆ ವಿಚಾರವನ್ನ ಕೇಳಿದ್ಮೇಲೆ ರಕ್ಷಿತ್-ರಶ್ಮಿಕಾ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ.? ಈ ಸುದ್ದಿಗೆ ಸಿನಿಪ್ರಿಯರ ರಿಯಾಕ್ಷನ್ ಏನು.? ನೀವೇ ನೋಡಿ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ....

ಸುಳ್ಳು ಸುದ್ದಿ ಅಂತಿದ್ದಾರೆ ಅಭಿಮಾನಿಗಳು
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬ್ರೇಕಪ್ ಆಗಿಲ್ಲ. ಇವೆಲ್ಲ ಸುಳ್ಳು ಸುದ್ದಿ ಅಂತ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್-ರಶ್ಮಿಕಾ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ನೀನೇ ಸಾಕಿದ ಗಿಣಿ
ರಶ್ಮಿಕಾ-ರಕ್ಷಿತ್ ಬ್ರೇಕಪ್ ಸುದ್ದಿ ಹೊರಬಿದ್ದ ಕೂಡಲೆ ಟ್ರೋಲ್ ಗಳು ಕೂಡ ಆರಂಭವಾಗಿದೆ. ರಕ್ಷಿತ್ ಶೆಟ್ಟಿಯ ಈಗಿನ ಪರಿಸ್ಥಿತಿಗೆ ಟ್ರೋಲಿಗರು 'ನೀನೇ ಸಾಕಿ ಗಿಣಿ...' ಹಾಡು ಹಾಡುತ್ತಿದ್ದಾರೆ.

ಆಗಿದ್ದೆಲ್ಲ ಒಳ್ಳೆಯದ್ದಕ್ಕೆ.!
''ರಕ್ಷಿತ್ ಶೆಟ್ಟಿ ನಮ್ಮ ಹೆಮ್ಮೆಯ ಹುಡುಗ. ಮಗೂ ಆದದ್ದೆಲ್ಲಾ ಒಳಿತಿಗೆ ಆಗಿದೆ ಅಂದುಕೋ. ನೀನವಳನ್ನು ಇಷ್ಟಪಟ್ಟರೆ, ನಿನ್ನನ್ನು ಇಷ್ಟಪಡುವವರು ಲಕ್ಷಾಂತರ ಜನರಿದ್ದಾರೆಂಬುದನ್ನು ಮರೆಯಬೇಡ. ನಿನ್ನೊಂದಿಗೆ ನಾವೆಲ್ಲಾ ಇದ್ದೇವೆ. ಎಂದಿನಂತೆ ಪ್ರೀತಿಸುತ್ತೇವೆ. (ಬ್ರೇಕಪ್ ಸುದ್ದಿ ನಿಜವಾಗಿದ್ದರೆ)'' ಎಂದು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರೇಖಾ ರಾಣಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಕೇಳಿದ್ರಾ ಮಾತನ್ನ.?
ರಕ್ಷಿತ್ ಶೆಟ್ಟಿಯ ಬ್ರೇಕಪ್ ಮ್ಯಾಟರ್ರು ಹೇಗೆಲ್ಲಾ ಟ್ರೋಲ್ ಆಗುತ್ತಿದೆ ಅನ್ನೋದಕ್ಕೆ ಇದೇ ಉದಾಹರಣೆ.

ಸಂಬಂಧಗಳಿಗೆ ಬೆಲೆ ಇಲ್ಲ.!
''ಸಂಬಂಧಗಳಿಗೆ ಈಗಿನ ಕಾಲದಲ್ಲಿ ಬೆಲೆ ಇಲ್ಲ', 'ತೆಲುಗು ಚಿತ್ರಗಳಲ್ಲಿ ಬಿಜಿಯಾಗಿರುವುದರಿಂದ ಹೀಗೆ ಆಗಿದೆ', 'ರಕ್ಷಿತ್ ಶೆಟ್ಟಿ ಏಣಿ ಅಲ್ಲ, ಹತ್ತಿದ ಬಳಿಕ ಒದ್ದು ಬಿಡೋಕೆ. ಇದು ಸರಿ ಇಲ್ಲ'' ಅಂತ ಸಿನಿ ಪ್ರಿಯರು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ತುಟಿಕ್ ಪಿಟಿಕ್ ಎಂದಿಲ್ಲ ರಶ್ಮಿಕಾ-ರಕ್ಷಿತ್
ತಮ್ಮ ಬ್ರೇಕಪ್ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದರೂ, ರಶ್ಮಿಕಾ ಹಾಗೂ ರಕ್ಷಿತ್ ಮಾತ್ರ ತುಟಿಕ್ ಪಿಟಿಕ್ ಎಂದಿಲ್ಲ. ಈ ಸುದ್ದಿ ನಿಜವೋ, ಸುಳ್ಳೋ ಅಂತ ಹೇಳಿದರೆ ಅಭಿಮಾನಿಗಳಿಗೆ ಒಂದು ಕ್ಲಾರಿಟಿ ಸಿಕ್ಕ ಹಾಗೆ.


Click it and Unblock the Notifications











