ರಕ್ಷಿತ್ ಜೊತೆ ಬ್ರೇಕ್ ಅಪ್ ಅಂದೋರಿಗೆ ಮಾತಲ್ಲೇ ಮಾಂಜ ಕೊಟ್ಟ ರಶ್ಮಿಕಾ

By Bharath Kumar

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ.....'ಕಿರಿಕ್ ಪಾರ್ಟಿ' ಚಿತ್ರದ ನಂತರ ಇಬ್ಬರು ಒಟ್ಟಿಗೆ ಜೀವನ ಹಂಚಿಕೊಳ್ಳಲು ನಿರ್ಧರಿಸಿ ಸಂಪ್ರದಾಯದಂತೆ ಎರಡು ಮನೆಯವರ ಒಪ್ಪಿಸಿ, ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಎಂಗೇಜ್ ಮೆಂಟ್ ಒಂದು ವರ್ಷ ಕಳೆದಿದೆ. ಆದ್ರೆ, ಮದುವೆ ಬಗ್ಗೆ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅಷ್ಟರೊಳಗೆ ಅದ್ಯಾರಾ ಕಣ್ಣು ಬಿತ್ತೋ ಈ ಜೋಡಿ ಮೇಲೆ, ಇತ್ತೀಚಿಗೆ ಇವರಿಬ್ಬರ ಎಂಗೇಜ್ ಮೆಂಟ್ ಬ್ರೇಕ್ ಅಪ್ ಆಗಿದೆ ಎಂಬುದೇ ಸುದ್ದಿ.

ರಶ್ಮಿಕಾ ಮತ್ತು ರಕ್ಷಿತ್ ಮದುವೆ ಆಗಲ್ಲ. ನಿಶ್ಚಿತಾರ್ಥ ಮುರಿದುಕೊಂಡಿದ್ದಾರೆ. ಹಾಗೆ, ಹೀಗೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇದೆ. ಇದುವರೆಗೂ ಈ ಬಗ್ಗೆ ಈ ಇಬ್ಬರು ಅಧಿಕೃತವಾಗಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ, ನಟಿ ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಮುರಿದು ಬಿದ್ದಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ.....

ಎಂಗೇಜ್ ಮೆಂಟ್ ಬ್ರೇಕ್ ಅಪ್ ಸುದ್ದಿ ಸುಳ್ಳು

ಎಂಗೇಜ್ ಮೆಂಟ್ ಬ್ರೇಕ್ ಅಪ್ ಸುದ್ದಿ ಸುಳ್ಳು

''ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಎಂಗೇಜ್ ಮೆಂಟ್ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿಗಳು ನನ್ನ ಕಿವಿಗೂ ಬಿತ್ತು. ಈ ಸುದ್ದಿ ಕೇಳಿ ನಾನು ನಕ್ಕಿದ್ದೀನಿ. ಯಾಕಂದ್ರೆ, ರಕ್ಷಿತ್ ಮತ್ತು ನನ್ನ ಮಧ್ಯೆ ತುಂಬಾ ಉತ್ತಮವಾದ, ಗಟ್ಟಿಯಾದ ಸಂಬಂಧವಿದೆ. ಹೀಗಾಗಿ, ಇದನ್ನ ನಾನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ'' ಎಂದು ರಶ್ಮಿಕಾ ತಿಳಿಸಿದ್ದಾರೆ.

ಎಲ್ಲವನ್ನೂ ನೀವೇ ಸೃಷ್ಟಿಸಿಕೊಳ್ತೀರಾ...

ಎಲ್ಲವನ್ನೂ ನೀವೇ ಸೃಷ್ಟಿಸಿಕೊಳ್ತೀರಾ...

''ನೀವಾಗಿ ಏನಾದರೂ ಹೇಳ್ತೀರಾ....ನೀವಾಗಿ ಏನಾದರೂ ಹುಟ್ಟುಹಾಕ್ತೀರಾ....ನೀವಾಗಿ ಎಲ್ಲವನ್ನ ನಿರ್ಧರಿಸುತ್ತೀರಾ.....ಇದೆಲ್ಲ ಬರಿ ಮನರಂಜನೆಗೆ ಅಷ್ಟೆ. ನಾವು ಅದನ್ನ ಹಾಗೆ ಸ್ವೀಕರಿಸ್ತೀವಿ ಅಷ್ಟೇ. ಇಂತಹ ಘಟನೆಗಳು ನಮ್ಮ ಜೀವನದಲ್ಲಿ ಮಾತ್ರವಲ್ಲ, ಬಹುತೇಕ ಎಲ್ಲರ ಜೀವನದಲ್ಲೂ ಬರುತ್ತೆ. ಅದನ್ನ ಕೂಲ್ ಆಗಿ ತಗೋಬೇಕು'' ಎಂದು ರಶ್ಮಿಕಾ ಉತ್ತರಿಸಿದ್ದಾರೆ.

ಸದ್ಯಕ್ಕೆ ಮದುವೆ ಇಲ್ಲ

ಸದ್ಯಕ್ಕೆ ಮದುವೆ ಇಲ್ಲ

ಇನ್ನು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಅವರ ಮದುವೆ ಸದ್ಯಕ್ಕಿಲ್ಲ ಎಂದು ಸ್ವತಃ ರಶ್ಮಿಕಾ ಖಚಿತಪಡಿಸಿದ್ದಾರೆ. ''ಇಬ್ಬರು ಹೊಸ ಹೊಸ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದೀವಿ. ಎಂಗೇಜ್ ಮೆಂಟ್ ಆಗುವ ವೇಳೆ ಇನ್ನು ಎರಡು ವರ್ಷ ಮದುವೆ ಬಗ್ಗೆ ಮಾತನಾಡುವಂತಿಲ್ಲ ಎಂದು ಮಾತನಾಡಿಕೊಂಡಿದ್ದೇವು. ನಮ್ಮ ಮಧ್ಯೆ ಒಳ್ಳೆಯ ಬಾಂಧವ್ಯವಿದೆ'' ಎಂದು ಮದುವೆ ಬಗ್ಗೆ ಸ್ಪಷ್ಟನೆ ನೀಡಿದರು.

'ಲಿಪ್ ಲಾಕ್' ದೃಶ್ಯ ಲೀಕ್ ಆಗಿತ್ತು

'ಲಿಪ್ ಲಾಕ್' ದೃಶ್ಯ ಲೀಕ್ ಆಗಿತ್ತು

ಈ ನಡುವೆ ನಟ ವಿಜಯದೇವರಕೊಂಡ ಅಭಿನಯದ ಗೀತಾ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ಲಿಪ್ ಲಾಕ್ ಮಾಡಿದ್ದಾರೆ ಎನ್ನಲಾದ ದೃಶ್ಯ ಸಿನಿಮಾ ರಿಲೀಸ್ ಗೂ ಮುಂಚೆಯೆ ಲೀಕ್ ಆಗಿತ್ತು. ಈ ಬಗ್ಗೆ ಮಾತನಾಡಿದ ರಶ್ಮಿಕಾ, ''ಸಹಜವಾಗಿ ಬೇಸರವಾಗುತ್ತೆ, ಇಂಡಸ್ಟ್ರಿಯಲ್ಲಿ ರೂಮರ್ ಗಳು, ಟ್ರೋಲ್ ಗಳು ಎಲ್ಲವೂ ಸಹಜ. ಇದು ಎಲ್ಲರಿಗೂ ಎದುರಾಗುವ ಸಮಸ್ಯೆಯೇ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನನಗೆ ಅನುಭವ ಕಮ್ಮಿ

ನನಗೆ ಅನುಭವ ಕಮ್ಮಿ

ಇನ್ನು ಸಿನಿಮಾ ಇಂಡಸ್ಟ್ರಿಗೆ ಹೊಸಬಳು. ಮೂರ್ನಾಲ್ಕು ಸಿನಿಮಾ ಮಾಡಿದ್ದೀನಿ ಅಷ್ಟೆ. ಇಂಡಸ್ಟ್ರಿಯಲ್ಲಿ ಇಂತಹ ಸಮಸ್ಯೆಗಳು ಎದುರಾದಾಗ ಅದನ್ನ ಹೇಗೆ ತೆಗೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿಲ್ಲ. ಐದು ಅಥವಾ ಆರು ವರ್ಷ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ರೆ, ಇಂತಹ ಘಟನೆಗಳಿಗೆ ಸರಿಯಾಗಿ ಉತ್ತರಿಸಬಹುದು ಎಂದರು.

More from Filmibeat

English summary
Kannada actress rashmika mandanna has react on her Engagement break up news with rakshit shetty in telugu press meet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X