For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಬಾಲ್ಯದ ಫೋಟೋಗೆ ಕೆಟ್ಟ ಪದ ಬಳಸಿ ಟ್ರೋಲ್: ಬೇಸರಗೊಂಡ ನಟಿ

  |
  ರಶ್ಮಿಕಾ ಬಾಲ್ಯದ ಫೋಟೋಗೆ ಕೆಟ್ಟ ಪದ ಬಳಸಿ ಟ್ರೋಲ್ | Filmibeat kannada

  ನಟ, ನಟಿಯರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಟ್ರೋಲ್ ಗಳು ಆಗುತ್ತಿರುತ್ತವೆ. ಆದರೆ, ರಶ್ಮಿಕಾ ಮಂದಣ್ಣ ವಿಷಯದಲ್ಲಿ ಇದು ಅತಿಯಾಗುತ್ತಿದೆ. ಕೆಲವರು ರಶ್ಮಿಕಾ ನಿಂತ್ರು ಟ್ರೋಲ್ ಮಾಡ್ತಾರೆ, ಕೂತ್ರೂ ಟ್ರೋಲ್ ಮಾಡ್ತಾರೆ.

  ಇತ್ತೀಚಿಗಷ್ಟೆ ರಶ್ಮಿಕಾ ಮಂದಣ್ಣ ತಮ್ಮ ಬಾಲ್ಯದ ಫೋಟೋವನ್ನು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ, ಈ ಫೋಟೋವನ್ನು ಕೂಡ ಟ್ರೋಲ್ ಮಾಡಲಾಗಿದೆ. ಟ್ರೋಲಾಯ ನಮಃ ಎಂಬ ಲೋಗೋ ಈ ಫೋಟೋ ಮೇಲೆ ಇದೆ. ಬಾಲ್ಯದ ಫೋಟೋವನ್ನು ಟ್ರೋಲ್ ಮಾಡಿ, ಕೆಟ್ಟ ಪದ ಬಳಕೆ ಮಾಡಿದ್ದಾರೆ.

  ಕೈ ತಪ್ಪಿದ ರಶ್ಮಿಕಾ ಬಾಲಿವುಡ್ ಸಿನಿಮಾ: 'ಜೆರ್ಸಿ'ಗೆ ಬೇರೊಬ್ಬ ನಾಯಕಿಕೈ ತಪ್ಪಿದ ರಶ್ಮಿಕಾ ಬಾಲಿವುಡ್ ಸಿನಿಮಾ: 'ಜೆರ್ಸಿ'ಗೆ ಬೇರೊಬ್ಬ ನಾಯಕಿ

  ಕಿಡಿಗೇಡಿಗಳ ಈ ರೀತಿಯ ವರ್ತನೆ ರಶ್ಮಿಕಾ ಮಂದಣ್ಣಗೆ ಬೇಸರ ತಂದಿದೆ. ಸಿನಿಮಾ ನಟ, ನಟಿಯರಿಗೆ ಈ ರೀತಿ ಕಾಟ ಕೊಡುವವರಿಗೆ ವಿರೋಧ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದು, ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

  ಇದರಿಂದ ನಿಮಗೆ ಏನು ಸಿಗುತ್ತದೆ

  ಇದರಿಂದ ನಿಮಗೆ ಏನು ಸಿಗುತ್ತದೆ

  ''ಕಲಾವಿದರಿಗೆ ಹೀಗೆ ಮಾಡುವುದರಿಂದ ನಿಮಗೆ ಏನು ಸಿಗುತ್ತದೆ ತಿಳಿಯುತ್ತಿಲ್ಲ. ನಮ್ಮನ್ನು ಸುಲಭವಾಗಿ ಟಾರ್ಗೆಟ್ ಮಾಡಬಹುದು ಅಂತಲೋ. ಸಾರ್ವಜನಿಕ ವ್ಯಕ್ತಿಯಾದ ಕಾರಣ ನೀವು ನಮ್ಮನ್ನು ನಿರ್ದಯವಾಗಿ ಟಾರ್ಗೆಟ್ ಮಾಡಬಹುದೇ. ಅನೇಕರು ಇಂತಹ ಕೆಟ್ಟ ಕಾಮೆಂಟ್ಸ್ ಗಳನ್ನು ನಿರ್ಲಕ್ಷಿಸಿ ಎಂದು ಹೇಳುತ್ತಿದ್ದೀರಿ. ನಾನು ಕೂಡ ಇಷ್ಟು ದಿನ ಅದನ್ನೇ ಮಾಡುತ್ತಾ ಬಂದಿದ್ದೇನೆ.'' ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

  ವೈಯಕ್ತಿಕ ವಿಷಯದ ಬಗ್ಗೆ ಮಾತನಾಡುವ ಹಕ್ಕು ಇಲ್ಲ

  ವೈಯಕ್ತಿಕ ವಿಷಯದ ಬಗ್ಗೆ ಮಾತನಾಡುವ ಹಕ್ಕು ಇಲ್ಲ

  ''ನಮ್ಮ ಕೆಲಸದ ಬಗ್ಗೆ ನಿಮಗೆ ಏನು ಹೇಳಬೇಕು ಅನಿಸುತ್ತದೆ ಹೇಳಿ. ನಿಮಗೆ ಅದನ್ನು ಹೇಳಲು ಹಕ್ಕಿದೆ. ಆದರೆ, ನಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರ ಇಲ್ಲ. ಈ ರೀತಿ ಯಾವ ಕಲಾವಿದರಿಗೆ ಮಾಡಬಾರದು. ಯಾಕೆಂದರೆ, ಒಬ್ಬ ಕಲಾವಿದೆಯಾಗುವುದು ಅಷ್ಟು ಸುಲಭ ಅಲ್ಲ. ಪ್ರತಿ ವೃತ್ತಿಗೂ ಒಂದು ಗೌರವ ಇದೆ.'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಅಲ್ಲು ಅರ್ಜುನ್ ಮತ್ತು ತಂಡಕ್ಕೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣಅಲ್ಲು ಅರ್ಜುನ್ ಮತ್ತು ತಂಡಕ್ಕೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ

  ಇನ್ನೊಬ್ಬರಿಗೆ ಗೌರವ ನೀಡಿ

  ಇನ್ನೊಬ್ಬರಿಗೆ ಗೌರವ ನೀಡಿ

  ''ಮೊದಲು ಜನರು ಇನ್ನೊಬ್ಬರಿಗೆ ಗೌರವ ನೀಡುವುದನ್ನು ಕಲಿಯಬೇಕು. ಈ ರೀತಿ ಟ್ರೋಲ್ ಮಾಡಿದವರಿಗೆ ಶುಭಾಶಯಗಳು. ನೀವು ನನ್ನನ್ನು ನೋಯಿಸಲು ಪ್ರಯತ್ನ ಮಾಡಿದ್ದೀರಿ. ಆದರೆ, ನಿಮಗೆ ಅದನ್ನು ಮಾಡಲು ಸಾಮರ್ಥ್ಯ ಇಲ್ಲ. ಆದರೆ, ನೀವು ಏನನ್ನು ಅನುಸರಿಸಬೇಕು ಎನ್ನುವುದು ನಿಮಗೆ ಬಿಟ್ಟಿದ್ದು.'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  #saynotosocialmediaharassment

  #saynotosocialmediaharassment

  #saynotosocialmediaharassment ಸೇ ನೋ ಟು ಸೋಷಿಯಲ್ ಮೀಡಿಯಾ ಹರಾಸ್ಮೆಂಟ್ ಎನ್ನುವ ಹ್ಯಾಶ್ ಮೂಲಕ ಈ ರೀತಿ ಟ್ರೋಲ್ ಮಾಡುವವರಿಗೆ ವಿರುದ್ಧ ರಶ್ಮಿಕಾ ಮಂದಣ್ಣ ಧ್ವನಿ ಎತ್ತಿದ್ದಾರೆ. ಚಿತ್ರರಂಗದ ನಟ, ನಟಿಯರ ಮೇಲೆ ಚಿಕ್ಕಪುಟ್ಟ ವಿಷಯಗಳಿಗೆ ಟ್ರೋಲ್ ಮಾಡುವುದನ್ನು ವಿರೋಧ ಮಾಡಿ ಎಂದು ಕೇಳಿದ್ದಾರೆ.

  ಮೈಕಲ್ ಜಾಕ್ಸನ್ ಸ್ಟೈಲ್ ನಲ್ಲಿ ರಶ್ಮಿಕಾ ಮಂದಣ್ಣಮೈಕಲ್ ಜಾಕ್ಸನ್ ಸ್ಟೈಲ್ ನಲ್ಲಿ ರಶ್ಮಿಕಾ ಮಂದಣ್ಣ

  English summary
  Actress Rashmika Mandanna reaction about her latest troll.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X