'ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು' ಡೈಲಾಗ್ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ

Recommended Video

Rashmika Mandanna Reaction About Pogaru Punching Dialogues | FILMIBEAT KANNADA

ನಟ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷೆಯ ಪೊಗರು ಸಿನಿಮಾದ ಡೈಲಾಗ್ ಟ್ರೈಲರ್ ರಿಲೀಸ್ ಆಗಿದೆ. ಧ್ರುವ ಸರ್ಜಾ ಸಿನಿಮಾಗಾಗಿ ವರ್ಷಗದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಸಿಕ್ಕಿದೆ. ಟ್ರೈಲರ್ ನಲ್ಲಿ ಧ್ರುವ ಸರ್ಜಾ ನಟೋರಿಯಸ್ ಲುಕ್ ನಲ್ಲಿ ಅಬ್ಬರಿಸಿದ್ದಾರೆ.

ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿರುವ ಒಂದಿಷ್ಟು ಡೈಲಾಗ್ ಗಳು ಚರ್ಚೆಯಾಗುತ್ತಿವೆ. ಅದರಲ್ಲು ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಂಗ್ಲಿಷ್ ನಲ್ಲಿ ಮಾತನಾಡುತ್ತಿರುವ ರಶ್ಮಿಕಾಗೆ ಧ್ರುವ ಸರ್ಜಾ "ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು" ಎಂದು ಹೇಳುವ ಡೈಲಾಗ್ ಗೆ ನಟ್ಟಿಗರು ಕಾಲೆಳೆಯುತ್ತಿದ್ದಾರೆ.

ರಶ್ಮಿಕಾ ಕಾಲೆಳೆಯುತ್ತಿರುವ ನೆಟ್ಟಿಗರು

ರಶ್ಮಿಕಾ ಕಾಲೆಳೆಯುತ್ತಿರುವ ನೆಟ್ಟಿಗರು

"ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು" ಈ ಡೈಲಾಗ್ ರಶ್ಮಿಕಾಗಾಗಿಯೆ ಬರೆದ ಹಾಗೆ ಇದೆ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಕಾಲೆಯುತ್ತಿದ್ದಾರೆ. ಈಗಾಗಲೆ ರಶ್ಮಿಕಾ ಬಗ್ಗೆ ಸಾಕಷ್ಟು ಟ್ರೋಲ್ ಗಳು ಹರಿದಾಡುತ್ತಿವೆ. ಈ ಬಗ್ಗೆ ಅಭಿಮಾನಿಯೊಬ್ಬ ರಶ್ಮಿಕಾಗೆ ನೇರವಾಗಿ ಪ್ರಶ್ನೆ ಮಾಡಿದ್ದಾರೆ. "ಈ ಡೈಲಾಗ್ ನೇರವಾಗಿ ನಿಮಗೆ ಬರೆದ ಹಾಗೆ ಇದೆ" ಎಂದು ಹೇಳಿದ್ದಾರೆ.

ರಶ್ಮಿಕಾ ಪ್ರತಿಕ್ರಿಯೆ

ರಶ್ಮಿಕಾ ಪ್ರತಿಕ್ರಿಯೆ

ನೆಟ್ಟಿಗನ ಮಾತಿಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. "ಈ ಡೈಲಾಗ್ ಅನ್ನು ಯಾಕೆ ಇಟ್ಟಿದ್ದೇವೆ ಎನ್ನುವ ಬಗ್ಗೆ ನಾವು ಕೂಡ ಈಗ ಚರ್ಚೆ ಮಾಡುತ್ತಿದ್ದೇವೆ. ಅನೇಕ ಜನ ರಶ್ಮಿಕಾ ಮಂದಣ್ಣ (ಕೆಟ್ಟದ್ದು ಮತ್ತು ಒಳ್ಳೆಯ) ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ ರಶ್ಮಿಕಾ ಗೆದ್ದಳು ಎಂದು ಅರ್ಥ. ನನ್ನ ಬಗ್ಗೆ ಯೋಚಿಸಲು ನಿಮ್ಮ ಸಮಯ ಕೊಟ್ಟಿದ್ದಕ್ಕೆ ಧನ್ಯವಾದಗಳು" ಎಂದು ತಿರುಗೇಟು ನೀಡಿದ್ದಾರೆ.

ಅತೀ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್

ಅತೀ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್

ಪೊಗರು ಟ್ರೈಲರ್ ರಿಲೀಸ್ ಆಗಿ ಕೆಲವೆ ನಿಮಿಷದಲ್ಲಿ ಸಿಕ್ಕಾಪಟ್ಟೆ ವೀಕ್ಷಣೆಯಾಗಿದೆ. ಚಿತ್ರ ರಿಲೀಸ್ ಆಗಿ ಮೂರು ನಾಲ್ಕು ಗಂಟೆಯಲ್ಲೆ ಆರು ಲಕ್ಷ ವೀಕ್ಷಣೆ ಪಡೆಯುವ ಮೂಲಕ ಟ್ರೆಂಡಿಂಗ್ ನಲ್ಲಿದೆ. ಧ್ರುವ ಸರ್ಜಾ ಪಂಚಿಂಗ್ ಡೈಲಾಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಎರಡು ಭಾಷೆಯಲ್ಲಿ ಬರ್ತಿದೆ ಸಿನಿಮಾ

ಎರಡು ಭಾಷೆಯಲ್ಲಿ ಬರ್ತಿದೆ ಸಿನಿಮಾ

ಪೊಗರು ನಂದಕೀಶೋರ್ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ. ಪೊಗರು ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲೂ ರಿಲೀಸ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ. ಪೊಗರು ಔಟ್ ಅಂಡ್ ಔಟ್ ಮಾಸ್ ಸಿನಿಮಾವಾದ್ದರಿಂದ ತೆಲುಗು ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎನ್ನುವ ಕಾರಣಕ್ಕೆ ತೆಲುಗಿನಲ್ಲೂ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ ಚಿತ್ರತಂಡ. ಈ ಮೂಲಕ ಧ್ರುವ ತೆಲಗು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ.

More from Filmibeat

English summary
Kannada actress Rashmika Mandanna reaction about Pogaru punching dialogues.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X