For Quick Alerts
  ALLOW NOTIFICATIONS  
  For Daily Alerts

  ತನ್ನನ್ನು ಹುಡುಕಿ ವಿರಾಜಪೇಟೆಗೆ ಬಂದಿದ್ದ ಅಭಿಮಾನಿಯ ಬಗ್ಗೆ ರಶ್ಮಿಕಾ ಹೇಳಿದ್ದೇನು?

  |

  ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅತಿ ಕಡಿಮೆ ಅವಧಿಯಲ್ಲೇ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇತ್ತೀಚಿಗಷ್ಟೆ ರಶ್ಮಿಕಾ ಅವರ ಅಪ್ಪಟ ಅಭಿಮಾನಿ ಆಕಾಶ್ ತ್ರಿಪಾಠಿ ಎನ್ನುವವರು ನೆಚ್ಚಿನ ನಟಿಯನ್ನು ನೋಡಿ, ಮಾತನಾಡಿಸಲು ಕೊಡಗು ಜಿಲ್ಲೆಯ ವಿರಾಜಪೇಟೆಗೆ ಬಂದಿದ್ದರು.

  ಮುಂಬೈನಿಂದ ಅಭಿಮಾನಿಗೆ ಬುದ್ದಿ ಹೇಳಿದ ರಶ್ಮಿಕ! | Filmmibeat Kannada

  ಮೂಲತಹ ವಿರಾಜಪೇಟೆಯವರಾದ ರಶ್ಮಿಕಾ ಅಲ್ಲಿಯೇ ಇರುತ್ತಾರೆಂದು ತಿಳಿದು, ಹೈದರಾಬಾದ್ ನಿಂದ ಮೈಸೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಗೂಡ್ಸ್ ಆಟೋದಲ್ಲಿ ವಿರಾಜಪೇಟೆಗೆ ಭೇಟಿ ನೀಡಿದ್ದರು. ಬಳಿಕ ರಶ್ಮಿಕಾ ಮನೆ ಹುಡುಕಲು ದಿನಪೂರ್ತಿ ಅಲೆದಾಡಿದ್ದರು.

  ರಶ್ಮಿಕಾ ಮಂದಣ್ಣ ಅಭಿಮಾನಿಯೊಬ್ಬ ಮಾಡಿದ್ದಾನೆ ಹುಚ್ಚು ಸಾಹಸರಶ್ಮಿಕಾ ಮಂದಣ್ಣ ಅಭಿಮಾನಿಯೊಬ್ಬ ಮಾಡಿದ್ದಾನೆ ಹುಚ್ಚು ಸಾಹಸ

  ಮನೆ ಹುಡುಕುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಅತನನ್ನು ವಿಚಾರಿಸಿದ ಬಳಿಕ ಹೈದರಾಬಾದ್ ನಿಂದ ರಶ್ಮಿಕಾರನ್ನು ನೋಡಲು ಬಂದಿರುವುದಾಗಿ ತಿಳಿದುಬಂದಿದೆ. ಪೊಲೀಸರು ಆತನಿಗೆ ಬೈದು ಬುದ್ಧಿವಾದ ಹೇಳಿ ಹೈದರಾಬಾದ್ ಗೆ ಕಳುಹಿಸಿದ್ದಾರೆ. ಅಂದಹಾಗೆ ರಶ್ಮಿಕಾ ಸದ್ಯ ಮುಂಬೈನಲ್ಲಿ ವಾಸ್ತವ್ಯ ಹೂಡಿರುವುದರದಿಂದ ನೆಚ್ಚಿನ ನಟಿಯನ್ನು ಭೇಟಿಯಾಗಲು ಆಕಾಶ್ ಗೆ ಸಾಧ್ಯವಾಗಿಲ್ಲ.

  ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಶ್ಮಿಕಾ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂಬ ನೋವು ನನ್ನಲ್ಲಿ ಇದೆ. ಆದರೆ ಇಂತ ಸಾಹಸ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.

  "ನನ್ನ ಗಮನಕ್ಕೆ ಈಗ ಬಂತು. ನಿಮ್ಮಲ್ಲಿ ಒಬ್ಬರು ತುಂಬಾ ದೂರ ಪ್ರಯಾಣ ಮಾಡಿ ನನ್ನನ್ನು ನೋಡಲು ಮನೆಗೆ ಹೋಗಿದ್ದಾರೆ. ದಯವಿಟ್ಟು ಹೀಗೆ ಮಾಡಬೇಡಿ. ನಿಮ್ಮನ್ನು ಭೇಟಿಯಾಗಿಲ್ಲ ಎನ್ನುವ ನೋವು ನನಗಿದೆ. ಒಂದು ದಿನ ಖಂಡಿತ ನಿಮ್ಮನ್ನು ಭೇಟಿಯಾಗುತ್ತೇನೆ. ಆದರೀಗ ಪ್ರೀತಿ ತೋರಿಸಿ. ನಾನು ತುಂಬಾ ಪಡುತ್ತೇನೆ" ಎಂದು ಹೇಳಿದ್ದಾರೆ.

  Rashmika Mandanna reaction on fan who went home to meet her

  ರಶ್ಮಿಕಾ ಸದ್ಯ ಅಮಿತಾಬ್ ಬಚ್ಚನ್ ಗುಡ್ ಬೈ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಗೆ ಮಿಷನ್ ಮಜ್ನು ಕೂಡ ರಶ್ಮಿಕಾ ಕೈಯಲ್ಲಿದೆ. ಬಾಲಿವುಡ್ ನ ಎರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದ್ದು ರಶ್ಮಿಕಾ ಸದ್ಯ ಮುಂಬೈನಲ್ಲೇ ನೆಲೆಸಿದ್ದಾರೆ.

  English summary
  Actress Rashmika Mandanna reaction on fan who went home to meet her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X