ವಿಡಿಯೋ ಹಂಚಿಕೊಂಡು ವಿಶ್ ಮಾಡಿದ್ದ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

ನಟಿ ರಶ್ಮಿಕಾ ಮಂದಣ್ಣಗೆ ನಿನ್ನೆ (ಏಪ್ರಿಲ್ 5) ಹುಟ್ಟುಹಬ್ಬದ ಸಂಭ್ರಮ. ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾಗೆ ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

Recommended Video

ವಿಡಿಯೋ ಹಂಚಿಕೊಂಡು ವಿಶ್ ಮಾಡಿದ್ದ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ | Filmibeat Kannada

ಕಿರಿಕ್ ಪಾರ್ಟಿಯಿಂದ ಪ್ರಾರಂಭವಾದ ರಶ್ಮಿಕಾ ಸಿನಿ ಪಯಣ ಇಂದು ಬಾಲಿವುಡ್‌ವರೆಗೂ ಸಾಗಿದೆ. ಇಂದು ಪರಭಾಷೆಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಅವರ ಹುಟ್ಟುಹಬ್ಬಕ್ಕೆ ನಟ ರಕ್ಷಿತ್ ಶೆಟ್ಟಿ ಮೊದಲ ಆಡಿಷನ್ ವಿಡಿಯೋ ಹಂಚಿಕೊಳ್ಳುವ ಮೂಲಕ ವಿಶೇಷವಾಗಿ ವಿಶ್ ಮಾಡಿದ್ದರು. ಆಡಿಷನ್‌ನಲ್ಲಿ ರಶ್ಮಿಕಾ ತಪ್ಪನ್ನು ತಿದ್ದುತ್ತಾ ರಕ್ಷಿತ್ ಸಂಭಾಷಣೆ ಹೇಳಿಕೊಡುತ್ತಿರುವ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಈ ವಿಡಿಯೋಗೆ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ರಕ್ಷಿತ್ ಶೆಟ್ಟಿ ಟ್ವೀಟ್

ರಕ್ಷಿತ್ ಶೆಟ್ಟಿ ಟ್ವೀಟ್

ಹಳೆಯ ವಿಡಿಯೋ ಹಂಚಿಕೊಂಡಿದ್ದ ರಕ್ಷಿತ್ ಶೆಟ್ಟಿ, 'ಕಿರಿಕ್ ಪಾರ್ಟಿ' ಆಡಿಷನ್ ವಿಡಿಯೋವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದೊಂದು ಮಧುರ ನೆನಪು. ಆಗಿನ ಸಂದರ್ಭಕ್ಕೆ ಹೋಲಿಸಿದರೆ ನೀನು ಬಹಳ ದೂರ ಸಾಗಿದ್ದೀಯ. ನಿನ್ನ ಕನಸುಗಳನ್ನು ಯೋಧನ ರೀತಿ ಬೆನ್ನು ಹತ್ತಿದ್ದೀಯ. ನಿನ್ನ ಬಗ್ಗೆ ಹೆಮ್ಮೆಯಾಗುತ್ತದೆ ಹುಡುಗಿ. ಹುಟ್ಟುಹಬ್ಬದ ಶುಭಾಶಯಗಳು ನಿನಗೆ. ನಿನಗೆ ಇನ್ನಷ್ಟು ಯಶಸ್ಸು ದೊರಕಲಿ' ಎಂದು ಶುಭ ಹಾರೈಸಿದ್ದಾರೆ ರಕ್ಷಿತ್ ಶೆಟ್ಟಿ.

ಮಾಜಿ ಪ್ರಿಯತಮನಿಗೆ ರಶ್ಮಿಕಾ ಪ್ರತಿಕ್ರಿಯೆ

ಮಾಜಿ ಪ್ರಿಯತಮನಿಗೆ ರಶ್ಮಿಕಾ ಪ್ರತಿಕ್ರಿಯೆ

ರಶ್ಮಿಕಾ ತನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಎಲ್ಲರಿಗೂ ಟ್ವಿಟ್ಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಹಾಗೆ ರಕ್ಷಿತ್ ಶೆಟ್ಟಿ ಟ್ವೀಟ್‌ಗೂ ಪ್ರತಿಕ್ರಿಯೆ ನೀಡಿದ್ದಾರೆ. ಸಿಂಪಲ್ ಸ್ಟಾರ್ ಹಂಚಿಕೊಂಡಿದ್ದ ವಿಡಿಯೋಗೆ ರಶ್ಮಿಕಾ 'ಹಾ...ಇದು ನನಗೆ ತುಂಬಾ ಚೆನ್ನಾಗಿ ನೆನಪಿದೆ. ಧನ್ಯವಾದಗಳು ರಕ್ಷಿತ್ ಶೆಟ್ಟಿ' ಎಂದು ಹೇಳಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ನೆಟ್ಟಿಗರ ಪ್ರತಿಕ್ರಿಯೆ

ರಶ್ಮಿಕಾ ಪ್ರತಿಕ್ರಿಯೆಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್‌ಗಳು ಹರಿದುಬರುತ್ತಿದೆ. ಕೆಲವರು ರಕ್ಷಿತ್ ಮತ್ತು ರಶ್ಮಿಕಾ ಮತ್ತೆ ಒಂದಾಗಲಿ ಎಂದು ಹೇಳಿದ್ರೆ, ಇನ್ನು ಕೆಲವರು ಬೇಡ ಎಂದು ಬಿಟ್ಟು ಹೋದಮೇಲೆ ಮತ್ತೆ ಯಾಕೆ ನೀವು ಅವಳನ್ನು ಮಾತನಾಡಿಸುತ್ತೀರಿ, ನಿಮ್ಮತನವನ್ನು ಉಳಿಸಿಕೊಳ್ಳಿ ಎಂದು ಎನ್ನುತ್ತಿದ್ದಾರೆ. ರಕ್ಷಿತ್ ಇಂದಿಗೂ ಒಳ್ಳೆಯ ಭಾವನೆ ಇಟ್ಟುಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

ಅಮಿತಾಬ್ ಜೊತೆ ರಶ್ಮಿಕಾ ಹುಟ್ಟುಹಬ್ಬ ಆಚರಣೆ

ಅಮಿತಾಬ್ ಜೊತೆ ರಶ್ಮಿಕಾ ಹುಟ್ಟುಹಬ್ಬ ಆಚರಣೆ

ನಟಿ ರಶ್ಮಿಕಾ ಮಂದಣ್ಣ ಸದ್ಯ ಮುಂಬೈನಲ್ಲಿದ್ದಾರೆ. ಮಿಷನ್ ಮಜ್ನು ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಮೊದಲ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಎರಡನೇ ಸಿನಿಮಾಗೆ ಸಹಿ ಮಾಡಿದ್ದಾರೆ. ಬಿಗ್ ಬಿ ಅಮಿತಾಬ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ. ಈಗಾಗಲೇ ಮುಹೂರ್ತ ಮಾಡಿಕೊಂಡಿರುವ ರಶ್ಮಿಕಾ ಹುಟ್ಟುಹಬ್ಬವನ್ನು ಅಮಿತಾಬ್ ಜೊತೆ ಆಚರಿಸಿಕೊಂಡಿದ್ದಾರೆ. ಬಿಗ್ ಬಿ ಜೊತೆ ಇರುವ ಫೋಟೋವನ್ನು ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ಬಳಿ ಇರುವ ಸಿನಿಮಾಗಳು

ರಕ್ಷಿತ್ ಶೆಟ್ಟಿ ಬಳಿ ಇರುವ ಸಿನಿಮಾಗಳು

ರಕ್ಷಿತ್ ಶೆಟ್ಟಿ ಸದ್ಯ 777 ಚಾರ್ಲಿ ಸಿನಿಮಾದ ಚಿತ್ರೀಕರಣ ಮುಗಿಸಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿರುವ ರಕ್ಷಿತ್ ಶೆಟ್ಟಿ ಇತ್ತೀಚಿಗೆ ವರ್ಕ್ ಶಾಪ್ ಫೋಟೋಗಳನ್ನು ಹಂಚಿಕೊಂಡಿದ್ದರು. ಹೇಮಂತ್ ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Actress Rashmika Mandanna reaction to Rakshit Shetty tweet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X