ಟ್ರೋಲ್‌ ಮಾಡಿ ಏನ್‌ ಮಾಡ್ತೀರಪ್ಪ: ರಶ್ಮಿಕಾ ಮಂದಣ್ಣ!

ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಜರ್ನಿ ಆರಂಭಿಸಿದ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಸದ್ಯ ತಲುಗು, ತಮಿಳು ಮತ್ತು ಬಾಲಿವುಡ್‌ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲಿಯೇ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಆದರೆ ರಶ್ಮಿಕಾ ಕನ್ನಡದಿಂದ ಹೊರಗೆ ಹೋಗಿದ್ದೇ ಹೋಗಿದ್ದು, ಆಕೆ ಕನ್ನಡ ಮಾತನಾಡುವುದಿಲ್ಲ ಎನ್ನುವುದೇ ಕಂಪ್ಲೇಂಟ್.

Recommended Video

ಕನ್ನಡದಲ್ಲಿ ಡಬ್ ಮಾಡಿಲ್ಲ ತೆಲುಗು ನಾನೆ ಡಬ್ ಮಾಡಿದ್ದೀನಿ

ಇನ್ನು ರಶ್ಮಿಕಾ ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್‌ ಆಗಿ ಇರುತ್ತಾರೆ. ಹಾಗಾಗಿ ಅವರು ಹಾಕುವ ಕೆಲವೊಂದು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದರ ಜೊತೆಗೆ ಟ್ರೋಲ್‌ ಕೂಡ ಆಗುತ್ತವೆ.

ರಶ್ಮಿಕಾ ಇತ್ತೀಚೆಗೆ ಟ್ರೋಲ್‌ ಆಗಿದ್ದು ಪುಷ್ಪ ಸಿನಿಮಾದ ಲುಕ್‌ನಿಂದಾಗಿ. ಮೊದಲು ರಿಲೀಸ್‌ ಆದ ಪೋಸ್ಟರ್‌ ಒಂದು ಟ್ರೋಲ್‌ ಆಗಿತ್ತು. ಟ್ರೋಲ್ ಹೆಚ್ಚುತ್ತಿರುವ ಬೆನ್ನಲ್ಲೇ ರಶ್ಮಿಕಾ ಟ್ರೋಲ್‌ ಮಾಡುವವರನ್ನೇ ಪ್ರಶ್ನೆ ಮಾಡಿದ್ದಾರೆ.

ಹೊಸ ವೀಡಿಯೋ ಹಂಚಿಕೊಂಡು ಟ್ರೋಲ್‌ಗೆ ತುತ್ತಾದ ರಶ್ಮಿಕಾ!

ಹೊಸ ವೀಡಿಯೋ ಹಂಚಿಕೊಂಡು ಟ್ರೋಲ್‌ಗೆ ತುತ್ತಾದ ರಶ್ಮಿಕಾ!

ನಟಿ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ರಶ್ಮಿಕಾ ಸಿನಿ ಜರ್ನಿಯ ಬಹುಮುಖ್ಯ ಸಿನಿಮಾ. ಆದರೆ ರಶ್ಮಿಕಾ ಈ ಚಿತ್ರದ ವಿಚಾರವಾಗಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ಪುಷ್ಪ ಚಿತ್ರದ ಸಾಮಿ.. ಸಾಮಿ.. ಹಾಡು ರಿಲೀಸ್‌ ಆಗಿ ಒಂದಷ್ಟು ಮಂದಿಗೆ ಇಷ್ಟ ಆದರೆ, ಮತ್ತೊಂದಷ್ಟು ಮಂದಿಗೆ ರಶ್ಮಿಕಾ ಲುಕ್ ಇಷ್ಟ ಆಗಿರಲಿಲ್ಲ. ಹಾಗಾಗಿ ರಶ್ಮಿಕಾಳನ್ನು ಟ್ರೋಲ್‌ ಮಾಡಲಾಗಿತ್ತು. ಈ ಹಾಡಿನಲ್ಲಿ ರಶ್ಮಿಕಾ ಡಿ-ಗ್ಲ್ಯಾ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ರಶ್ಮಿಕಾಳನ್ನು ಟ್ರೋಲ್‌ ಮಾಡಲಾಗಿತ್ತು.

ಟ್ರೋಲ್ ಮಾಡುವವರನ್ನು ಪ್ರಶ್ನಿಸಿದ ರಶ್ಮಿಕಾ ಮಂದಣ್ಣ!

ಟ್ರೋಲ್ ಮಾಡುವವರನ್ನು ಪ್ರಶ್ನಿಸಿದ ರಶ್ಮಿಕಾ ಮಂದಣ್ಣ!

ನಟಿ ರಶ್ಮಿಕಾ ಮಂದಣ್ಣ ತಮ್ಮ ಬಗ್ಗೆ ಮಾಡಲಾದ ಟ್ರೋಲ್‌ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಟ್ರೋಲ್‌ ಮಾಡಿ ಏನ್‌ ಮಾಡ್ತೀರಪ್ಪ" ಎಂದು ರಶ್ಮಿಕಾ ತೆಲುಗಿನಲ್ಲಿ ಉತ್ತರಿಸಿದ್ದಾರೆ. ಇಷ್ಟೇ ಅಲ್ಲ ರಶ್ಮಿಕಾ ಹಂಚಿಕೊಂಡ ಪುಷ್ಪ ಚಿತ್ರದ ವೀಡಿಯೋಗೆ "ಸಿನಿಮಾ ಮೇಕರ್ಸ್‌ ರಶ್ಮಿಕಾ ಅವರನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೋ, ಬರೀ ಓವರ್‌ ಆ್ಯಕ್ಟಿಂಗ್‌" ಎನ್ನುವ ಕಾಮೆಂಟ್‌ ಬಂದಿದೆ. ಈ ಕಾಮೆಂಟ್‌ಗೆ ಉತ್ತರಿಸಿದ ರಶ್ಮಿಕಾ ಮಂದಣ್ಣ "ರಾಜ ಓ ಓವರ್‌ ಆ್ಯಕ್ಟಿಂಗ್... ನೀನು ಜೀವನದಲ್ಲಿ ಏನಾದರು ಸಾಧಿಸು. ಇಲ್ಲಿ ತನಕ ಏನು ಸಾಧಿಸಿದ್ದೀಯಾ". ಎಂದು ರಶ್ಮಿಕಾ ತೆಲುಗಿನಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಪುಷ್ಪ ಮೊದಲ ಪೋಸ್ಟರ್‌ ಮೂಲಕ ರಶ್ಮಿಕಾ ಟ್ರೋಲ್!

ಪುಷ್ಪ ಮೊದಲ ಪೋಸ್ಟರ್‌ ಮೂಲಕ ರಶ್ಮಿಕಾ ಟ್ರೋಲ್!

ನಟಿ ರಶ್ಮಿಕಾಗೂ ಟ್ರೋಲ್‌ಗೂ ಬಿಡದ ನಂಟಿದೆ. ಈ ಮೊದಲು ರಶ್ಮಿಕಾ ರಿಲೀಸ್‌ ಆಗಿದ್ದ ಪುಷ್ಪ ಚಿತ್ರದ ಮೊದಲ ಪೋಸ್ಟರ್‌ ಕೂಡ ಟ್ರೋಲ್‌ ಆಗಿತ್ತು. ರಶ್ಮಿಕಾ ಕನ್ನಡಿ ಹಿಡಿದು ಕಿವಿ ಓಲೆ ಹಾಕುತ್ತಿದ್ದ ಪೋಸ್ಟರ್‌ ಅದಾಗಿತ್ತು. ಆದರೆ ಆ ಪೋಸ್ಟರ್‌ನಲ್ಲಿದ್ದ ರಶ್ಮಿಕಾ ಲುಕ್‌ ಟ್ರೋಲ್ ಆಗಿತ್ತು. ಅದಕ್ಕೂ ಮೊದಲೂ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದ ತಮ್ಮ ಬಾಲ್ಯದ ಫೊಟೋವನ್ನು ಕೆಟ್ಟ ಕಮೆಂಟ್‌ಗಳಿಂದ ಟ್ರೋಲ್‌ ಮಾಡಲಾಗಿತ್ತು. ಆಗಲೂ ರಶ್ಮಿಕಾ ಕೆಂಡಾ ಮಂಡಲವಾಗಿದ್ದರು.

ಬೆಂಗಳೂರಿಗೆ ಬಂದು ಕನ್ನಡ ಮಾತನಾಡದೆ ಟ್ರೋಲ್!

ಬೆಂಗಳೂರಿಗೆ ಬಂದು ಕನ್ನಡ ಮಾತನಾಡದೆ ಟ್ರೋಲ್!

ಪುಷ್ಪ ಚಿತ್ರದ ಪ್ರಚಾರಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಆಗಮಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಆಕೆ ಕನ್ನಡ ಅಷ್ಟಾಗಿ ಮಾತನಾಡಿಲ್ಲ. ಜೊತೆಗೆ ಚಿತ್ರದ ಸಣ್ಣ ಡೈಲಾಗನ್ನು ಕನ್ನಡದಲ್ಲಿ ಹೇಳಲು ಕಷ್ಟ ಪಟ್ಟು ಹೇಳುವಂತೆ ಹೇಳಿದ್ದರು. ಹಾಗಾಗಿ ರಶ್ಮಿಕಾಳ ಈ ನಡೆಯನ್ನೂ ಕೂಡ ಕನ್ನಡಿಗರು ಪ್ರಶ್ನೆ ಮಾಡಿದ್ದರು. ಒಟ್ಟಾರೆ ರಶ್ಮಿಕಾ ಏನೇ ಮಾಡಿದರು ಟ್ರೋಲ್ ಮೂಲಕ, ವಿವಾದದ ಮೂಲಕ, ಸಿನಿಮಾಗಳ ಮೂಲಕ ಸುದ್ದಿಯಲ್ಲಿ ಇರುತ್ತಾರೆ.

More from Filmibeat

English summary
Rashmika Mandanna Reacts On Troll, She Questioned Trolls,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X