ಚಿತ್ರರಂಗಕ್ಕೆ ಬರಲು ಕಾರಣವಾದ ಘಟನೆ ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ
ದಕ್ಷಿಣ ಭಾರತ ಸಿನಿ ಉದ್ಯಮದ ಖ್ಯಾತ ನಟಿಯರಲ್ಲೊಬ್ಬರು ರಶ್ಮಿಕಾ ಮಂದಣ್ಣ. ತೆಲುಗಿನಲ್ಲಂತೂ ಬಹು ಬೇಡಿಕೆಯ ನಟಿ ಆಗಿದ್ದಾರೆ ಕನ್ನಡತಿ ರಶ್ಮಿಕಾ.
Recommended Video
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನಟಿ ರಶ್ಮಿಕಾ ಏರುತ್ತಿರುವ ಎತ್ತರ ಸಾಮಾನ್ಯವಾದುದಲ್ಲ. ತೆಲುಗಿನ ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಮೊದಲ ಆಯ್ಕೆ!
ಆದರೆ ರಶ್ಮಿಕಾ ಮಂದಣ್ಣ ಸಿನಿರಂಗಕ್ಕೆ ಬಂದಿದ್ದು ಹೇಗೆ? ರಶ್ಮಿಕಾ ಮಂದಣ್ಣ ಸಿನಿಮಾ ರಂಗಕ್ಕೆ ಬರಲು ಕಾರಣವಾದ ಘಟನೆ ಯಾವುದು?ಈ ಬಗ್ಗೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಇಂದು ಯಾವ ಸ್ಥಾನದಲ್ಲಿದ್ದಾರೋ ಆ ಸ್ಥಾನಕ್ಕೆ ಬರಲು ಬಹುಮುಖ್ಯ ಕಾರಣ ಆ ಒಂದು ಘಟನೆಯಂತೆ. ಅಂಥಹಾ ಅಪರೂಪದ ಘಟನೆಯ ಬಗ್ಗೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ, ಅಕ್ಷಯ್ ಕುಮಾರ್ ಜೊತೆಗಿರುವ ಚಿತ್ರ
ರಶ್ಮಿಕಾ ಮಂದಣ್ಣ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಜೊತೆ ತೆಗೆಸಿಕೊಂಡಿರುವ ಚಿತ್ರವೊಂದರ ಬಗ್ಗೆ ಅಭಿಮಾನಿಯೊಬ್ಬ ರಶ್ಮಿಕಾ ಮಂದಣ್ಣ ಅವರಿಗೆ ಪ್ರಶ್ನೆ ಕೇಳಿದ.

'ಚಿತ್ರರಂಗಕ್ಕೆ ಪ್ರವೇಶ ಮಾಡಲು ಕಾರಣವಾದ ಘಟನೆ ಅದು'
ಇದಕ್ಕೆ ಉತ್ತರಿಸಿದ ರಶ್ಮಿಕಾ ಮಂದಣ್ಣ, ನಾನು ಇಂದು ಏನಾಗಿದ್ದೇನೋ ಅದಕ್ಕೆ ಮೂಲ ಕಾರಣ ಆ ದಿನದ ಘಟನೆ ಎನ್ನುವ ಮೂಲಕ ಚಿತ್ರದ ಹಿಂದಿನ ಕತೆಯನ್ನು ಚುಟುಕಾಗಿ ಹೇಳಿದ್ದಾರೆ.

ಫ್ರೆಶ್ ಪೇಸ್ ಇಂಡಿಯಾ ವಿನ್ನರ್ ರಶ್ಮಿಕಾ ಮಂದಣ್ಣ
ಅಕ್ಷಯ್ ಕುಮಾರ್ ಅವರೊಟ್ಟಿಗೆ ತೆಗೆಸಿಕೊಂಡಿರುವ ಆ ಚಿತ್ರ, 2014 ರ 'ಫ್ರೆಶ್ ಫೇಸ್ ಇಂಡಿಯಾ' 2014 ಸೌಂದರ್ಯ ಸ್ಪರ್ಧೆಯದ್ದು. ಸ್ಪರ್ಧೆಯಲ್ಲಿ ಗೆದ್ದಿದ್ದ ರಶ್ಮಿಕಾ ಗೆ ಅಕ್ಷಯ್ ಕುಮಾರ್ ಮತ್ತು ರಾಣಾ ದಗ್ಗುಬಾಟಿ ಪ್ರಶಸ್ತಿ ನೀಡಿದ್ದರು.

ಕಿರಿಕ್ ಪಾರ್ಟಿ ಸಿನಿಮಾಕ್ಕೆ ಆಯ್ಕೆ ಆಗಲು ಮೂಲ ಕಾರಣ ಅದು
ಸ್ಪರ್ಧೆಯಲ್ಲಿ ಗಮನ ಸೆಳೆದಿದ್ದ ರಶ್ಮಿಕಾ ರನ್ನು ನಂತರ ಕಿರಿಕ್ ಪಾರ್ಟಿ ಸಿನಿಮಾಕ್ಕೆ ಆಯ್ಕೆ ಮಾಡಲಾಯಿತು. ಸಿನಿಮಾ ಬಿಡುಗಡೆ ಆದ ಬಳಿಕ ಆಗಿದ್ದು ಇತಿಹಾಸ. ಇಂದು ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಕನ್ನಡದಲ್ಲಿ ಬೇಡಿಕೆಯ ನಟಿ.


Click it and Unblock the Notifications











