ಪುನೀತ್‌ ರಾಜ್‌ಕುಮಾರ್‌ ನೆನೆದ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಪರಭಾಷೆ ಸಿನಿಮಾಗಳಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಬಾಲಿವುಡ್‌ನಲ್ಲೂ ಕಿರಿಕ್ ಬೆಡಗಿ ಕ್ರೇಜ್ ಜೋರಾಗಿದೆ. ಇದೆಲ್ಲದರ ನಡುವೆ ನಾನಾ ಕಾರಣಗಳಿಂದ ರಶ್ಮಿಕಾ ಟ್ರೋಲ್ ಆಗುತ್ತಿರುತ್ತಾರೆ.

ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಪೊಗರು' ನಂತರ ಯಾವುದೇ ಕನ್ನಡ ಸಿನಿಮಾ ಒಪ್ಪಿಕೊಂಡಿಲ್ಲ. ಕೆಲ ದಿನಗಳ ರಶ್ಮಿಕಾ ನಾನು ಇನ್ನು 'ಕಾಂತಾರ' ಸಿನಿಮಾ ನೋಡಿಲ್ಲ ಎಂದಿದ್ದು ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ಆ ಬಗ್ಗೆ ಪ್ರತಿಕ್ರಿಯಿಸಿದ್ದ ರಶ್ಮಿಕಾ ಸ್ಪಷ್ಟನೆ ನೀಡಿದ್ದರು. ಸಿನಿಮಾ ರಿಲೀಸ್ ಆದ 2 ದಿನಕ್ಕೆ ನೋಡಿದ್ರಾ ಎಂದು ಕೇಳಿದ್ದರು. ನಾನು ಇಲ್ಲ ಎಂದು ಹೇಳಿದ್ದೆ. ಅದಕ್ಕೆ ಏನೇನೋ ಸೇರಿಸಿ ಹೇಳಲಾಯಿತು. ನಾನು ಸಿನಿಮಾ ನೋಡಿ ಚಿತ್ರತಂಡಕ್ಕೆ ಮೆಸೇಜ್ ಮಾಡಿದ್ದೆ. ಅವರು ಕೂಡ ರಿಪ್ಲೇ ಮಾಡಿದ್ದರು ಎಂದು ವಿವರಿಸಿದ್ದರು.

ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ರಶ್ಮಿಕಾ ನಟಿಸಿದ್ದ 'ಅಂಜನಿಪುತ್ರ' ಸಿನಿಮಾ ಸಿನಿಮಾ 5 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕೊಡಗಿನ ಕುವರಿ ಮಾತನಾಡಿದ್ದಾರೆ.

ಅಪ್ಪು ನೆನೆದು ರಶ್ಮಿಕಾ ಟ್ವೀಟ್

ಅಪ್ಪು ನೆನೆದು ರಶ್ಮಿಕಾ ಟ್ವೀಟ್

"ಅಂಜನಿಪುತ್ರ ಚಿತ್ರಕ್ಕೆ 5 ವರ್ಷಗಳಾಯಿತು. ನಾನು ಪುನೀತ್ ರಾಜ್‌ಕುಮಾರ್ ಸರ್ ಜೊತೆ ನಡೆಸಿದ ಸಂಭಾಷಣೆ ಬಗ್ಗೆ ಸದಾ ಚಿಂತಿಸುತ್ತಿರುತ್ತೇನೆ. ಅಪ್ಪು ಸರ್ ನನಗಿಂತ ಹೆಚ್ಚು ನನ್ನ ಮೇಲೆ ವಿಶ್ವಾಸ ಹೊಂದಿದ್ದರು. ಒಳ್ಳೆಯ ಹೃದಯ ಇದ್ದ ವ್ಯಕ್ತಿ. ನನ್ನ ಹೃದಯದಲ್ಲಿ ಅವರು ಸದಾ ಇರುತ್ತಾರೆ. ಇಂತಹ ಅವಕಾಶ ಕೊಟ್ಟಿದ್ದಕ್ಕೆ ಹರ್ಷ ಸರ್‌ಗೆ ಧನ್ಯವಾದ" ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

ಬಾಕ್ಸಾಫೀಸ್‌ನಲ್ಲಿ 'ಅಂಜನಿಪುತ್ರ' ಹವಾ

ಬಾಕ್ಸಾಫೀಸ್‌ನಲ್ಲಿ 'ಅಂಜನಿಪುತ್ರ' ಹವಾ

ಎ. ಹರ್ಷ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಅಂಜನಿಪುತ್ರ' ಸಿನಿಮಾ 2017, ಡಿಸೆಂಬರ್ 21ರಂದು ತೆರೆಕಂಡಿತ್ತು. ತಮಿಳಿನ 'ಪೂಜೈ' ಸಿನಿಮಾ ರೀಮೆಕ್ ಆಗಿದ್ದ ಈ ಚಿತ್ರದಲ್ಲಿ ಅಪ್ಪು ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. 'ಚೆಂದ ಚೆಂದ' ಸಾಂಗ್‌ನಲ್ಲಿ ಇಬ್ಬರೂ ಮೋಡಿ ಮಾಡಿದ್ದರು. ರಮ್ಯಾಕೃಷ್ಣ, ಆರ್ಮುಗ ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ರವಿ ಬಸ್ರೂರು ಮ್ಯೂಸಿಕ್‌ನಲ್ಲಿ ಚಿತ್ರದ ಸಾಂಗ್ಸ್‌ ಕೂಡ ಸೂಪರ್ ಹಿಟ್ ಆಗಿತ್ತು.

ಅಪ್ಪು ಅಗಲಿಕೆಯ ನೋವು

ಅಪ್ಪು ಅಗಲಿಕೆಯ ನೋವು

ಪುನೀತ್ ರಾಜ್‌ಕುಮಾರ್ ನಿಧನರಾಗಿ ವರ್ಷ ಕಳೆದಿದೆ. ಆದರೆ ಅಪ್ಪು ಅಗಲಿಕೆಯ ನೋವು ಇನ್ನು ಕಾಡುತ್ತಲೇ ಇದೆ. ಈಗಲೂ ನೆಚ್ಚಿನ ನಟನನ್ನು ನೆನದರೆ ಅಭಿಮಾನಿಗಳ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಕಳೆದ ವರ್ಷ ಅಕ್ಟೋಬರ್ 29ರಂದು ಹೃದಯಾಘಾತ ಹಾಗೂ ಹೃದಯಸ್ತಂಭನದಿಂದ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಅಭಿಮಾನಿಗಳು ಪ್ರತಿದಿನ ಬಂದು ಸಮಾಧಿ ನಮನ ಸಲ್ಲಿಸುತ್ತಿದ್ದಾರೆ.

ನ್ಯಾಷನಲ್ ಕ್ರೇಜ್‌ಗೆ ಭಾರೀ ಕ್ರೇಜ್

ನ್ಯಾಷನಲ್ ಕ್ರೇಜ್‌ಗೆ ಭಾರೀ ಕ್ರೇಜ್

ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್ ಸಿನಿಮಾ 'ಮಿಷನ್ ಮಜ್ನು' ನೇರವಾಗಿ ಓಟಿಟಿಗೆ ಬರ್ತಿದೆ. ಇನ್ನು ರಣ್‌ಬೀರ್ ಕಪೂರ್ ಜೊತೆ 'ಅನಿಮಲ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ'- 2 ಚಿತ್ರದಲ್ಲಿ ಮತ್ತೆ ಶ್ರೀವಲ್ಲಿ ಆಗಿ ಮೋಡಿ ಮಾಡಲು ಬರ್ತಿದ್ದಾರೆ. ತಮಿಳು ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿರುವ 'ವಾರೀಸು' ಚಿತ್ರದಲ್ಲಿ ದಳಪತಿ ವಿಜಯ್ ಜೋಡಿಯಾಗಿ ಮಿಂಚಿದ್ದಾರೆ. ಈಗಾಗಲೇ ಆ ಚಿತ್ರದ ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.

More from Filmibeat

English summary
Rashmika Mandanna remembers Puneeth Rajkumar: He has the best heart, forever will be irreplaceable in my heart. Puneetha Rajkumar And Rashmika Mandanna Starrer anjaniputra Movie Completes 5 Years of ist Release. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X