'ದೊಡ್ಡ ಕೆಲಸಗಳು ಮಾಡುವ ಹುಡುಗಿಗೆ ಸಣ್ಣ ವಿಷಯಗಳು ತಲುಪಲ್ಲ'

ಸೌತ್ ಇಂಡಸ್ಟ್ರಿಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ಮಿಂಚಲು ಹೊರಟಿದ್ದಾರೆ. ಈಗಾಗಲೇ ಎರಡು ಪ್ರಾಜೆಕ್ಟ್‌ನಲ್ಲಿ ಕೊಡಗಿನ ಕುವರಿ ನಟಿಸುತ್ತಿರುವ ವಿಚಾರ ತಿಳಿದೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯರ ಪೈಕಿ ರಶ್ಮಿಕಾ ಸಹ ಒಬ್ಬರು.

ಕೆಲವೊಮ್ಮೆ ರಶ್ಮಿಕಾ ಸುಮ್ಮನಿದ್ದರೂ ಟ್ರೋಲ್‌ಗೆ ಒಳಗಾಗಿರುವ ಘಟನೆಗಳು ನಡೆದಿದೆ. ಕೆಲವು ವಿಚಾರಗಳಲ್ಲಿ ರಶ್ಮಿಕಾ ಪಾತ್ರ ಇರುವುದಿಲ್ಲ, ಆದರೂ ಆಕೆಯ ಹೆಸರು ಚರ್ಚೆಯಲ್ಲಿರುತ್ತದೆ. ಸಕ್ಸಸ್ ಹಿಂದೆ ಸವಾರಿ ಮಾಡುತ್ತಿರುವ ನಟಿಗೆ ಟೀಕೆಗಳು ಬೆನ್ನು ಬಿದ್ದಿದೆ. ಟೀಕೆಗಳಿಗೆ, ಕೆಟ್ಟದಾಗಿ ಟ್ರೋಲ್ ಮಾಡುವವರಿಗೆ ನೇರವಾಗಿ ಪ್ರತಿಕ್ರಿಯೆ ನೀಡದ ರಶ್ಮಿಕಾ ತಮ್ಮದೇ ರೀತಿಯಲ್ಲಿ ತಿರುಗೇಟು ಕೊಟ್ಟು ಮುಂದೆ ಹೋಗ್ತಿದ್ದಾರೆ. ಮುಂದೆ ಓದಿ...

ರಶ್ಮಿಕಾ ಈಗ ಸಖತ್ ಹಾಟ್

ರಶ್ಮಿಕಾ ಈಗ ಸಖತ್ ಹಾಟ್

ಇತ್ತೀಚಿಗಷ್ಟೆ ಹೊಸದೊಂದು ಫೋಟೋ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಹೆಚ್ಚು ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ಆಕರ್ಷಕವಾಗಿ, ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ರಶ್ಮಿಕಾ ಹಾಟ್ ಹಾಗೂ ರೊಮ್ಯಾಂಟಿಕ್ ಆಗಿ ಡ್ರೆಸ್ ಮಾಡುವುದು ಬಹಳ ಅಪರೂಪ. ಇದೀಗ, ಪೋಸ್ಟ್ ಮಾಡಿರುವ ಫೋಟೋ ಸಖತ್ ಹಾಟ್ ಆಗಿದೆ ಎಂದು ಫ್ಯಾನ್ಸ್ ಖುಷ್ ಆಗಿದ್ದಾರೆ.

ದೊಡ್ಡ ಕೆಲಸಗಳ ಮೇಲೆ ಗಮನ

ದೊಡ್ಡ ಕೆಲಸಗಳ ಮೇಲೆ ಗಮನ

''ದೊಡ್ಡ ಕೆಲಸಗಳನ್ನು ಮಾಡುವ ಹುಡುಗಿಗೆ, ಸಣ್ಣ ವಿಚಾರಗಳು ತಲುಪಲ್ಲ ಅಂತ ಯಾರೋ ಹೇಳಿದ್ದಾರೆ. ನನ್ನ ವಿಚಾರದಲ್ಲಿ ಇದು ಸೂಕ್ತವಾಗಿದೆ'' ಎಂದು ಆ ಪೋಸ್ಟ್‌ಗೆ ಕ್ಯಾಪ್ಷನ್ ಹಾಕಿದ್ದಾರೆ ರಶ್ಮಿಕಾ ಮಂದಣ್ಣ. ಈ ಮೂಲಕ ತನ್ನ ಏಳಿಗೆಯ ಕುರಿತು ಟೀಕಿಸುವವರ ವಿಷಯಕ್ಕೆ ನಾನು ಕಿವಿ ಕೊಡಲ್ಲ ಎಂದು ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.

ಮುಂಬೈಗೆ ಹೊರಟ ರಶ್ಮಿಕಾ

ಮುಂಬೈಗೆ ಹೊರಟ ರಶ್ಮಿಕಾ

ಕೋವಿಡ್ ಎರಡನೇ ಅಲೆ ಲಾಕ್‌ಡೌನ್ ಹಿನ್ನೆಲೆ ಮುಂಬೈ ಬಿಟ್ಟು ಹೈದರಾಬಾದ್‌ಗೆ ಹೋಗಿದ್ದ ರಶ್ಮಿಕಾ ಈಗ ವಾಣಿಜ್ಯ ನಗರಿಗೆ ವಾಪಸ್ ಆಗಿದ್ದಾರೆ. ಹಿಂತಿರುಗಿ ಬರುತ್ತಿದ್ದಂತೆ 'ಗುಡ್ ಬೈ' ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ನೀನಾ ಗುಪ್ತಾ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಿದ್ಧಾರ್ಥ್ ಮಲ್ಹೋತ್ರ ಜೊತೆ 'ಮಿಷನ್ ಮಜ್ನು' ಸಿನಿಮಾದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ.

Recommended Video

Sanchari Vijay ಗೆ ಅಕ್ಕಿ ತುಂಬೋದ್ರಲ್ಲು ಅವಾರ್ಡ್ ಕೊಡಬೇಕು ಅಂದಿದ್ರು ಸತೀಶ್ | Filmibeat Kannada
ಪುಷ್ಪ ತೆರೆಗೆ ಬರಬೇಕಿದೆ

ಪುಷ್ಪ ತೆರೆಗೆ ಬರಬೇಕಿದೆ

ಈ ಕಡೆ ಸೌತ್ ಇಂಡಸ್ಟ್ರಿಯಲ್ಲಿ ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಂಡಿರುವ 'ಪುಷ್ಪ' ಸಿನಿಮಾ ಮುಗಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಿಲೀಸ್ ಆಗಲಿದೆ ಎಂದು ಪ್ರಕಟಿಸಿದೆ. ಸದ್ಯಕ್ಕೆ ಕನ್ನಡದಲ್ಲಿ ರಶ್ಮಿಕಾ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ. ಪೊಗರು ಸಿನಿಮಾ ಕೊನೆಯ ಚಿತ್ರವಾಗಿತ್ತು.

More from Filmibeat

English summary
Kannada Actress Rashmika Mandanna shared romantic Photo in social media. now it goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X