»   » ಯಶ್- ಗಣೇಶ್ ನಂತರ ಡಿಸೆಂಬರ್ ಹಿಂದೆ ಬಿದ್ದ ರಶ್ಮಿಕಾ ಮಂದಣ್ಣ

ಯಶ್- ಗಣೇಶ್ ನಂತರ ಡಿಸೆಂಬರ್ ಹಿಂದೆ ಬಿದ್ದ ರಶ್ಮಿಕಾ ಮಂದಣ್ಣ

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗಕ್ಕೆ ಡಿಸೆಂಬರ್ ತುಂಬಾನೇ ಸ್ಪೆಷಲ್. ವರ್ಷದಿಂದ ಕಷ್ಟಪಟ್ಟು ಮಾಡಿದ ಚಿತ್ರಗಳನ್ನು ರಿಲೀಸ್ ಮಾಡಿ ಹೊಸ ಹೊಸ ಪ್ರಾಜೆಕ್ಟ್ ಗಳನ್ನು ಪ್ರಾರಂಭ ಮಾಡುವ ಉತ್ಸಾಹದಲ್ಲಿ ಇರ್ತಾರೆ ಸಿನಿಮಾಮಂದಿ. ಆದರೆ ಇನ್ನೂ ಕೆಲ ಕಲಾವಿದರಿಗೆ ತಮ್ಮ ಸಿನಿಮಾ ಡಿಸೆಂಬರ್ ನಲ್ಲೇ ರಿಲೀಸ್ ಆಗಬೇಕು. ವರ್ಷಾಂತ್ಯಕ್ಕೆ ಬಾಕ್ಸ್ ಆಫೀಸ್ ಧೂಳ್ ಮಾಡುವಂತಹ ಸಿನಿಮಾ ನಮ್ಮದೇ ಆಗಿರಬೇಕು ಎನ್ನುವ ಭಾವನೆ ಇರುತ್ತದೆ.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಾಕಿಂಗ್ ಸ್ಟಾರ್ ಯಶ್ ತಮ್ಮ ಸಿನಿಮಾಗಳನ್ನು ಡಿಸೆಂಬರ್ ನಲ್ಲೇ ಬಿಡುಗಡೆ ಮಾಡಿ ಯಶಸ್ಸು ಗಳಿಸಿದ್ದಾರೆ. ಅಷ್ಟೇ ಅಲ್ಲದೇ ವರ್ಷಾಂತ್ಯದಲ್ಲಿ ಬಿಡುಗಡೆಯಾದ ಹಲವಾರು ಸಿನಿಮಾಗಳು ಹಿಟ್ ಆಗಿದ್ದು, ಅದೇ ರೀತಿ ಬಾಕ್ಸ್ ಆಫೀಸ್ ನಲ್ಲಿ ಸೋತಿರುವ ಉದಾಹರಣೆಗಳು ಇವೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ಮಂದಣ್ಣ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರ ರಿಲೀಸ್ ಆಗಿತ್ತು. ಸಿನಿಮಾ ಕೂಡ ಭರ್ಜರಿ ಯಶಸ್ಸು ಕಂಡಿತ್ತು. ಜೊತೆಗೆ ರಷ್ಮಿಕಾ ಈ ಸಿನಿಮಾದಿಂದ ಕನ್ನಡ ಸೇರಿದಂತೆ ಅಕ್ಕ-ಪಕ್ಕದ ಇಂಡಸ್ಟ್ರಿ ಯಲ್ಲಿಯೂ ಬೇಡಿಕೆಯ ನಟಿಯಾದರು. ಅದೇ ರೀತಿ ರಷ್ಮಿಕಾಗೆ ಈ ಬಾರಿಯ ಡಿಸೆಂಬರ್ ಕೂಡ ಲಕ್ಕಿ ಆಗಿದೆ. ಮುಂದೆ ಓದಿ ...

ಯಶಸ್ಸಿನ ದಾರಿ ಡಿಸೆಂಬರ್ ನಲ್ಲಿ

ಸ್ಯಾಂಡಲ್ ವುಡ್ ನ ಸ್ಟಾರ್ ನಾಯಕರಿಗೆ ಡಿಸೆಂಬರ್ ತುಂಬ ಪ್ರಿಯವಾದ ತಿಂಗಳು. ಈ ತಿಂಗಳಲ್ಲಿ ಚಿತ್ರ ಬಿಡುಗಡೆಯಾದರೆ ಖಂಡಿತವಾಗಿಯೂ ಹಿಟ್ ಆಗುತ್ತದೆ ಎನ್ನುವ ನಂಬಿಕೆ ಸಾಕಷ್ಟು ಕಲಾವಿದರಿಗೆ ಇದೆ. ಸದ್ಯ ಸ್ಯಾಂಡಲ್ ವುಡ್ ನ ಸಾನ್ವಿಗೂ ಡಿಸೆಂಬರ್ ಅದೃಷ್ಟದಾಯಕವಾಗಿದೆ.

ಒಂದೇ ತಿಂಗಳಲ್ಲಿ ಮೂರು ಚಿತ್ರಗಳು

ನಟಿ ರಷ್ಮಿಕಾ ಮಂದಣ್ಣ ಅಭಿನಯದ ಮೂರು ಸಿನಿಮಾಗಳು ಮುಂದಿನ ತಿಂಗಳು (ಡಿಸೆಂಬರ್) ನಲ್ಲಿ ತೆರೆಗೆ ಬರುತ್ತಿವೆ. ಎರಡು ಕನ್ನಡ ಚಿತ್ರಗಳು ವಾರಗಳ ಅಂತರದಲ್ಲಿ ರಿಲೀಸ್ ಆಗುತ್ತಿವೆ. ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಅಭಿನಯದ 'ಚಮಕ್' ಮತ್ತು 'ಅಂಜನೀಪುತ್ರ' ಎರಡು ಸಿನಿಮಾಗಳು ತೆರೆಗೆ ಸಿದ್ಧವಾಗಿದೆ.

ಫಸ್ಟ್ ಲುಕ್ ನಲ್ಲೇ ಇಂಪ್ರೆಸ್ ಮಾಡಿರುವ ನಟಿ

ರಷ್ಮಿಕಾ ಅಭಿನಯದ ತೆಲುಗಿನ 'ಚಲೋ' ಚಿತ್ರ ಕೂಡ ಡಿಸೆಂಬರ್ 29ರಂದು ತೆರೆಗೆ ಬರಲಿದೆ. 'ಚಲೋ' ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕನ್ನಡದ ಸಾನ್ವಿಗೆ ಟಾಲಿವುಡ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ತೆಲುಗು ಚಿತ್ರರಂಗದಲ್ಲೂ ರಷ್ಮಿಕಾ ಭರವಸೆ ನಟಿಯಾಗಿ ಉಳಿದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಏನಿದು ಡಿಸೆಂಬರ್ ಜಾದು?

ಗಾಂಧಿನಗರದ ಮೂಲಗಳ ಪ್ರಕಾರ ಡಿಸೆಂಬರ್ ನಲ್ಲಿ ಹಿಟ್ ಪಡೆದುಕೊಳ್ಳುವುದು ದೊಡ್ಡ ಹಾಗೂ ವಿಭಿನ್ನತೆ ಇರುವ ಸಿನಿಮಾಗಳು ಮಾತ್ರ. ಹೊಸದಾಗಿರುವ ವಿಚಾರವನ್ನು ಪ್ರೇಕ್ಷಕರ ಮುಂದಿಟ್ಟರೆ ಜನರು ಒಪ್ಪಿಕೊಳ್ಳುತ್ತಾರೆ. ಇಯರ್ ಎಂಡ್ ಎನ್ನುವ ಕಾರಣಕ್ಕೆ ಒಂದಿಷ್ಟು ಪ್ರೇಕ್ಷಕರು ಥಿಯೇಟರ್ ಗಳಿಗೆ ಹೆಚ್ಚಾಗಿ ಬರುತ್ತಾರೆ .ಅದನ್ನು ಹೊರತು ಪಡಿಸಿದಂತೆ ಬೇರೇನು ಸೀಕ್ರೆಟ್ ಇಲ್ಲ ಅಂತಾರೆ.

English summary
'Kirik Party' fame actress Rashmika Mandanna's Anjaniputra, Chamak and Chalo movies are releasing in December.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada