ಮತ್ತೆ ಲಿಪ್ ಲಾಕ್: ಸಂಚಲನ ಸೃಷ್ಟಿಸಿದ ರಶ್ಮಿಕಾ-ವಿಜಯ್ 'ಡಿಯರ್ ಕಾಮ್ರೇಡ್'
Recommended Video

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯಿಸಿದ್ದ ತೆಲುಗು ಸಿನಿಮಾ 'ಗೀತಾ ಗೋವಿಂದಂ' ದೊಡ್ಡ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ ನಲ್ಲೂ ನೂರು ಕೋಟಿ ಕಲೆಕ್ಷನ್ ಮಾಡುವ ಮೂಲಕ ಸೌತ್ ಇಂಡಸ್ಟ್ರಿ ಅಭಿಮಾನಿಗಳ ಮೆಚ್ಚುಗೆ ಗಳಿಸಿಕೊಂಡಿತ್ತು.
ಈ ಚಿತ್ರ ಬಿಡುಗಡೆಗೂ ಮೊದಲು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವಿನ ಕಿಸ್ಸಿಂಗ್ ದೃಶ್ಯ ಲೀಕ್ ಆಗಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡಿದ್ದಲ್ಲದೇ ವೈಯಕ್ತಿಕವಾಗಿಯೂ ರಶ್ಮಿಕಾ ಜೀವನದಲ್ಲಿ ಪ್ರಭಾವ ಬೀರಿತು.
ಆಗತಾನೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ರಶ್ಮಿಕಾಗೆ ಈ ದೃಶ್ಯ ಯಾಕೆ ಬೇಕಿತ್ತು ಎಂದು ಪ್ರಶ್ನಿಸಿದವರು ಇದ್ದಾರೆ. ಬಟ್, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಶ್ಮಿಕಾ, ವಿಜಯ್ ದೇವರಕೊಂಡ ಜೊತೆ ಇನ್ನೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ರು. ಈ ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದ್ದು, ಇನ್ನೊಂದು ಕಿಸ್ಸಿಂಗ್ ಸೀನ್ ಸದ್ದು ಮಾಡ್ತಿದೆ. ಮುಂದೆ ಓದಿ....

ಮತ್ತೊಂದು ಕಿಸ್ಸಿಂಗ್ ದೃಶ್ಯ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಭಿನಯದ ಬಹುಭಾಷೆಯ ಚಿತ್ರ 'ಡಿಯರ್ ಕಾಮ್ರೇಡ್' ಟೀಸರ್ ರಿಲೀಸ್ ಆಗಿದ್ದು, ಇವರಿಬ್ಬರ ಕೆಮಿಸ್ಟ್ರಿ ನೋಡಿ ಚಿತ್ರ ಪ್ರೇಮಿಗಳು ಥ್ರಿಲ್ ಆಗಿದ್ದಾರೆ. ಈ ಟೀಸರ್ ನಲ್ಲೊಂದು ಕಿಸ್ಸಿಂಗ್ ದೃಶ್ಯವಿದ್ದು ಈ ಜೋಡಿ ಮತ್ತೆ ಸಂಚಲನ ಸೃಷ್ಟಿಸಿದೆ.

ರೋಮ್ಯಾಂಟಿಕ್ ದೃಶ್ಯ ಹೆಚ್ಚಿರಬಹುದು
ಟೀಸರ್ ನಲ್ಲಿರುವ ಈ ಒಂದು ಸೀನ್ ನೋಡಿಯೇ ಥ್ರಿಲ್ ಆಗಿರುವ ಅಭಿಮಾನಿಗಳು, 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಇಂತಹ ಸೀನ್ ಗಳು ಹೆಚ್ಚಿರಬಹುದು ಎಂಬ ಲೆಕ್ಕಾಚಾರ ಹಾಕ್ತಿದ್ದಾರೆ. ಮೊನ್ನೆಯಷ್ಟೇ ವಿಜಯ್ ಅವರನ್ನ ರಶ್ಮಿಕಾ ತಬ್ಬಿಕೊಂಡಿದ್ದ ಪೋಸ್ಟರ್ ಕೂಡ ಸಖತ್ ಬೋಲ್ಡ್ ಆಗಿತ್ತು.

ಇಬ್ಬರಿಗೆ ಸಿಕ್ತು ರೆಡ್ ಕಾರ್ಪೆಟ್ ಸ್ವಾಗತ
'ಗೀತಾ ಗೋವಿಂದಂ' ಅಂತಹ ಸೂಪರ್ ಹಿಟ್ ಚಿತ್ರದ ನಂತರ ಮತ್ತೆ ಬರ್ತಿರುವ ಈ ಜೋಡಿಗೆ ಅಭಿಮಾನಿಗಳಿಗೆ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿದೆ. ಟೀಸರ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದು, ಡಿಯರ್ ಕಾಮ್ರೇಡ್ ಕೂಡ ದೊಡ್ಡ ಹಿಟ್ ಆಗುತ್ತೆ ಎಂಬ ಮಾತುಗಳನ್ನಾಡುತ್ತಿದ್ದಾರೆ.

ಕನ್ನಡಕ್ಕೂ ಎಂಟ್ರಿ ಕೊಟ್ಟ ವಿಜಯ್
ಅಂದ್ಹಾಗೆ, ಡಿಯರ್ ಕಾಮ್ರೇಡ್ ಸಿನಿಮಾ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ವಿಜಯ್ ದೇವರಕೊಂಡ ಅಧಿಕೃತವಾಗಿ ಎಂಟ್ರಿ ಕೊಟ್ಟಂತಾಗಿದೆ. ಮೂಲತಃ ತೆಲುಗಿನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನ ಕನ್ನಡದಲ್ಲೂ ಡಬ್ ಮಾಡಿ ತೆರೆಗೆ ತರಲಿದ್ದಾರೆ.


Click it and Unblock the Notifications











