For Quick Alerts
  ALLOW NOTIFICATIONS  
  For Daily Alerts

  ಭಾವಿ ಅಳಿಯ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕೊಟ್ಟ ದುಬಾರಿ ಉಡುಗೊರೆ ಏನ್ಗೊತ್ತೇ.?

  By Harshitha
  |

  ಇಷ್ಟು ದಿನ 'ಸುಳ್ಳು... ಸುಳ್ಳು' ಎನ್ನುತ್ತಿದ್ದ ಸಂಗತಿಯೊಂದು ಇಂದು ಸತ್ಯವಾಗಿದೆ. ಕಡೆಗೂ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ತಮ್ಮ 'ಲವ್ ಸ್ಟೋರಿ'ಯನ್ನ ಬಾಯ್ಬಿಟ್ಟಿದ್ದಾರೆ.

  ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಎಲಿಜಿಬಲ್ ಬಾಚ್ಯುಲರ್ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಮನದೊಡತಿ ರಶ್ಮಿಕಾ ಮಂದಣ್ಣ ಜೊತೆಗೆ ವಿವಾಹವಾಗಲು ನಟ ರಕ್ಷಿತ್ ಶೆಟ್ಟಿ ನಿರ್ಧರಿಸಿದ್ದಾರೆ.[ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ರಶ್ಮಿಕಾ ಬಾಯಿಂದ ಹೊರಬಂತು 'ದೊಡ್ಡ' ಸತ್ಯ.!]

  ಇಂದು ನಟ ರಕ್ಷಿತ್ ಶೆಟ್ಟಿ ರವರ 34ನೇ ಹುಟ್ಟುಹಬ್ಬ. ಜನ್ಮದಿನದ ಸಡಗರದಲ್ಲಿರುವಾಗಲೇ, ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ರವರ ಮದುವೆ ಮ್ಯಾಟರ್ ಕೂಡ 'ಅಫೀಶಿಯಲ್' ಆಗಿದೆ. ಇದೇ ಖುಷಿಯಲ್ಲಿ ಭಾವಿ ಅಳಿಯನಿಗೆ (ರಕ್ಷಿತ್) ರಶ್ಮಿಕಾ ತಂದೆ (ಭಾವಿ ಮಾವ) ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ. ಮುಂದೆ ಓದಿರಿ...

  ಭಾವಿ ಅಳಿಯನಿಗೆ ದುಬಾರಿ ಉಡುಗೊರೆ

  ಭಾವಿ ಅಳಿಯನಿಗೆ ದುಬಾರಿ ಉಡುಗೊರೆ

  ಭಾವಿ ಅಳಿಯ ರಕ್ಷಿತ್ ಶೆಟ್ಟಿ ರವರಿಗೆ ರಶ್ಮಿಕಾ ಮಂದಣ್ಣ ತಂದೆ ದುಬಾರಿ ಕಡಗವನ್ನು ಉಡುಗೊರೆಯಾಗಿ ನೀಡಿದ್ದಾರೆ.

  ಫೋಟೋ ಗಮನಿಸಿದ್ರಾ.?

  ಫೋಟೋ ಗಮನಿಸಿದ್ರಾ.?

  ಇಂದು ನಟಿ ರಶ್ಮಿಕಾ ಮಂದಣ್ಣ ತಮ್ಮ ಅಫೀಶಿಯಲ್ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿರುವ ಫೋಟೋ ನೋಡಿದ್ರಾ.? ಇಲ್ಲಾಂದ್ರೆ, ಮತ್ತೊಮ್ಮೆ ಗಮನಿಸಿ... ರಶ್ಮಿಕಾ ತಂದೆ ರಕ್ಷಿತ್ ಕೈಗೆ ಕಡಗ ತೊಡಿಸುತ್ತಿರುವುದು ಕ್ಯಾಮರಾ ಕಂಗಳಲ್ಲಿ ಸೆರೆ ಆಗಿದೆ.

  ಕುಟುಂಬಕ್ಕೆ ಸ್ವಾಗತ

  ಕುಟುಂಬಕ್ಕೆ ಸ್ವಾಗತ

  ''ನಾನು ಭೇಟಿ ಮಾಡಿರುವ ಅತಿ ವಿನಮ್ರ ವ್ಯಕ್ತಿಯಾದ ರಕ್ಷಿತ್ ಶೆಟ್ಟಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನೀವು ಪ್ರಯತ್ನ ಪಡದೆ ಇದ್ದರೂ ಜನ ನಿಮ್ಮನ್ನು ಪ್ರೀತಿಸುತ್ತಾರೆ. ಅದರಲ್ಲಿ ನನ್ನ ತಂದೆ-ತಾಯಿ ಕೂಡ ಒಬ್ಬರು. ನಮ್ಮ ಪುಟಾಣಿ ಪರಿವಾರಕ್ಕೆ ನಿಮಗೆ ಆತ್ಮೀಯ ಸ್ವಾಗತ'' ಎಂದು ಫೇಸ್ ಬುಕ್ ನಲ್ಲಿ ತಮ್ಮ ತಂದೆ ರಕ್ಷಿತ್ ಗೆ ಕಡಗ ತೊಡಿಸುತ್ತಿರುವ ಫೋಟೋ ಸಮೇತ ನಟಿ ರಶ್ಮಿಕಾ ಮಂದಣ್ಣ ಬರ್ತಡೇ ಬಾಯ್ ರಕ್ಷಿತ್ ಶೆಟ್ಟಿಗೆ ವಿಶ್ ಮಾಡಿದ್ದಾರೆ.

  ಜುಲೈ 3 ರಂದು ನಿಶ್ಚಿತಾರ್ಥ

  ಜುಲೈ 3 ರಂದು ನಿಶ್ಚಿತಾರ್ಥ

  ನಟ ರಕ್ಷಿತ್ ಶೆಟ್ಟಿ ರವರೇ ಬಾಯ್ಬಿಟ್ಟ ಪ್ರಕಾರ, ಜುಲೈ 3 ರಂದು ಕೊಡಗಿನಲ್ಲಿರುವ ರಶ್ಮಿಕಾ ಮನೆಯಲ್ಲಿ ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಲಿದೆ.[ಅಂತೂ 'ಸುಳ್ಳು' ನಿಜ ಆಯ್ತು: ಜುಲೈ 3 ರಂದು ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ನಿಕ್ಕಿ ಆಯ್ತು]

  ಮದುವೆ ಯಾವಾಗ.?

  ಮದುವೆ ಯಾವಾಗ.?

  ರಕ್ಷಿತ್ ಹಾಗೂ ರಶ್ಮಿಕಾ ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳೆಲ್ಲವೂ ಮುಗಿದ ಬಳಿಕ ಇಬ್ಬರ ವಿವಾಹ ಮಹೋತ್ಸವ ನಡೆಯಲಿದೆ.

  ರಕ್ಷಿತ್ ಶೆಟ್ಟಿ ಏನಂತಾರೆ.?

  ರಕ್ಷಿತ್ ಶೆಟ್ಟಿ ಏನಂತಾರೆ.?

  ''ಮೀಡಿಯಾಗಳಲ್ಲಿ ನಮ್ಮಿಬ್ಬರ ಬಗ್ಗೆ ಸುದ್ದಿ ಆಗುತ್ತಿದ್ದಾಗ, ಮದುವೆ ಬಗ್ಗೆ ಯೋಚನೆ ಮಾಡಿರಲಿಲ್ಲ. ಸುದ್ದಿ ಪ್ರಸಾರ ಆದ್ಮೇಲೆ, ನಾನೇ ರಶ್ಮಿಕಾ ಕುಟುಂಬದ ಜೊತೆ ಮಾತನಾಡಿದೆ. ಮೀಡಿಯಾಗಳಲ್ಲಿ ಇನ್ನೂ ಹೆಚ್ಚು ಸುದ್ದಿ ಆಗುವ ಮೊದಲು 'ಅಫೀಶಿಯಲ್' ಮಾಡಿಕೊಳ್ಳೋಣ ಎಂಬ ನಿರ್ಧಾರಕ್ಕೆ ಬಂದ್ವಿ. ಮುಂದಿನ ತಿಂಗಳು ನಿಶ್ಚಿತಾರ್ಥ. ಮದುವೆ ಸದ್ಯಕ್ಕೆ ಇಲ್ಲ'' ಎನ್ನುತ್ತಾರೆ ನಟ ರಕ್ಷಿತ್ ಶೆಟ್ಟಿ.

  'ಕಿರಿಕ್' ಜೋಡಿಗೆ ಶುಭಾಶಯಗಳು

  'ಕಿರಿಕ್' ಜೋಡಿಗೆ ಶುಭಾಶಯಗಳು

  ಅಂತೂ 'ಕಿರಿಕ್' ಜೋಡಿಯ 'ನಿಜ'ವಾದ ಲವ್ ಸ್ಟೋರಿ ಸಕ್ಸಸ್ ಆಗಿದೆ. ಹೊಸ ಜೀವನ ಆರಂಭಿಸಲು ಹೊರಟಿರುವ ರಕ್ಷಿತ್ ಹಾಗೂ ರಶ್ಮಿಕಾ ರವರಿಗೆ ನಮ್ಮ ಕಡೆಯಿಂದಲೂ ಶುಭಾಶಯಗಳು.

  ಹ್ಯಾಪಿ ಬರ್ತಡೇ ರಕ್ಷಿತ್ ಶೆಟ್ಟಿ

  ಹ್ಯಾಪಿ ಬರ್ತಡೇ ರಕ್ಷಿತ್ ಶೆಟ್ಟಿ

  ಇಂದು 34 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ರಕ್ಷಿತ್ ಶೆಟ್ಟಿ ರವರಿಗೆ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹಾರ್ದಿಕ ಶುಭಾಶಯಗಳು.

  English summary
  In pic: Kannada Actress Rashmika Mandanna's Father gifts 'Kadaga' to Future Son-in-law Rakshit Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X