ಪುಷ್ಪ 2: ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರಕ್ಕೆ ಕತ್ತರಿ!
ನಟಿ ರಶ್ಮಿಕಾ ಮಂದಣ್ಣ ಕರುನಾಡ ಕ್ರಶ್ ಎನ್ನುವ ಟೈಟಲ್ ನಿಂದ, ನ್ಯಾಷನಲ್ ಕ್ರಾಶ್ ಎನ್ನುವ ಟೈಟಲ್ ಪಡೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ನೋಡ ನೋಡುತ್ತಿದ್ದಂತೆಯೇ ತಮ್ಮ ಸಿನಿಮಾ ಜರ್ನಿಯಲ್ಲಿ ಉತ್ತುಂಗಕ್ಕೇರಿದ್ದಾರೆ. ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಸಿನಿಮಾ ವೃತ್ತಿ ಪ್ರಾರಂಭಿಸಿದ ರಶ್ಮಿಕಾ ಮಂದಣ್ಣ ಇದೀಗ ನ್ಯಾಷನಲ್ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.
ಕನ್ನಡ ಬಿಟ್ಟು ಪರಭಾಷೆಗೆ ಹಾರಿದ ರಶ್ಮಿಕ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ತೆಲುಗಿನ 'ಚಲೋ' ಚಿತ್ರದ ಮೂಲಕ ನಾಯಕಿಯಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ರಶ್ಮಿಕಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.
ತೆಲುಗಿನ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ ರಶ್ಮಿಕಾ ಮಂದಣ್ಣಗೆ, ದೊಡ್ಡ ಬ್ರೇಕ್ ಕೊಟ್ಟಿದ್ದು 'ಪುಷ್ಪ'. ಈ ಚಿತ್ರದಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಎಲ್ಲರ ಮನಗೆದ್ದಿದ್ದಾರೆ. ಹಾಗಾಗಿ 'ಪುಷ್ಪ 2' ಚಿತ್ರದಲ್ಲೂ ಕೂಡ ರಶ್ಮಿಕಾ ಮಂದಣ್ಣ ಇರಲಿದ್ದಾರೆ. ಆದರೆ 'ಪುಷ್ಪ 2' ವಿಚಾರದಲ್ಲಿ ರಶ್ಮಿಕಾ ಫ್ಯಾನ್ಸ್ ಬೇಸರ ಆಗುವ ವಿಚಾರ ಒಂದು ಬಂದಿದೆ.
Recommended Video


'ಪುಷ್ಪ 2'ನಲ್ಲಿ ಅಲ್ಲು ಅರ್ಜುನ್ ಅಬ್ಬರ!
ಸದ್ಯ 'ಪುಷ್ಪ 2' ಸಿನಿಮಾದ ಕೆಲಸಗಳು ಭರದಿಂದ ಸಾಗಿವೆ. ಈಗಾಗಲೇ 'ಪುಷ್ಪ' ಮೊದಲ ಭಾಗದ ಚಿತ್ರೀಕರಣ ಮಾಡುವಾಗ 'ಪುಷ್ಪ 2'ಗಾಗಿ ಒಂದಷ್ಟು ಚಿತ್ರೀಕರಣವನ್ನು ಮುಗಿಸಿತ್ತು ಚಿತ್ರತಂಡ. ಆದರೆ 'ಪುಷ್ಪ' ಸೂಪರ್ ಹಿಟ್ಟಾದ ಕಾರಣಕ್ಕೆ 'ಪುಷ್ಪ 2' ಚಿತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಚಿತ್ರೀಕರಣ ಮಾಡಲಾಗುತ್ತಿದೆ. 'ಪುಷ್ಪ 2' ಸಿನಿಮಾ ಅಲ್ಲು ಅರ್ಜುನ ಒನ್ ಮ್ಯಾನ್ ಶೋ ಆಗಿರಲಿದೆ. ಇಲ್ಲಿ ಪುಷ್ಪ ರಾಜ್ ಹೇಗೆ ಹಂತ ಹಂತವಾಗಿ ಬೆಳೆಯುತ್ತಾ ಹೋಗುತ್ತಾನೆ ಹೇಗೆ ತನ್ನ ಯಶಸ್ಸಿನ ದಾರಿಯನ್ನು ಮುಂದುವರೆಸುತ್ತಾನೆ ಎನ್ನುವ ಅಂಶಗಳು ಇರುತ್ತವೆ.

ಶ್ರೀವಲ್ಲಿ ಪಾತ್ರಕ್ಕೆ ಬಿತ್ತು ಕತ್ತರಿ!
ಇಡೀ ಸಿನಿಮಾದಲ್ಲಿ ಪುಷ್ಪರಾಜ್ ಅಬ್ಬರವೇ ಹೆಚ್ಚಾಗಿ ಇರಲಿದೆ. ಇದೇ ಕಾರಣಕ್ಕೆ 'ಪುಷ್ಪ 2' ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಪಾತ್ರವನ್ನು ಕಡಿತಗೊಳಿಸಲಾಗಿದೆ. ಅಂದರೆ ರಶ್ಮಿಕಾ ಮಂದಣ್ಣ ಮೊದಲ ಭಾಗದ ಹಾಗೆ ಈ ಚಿತ್ರದಲ್ಲಿ ಹೆಚ್ಚಾಗಿ ಇರುವುದಿಲ್ಲ. ಶ್ರೀವಲ್ಲಿ ಪಾತ್ರವನ್ನು ಬಹುತೇಕವಾಗಿ ನಿರ್ದೇಶಕರು ಕಡಿತಗೊಳಿಸಿದ್ದಾರೆ. ಹಾಗಾಗಿ ಪುಷ್ಪ 2 ಸಿನಿಮಾದಲ್ಲಿ ಹೆಚ್ಚು ಕಾಲ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಮಿಂಚುವುದಿಲ್ಲ. ಅವಶ್ಯಕ ಎನಿಸುವಂತಹ ಸನ್ನಿವೇಶಗಳಲ್ಲಿ ಮಾತ್ರ ಶ್ರೀವಲ್ಲಿಯ ಪಾತ್ರ ಬಂದು ಹೋಗುತ್ತದೆ.

ಕ್ಲೈಮಾಕ್ಸ್‌ನಲ್ಲಿ ಶ್ರೀವಲ್ಲಿ ಸತ್ತು ಹೋಗುತ್ತಾಳೆ!
'ಪುಷ್ಪ 2' ಚಿತ್ರದ ಕ್ಲೈಮಾಕ್ಸ್ ಏನು ಎನ್ನುವುದು ಕೂಡ ರಿವೀಲ್ ಆಗಿದೆ. ರಶ್ಮಿಕಾ ಮಂದಣ್ಣ ಪಾತ್ರ ಅಂದರೆ ಶ್ರೀವಲ್ಲಿಯನ್ನು ಬಳಸಿಕೊಂಡು ಪುಷ್ಪ ರಾಜ್‌ನನ್ನು ಹಿಡಿಯಲು ವಿಲನ್‌ಗಳು ಹೊಂಚು ರೂಪಿಸುತ್ತಾರೆ. ಈ ಗದ್ದಲದಲ್ಲಿ ಶ್ರೀವಲ್ಲಿ ವೈರಿಗಳ ಕೈಯಲ್ಲಿ ಸತ್ತು ಹೋಗುತ್ತಾಳೆ. ರಶ್ಮಿಕಾ ಮಂದಣ್ಣ ಪಾತ್ರ ಈ ಚಿತ್ರದಲ್ಲಿ ಟ್ರ್ಯಾಜಿಡಿಯಾಗಿ ಅಂತ್ಯವಾಗಲಿದೆಯಂತೆ. ಶ್ರೀವಲ್ಲಿ ಸಾವಿನ ನಂತರ ವಿಲನ್ ಮತ್ತು ಹೀರೋ ನಡುವಿನ ಕ್ಲೈಮಾಕ್ಸ್ ದೃಶ್ಯಗಳ ಇರುತ್ತವೆಯಂತೆ.

ಹೇಗಿರಲಿದ್ದಾನೆ ಪುಷ್ಪ ರಾಜ್?
ಸದ್ಯದ ಮಾಹಿತಿಯ ಪ್ರಕಾರ ಈ ಚಿತ್ರದಲ್ಲಿ, ಪುಷ್ಪ ರಾಜ್ ತನ್ನ ವ್ಯವಹಾರವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತಾನೆ. ಸೌತ್ ಏಷ್ಯಾ ದೇಶಗಳವರೆಗೂ ಕೂಡ ಈ ರಕ್ತಚಂದನ ಸ್ಮಗ್ಲಿಂಗ್ ವ್ಯವಹಾರ ಕೊಂಡೊಯ್ಯುತ್ತಾನೆ. ಜೊತೆಗೆ ವೈರಿಗಳನ್ನು ಮಟ್ಟ ಹಾಕುತ್ತಾನೆ ಎನ್ನಲಾಗಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಹೊರತುಪಡಿಸಿದರೆ ಚಿತ್ರದಲ್ಲಿ ಫಹಾದ್ ಫಾಸಿಲ್ ಮತ್ತು ಅನುಸೂಯ ಭಾರದ್ವಾಜ್ ಪಾತ್ರಗಳು ಚಿತ್ರದುದ್ದಕ್ಕೂ ಇರಲಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷ ಡಿಸೆಂಬರ್ ನಲ್ಲಿ 'ಪುಷ್ಪ 2' ಸಿನಿಮಾ ರಿಲೀಸ್ ಆಗಲಿದೆ.


Click it and Unblock the Notifications











