ಒಂದು ಕಾಲದಲ್ಲಿ 'ರೆಬೆಲ್' ಆಗಿದ್ದರಂತೆ ನಟಿ ರಶ್ಮಿಕಾ ಮಂದಣ್ಣ
ಸದಾ ಕಾಲ ಸಿನಿಮಾ ಚಿತ್ರೀಕರಣಗಳಲ್ಲಿ ಬಿಜಿಯಾಗಿರುತ್ತಿದ್ದ ನಟಿ ರಶ್ಮಿಕಾ ಮಂದಣ್ಣ, ಲಾಕ್ ಡೌನ್ ಅವಧಿಯಲ್ಲಿ ಸಂಪೂರ್ಣವಾಗಿ ಕೊಡಗಿನಲ್ಲಿರುವ ತಮ್ಮ ಕುಟುಂಬದೊಂದಿಗೆ ಕಳೆದಿದ್ದಾರೆ. ಇಷ್ಟು ಸುದೀರ್ಘ ಸಮಯ ನಿರಂತರವಾಗಿ ಮನೆಯವರೊಂದಿಗೆ ಕಾಲ ಕಳೆದಿದ್ದೇ ಇಲ್ಲ ಎಂದು ರಶ್ಮಿಕಾ ತಿಳಿಸಿದ್ದಾರೆ.
Recommended Video
ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದ ರಶ್ಮಿಕಾ ಅದಕ್ಕೆ ಪುಟ್ಟದಾಗಿ ಕ್ಯಾಪ್ಷನ್ ಹಾಕುತ್ತಿದ್ದರು. ಇತ್ತೀಚೆಗೆ ಫೋಟೊಗಳ ಜತೆ ಸುದೀರ್ಘ ಬರಹವನ್ನೂ ಬರೆಯುತ್ತಿದ್ದಾರೆ. ತಮ್ಮ ಜೀವನದ ಅನುಭವಗಳು, ಅನಿಸಿಕೆಗಳನ್ನು ಬರಹದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಅವರ ಬರಹಗಳಲ್ಲಿನ ಭಾವಗಳು ಅಭಿಮಾನಿಗಳಿಗೆ ಇಷ್ಟವಾಗುತ್ತಿವೆ.
ಮನೆಯಲ್ಲಿ ಅಪ್ಪ-ಅಮ್ಮ ಹಾಗೂ ತಂಗಿಯ ಜತೆಗೆ ಅಮೂಲ್ಯ ಸಮಯ ಕಳೆಯುತ್ತಿರುವ ರಶ್ಮಿಕಾ, ತಮ್ಮ ಬಾಲ್ಯದ ಜೀವನ ಹಾಗೂ ಈಗಿನ ತರಾತುರಿಯ ಬದುಕಿನ ಕುರಿತು ಬರೆದಿದ್ದಾರೆ. ಮುಂದೆ ಓದಿ...

ಮ್ಯಾರಥಾನ್ ಬದುಕು
'18ನೇ ವರ್ಷಕ್ಕೆ ಕಾಲಿರಿಸಿದ್ದಾಗಿನಿಂದ ನನ್ನ ಬದುಕು ಮ್ಯಾರಥಾನ್ ರೀತಿ ಆಗಿದೆ. ಓಟದಲ್ಲಿ ಕೊನೆಯ ಗುರಿ ಮುಟ್ಟಿದೆ ಎಂದು ಯೋಚಿಸುವಾಗಲೇ ಮತ್ತೊಮ್ಮೆ ರೇಸ್ ಶುರುವಾಗುತ್ತಿದೆ. ನಾನು ಇದರ ಬಗ್ಗೆ ಆರೋಪ ಮಾಡುತ್ತಿಲ್ಲ. ಏಕೆಂದರೆ ಇದನ್ನೇ ಯಾವಾಗಲೂ ಬಯಸುತ್ತಿದ್ದೆ. ಪ್ರಾಮಾಣಿಕವಾಗಿ ಹೇಳುವುದಾದರೆ ನನ್ನ ಜೀವನದಲ್ಲಿ ಇಷ್ಟೊಂದು ಸುದೀರ್ಘ ಕಾಲ ನಾನು ಮನೆಯಲ್ಲಿ ಇರಲೇ ಇಲ್ಲ' ಎಂದು ರಶ್ಮಿಕಾ ತಿಳಿಸಿದ್ದಾರೆ.

ನಾನೇ ರೆಬೆಲ್ ಆಗಿದ್ದೆ
'ಶಾಲೆಯಿಂದ ಉನ್ನತ ಶಿಕ್ಷಣದವರೆಗೂ ನಾನು ಯಾವಾಗಲೂ ಹಾಸ್ಟೆಲ್‌ನಲ್ಲಿಯೇ ಇರುತ್ತಿದ್ದೆ. ನನ್ನ ಪೋಷಕರು ಬಹಳ ಸ್ಟ್ರಿಕ್ಟ್ ಎಂದು ಹಲವು ಬಾರಿ ಅಂದುಕೊಂಡಿದ್ದೆ. ಆದರೆ ವಾಸ್ತವವಾಗಿ ತಾರುಣ್ಯದಲ್ಲಿ ನಾನೇ ರೆಬೆಲ್ ಆಗಿದ್ದವಳು' ಎಂದು ರಶ್ಮಿಕಾ ಹೇಳಿದ್ದಾರೆ.

ಸುದೀರ್ಘ ಸಮಯ ಮನೆಯಲ್ಲಿ
ಚಿತ್ರೀಕರಣದ ವೇಳೆ ರಾತ್ರಿಯಿಡೀ ಅಮ್ಮ ನನ್ನ ಜತೆಗೇ ಸೆಟ್‌ನಲ್ಲಿ ಇರುತ್ತಿದ್ದ ದಿನಗಳು ನೆನಪಾಗುತ್ತಿವೆ. ನನ್ನ ತಂದೆ ಕೊನೆಯಲ್ಲಿ ಕುಟುಂಬದ ಜತೆ ಒಂದಷ್ಟು ಸಮಯ ಕಳೆಯುತ್ತಿದ್ದರು. ಈ ಲಾಕ್ ಡೌನ್ ಸಮಯದಲ್ಲಿ ತನ್ನ ಸುತ್ತಲೂ ನಡೆಯುತ್ತಿರುವ ಘಟನೆಗಳೊಂದಿಗೆ ಸಹಕರಿಸಲು ನನ್ನ ಪುಟ್ಟ ತಂಗಿ ಪ್ರಯತ್ನಿಸುತ್ತಿದ್ದಾಳೆ. ಎರಡು ತಿಂಗಳಿಗೂ ಹೆಚ್ಚು ಸಮಯವನ್ನು ಕಳೆದೆ. ಇದು ಬಹಳ ಸುದೀರ್ಘ ಸಮಯ. ಈ ಸಮಯದಲ್ಲಿ ನಾನು ಕೆಲಸದ ಕುರಿತು ಹೆಚ್ಚು ಮಾತನಾಡಲಿಲ್ಲ. ಅವರೆಲ್ಲರ ಕಾಳಜಿ ಇದ್ದದ್ದು ನನ್ನ ಮೇಲೆ. ಎಲ್ಲವನ್ನೂ ಎದುರಿಸಲು ಅವರು ನನಗೆ ಶಕ್ತಿ ತುಂಬಿದ್ದಾರೆ. ಇದು ನನ್ನ ಖುಷಿಯ ಅವಧಿ.

ಮನೆಯಲ್ಲಿ ಬಹಳ ನೆಮ್ಮದಿ
ಮನೆಯಲ್ಲಿಯೇ ಇದ್ದಾಗ ಪ್ರಶಾಂತ, ಸಂತೋಷ ಮತ್ತು ನೆಮ್ಮದಿ ಇರುತ್ತದೆ ಎಂದು ನಾನು ಎಂದಿಗೂ ಯೋಚಿಸಿಯೇ ಇರಲಿಲ್ಲ. ಆದರೆ ನಂಬಿ, ಕುಟುಂಬ ಎಂದರೆ ಮನೆ. ಸುದೀರ್ಘ ಕಾಲದ ಕೆಲಸದ ನಂತರ ಮನೆಗೆ ಮರಳಿದ್ದರೆ ಬಹುದೊಡ್ಡ ಶಾಂತಿಯ ಅನುಭವ ಸಿಗುತ್ತದೆ ಎಂದು ರಶ್ಮಿಕಾ ಬರೆದಿದ್ದಾರೆ.


Click it and Unblock the Notifications











